fbpx
ಸಮಾಚಾರ

‘ಅವಳಿಗೆ ಅವಳ ತಪ್ಪಿನ ಅರಿವಾಗಿದೆ…’! ಸೋನು ವೈರಲ್ ವಿಡಿಯೋ ಲೀಕ್ ಕುರಿತು ಪ್ರತಿಕ್ರಿಯೆ ನೀಡಿದ ಸ್ಫೂರ್ತಿ ಗೌಡ

ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ 3 ವಾರಗಳು ಕಳೆಯುತ್ತಾ ಬಂದಿದೆ. ಮನೆಯಿಂದ ಒಬೊಬ್ಬ ಸ್ಪರ್ಧಿ ಹೊರಗೆ ಬರುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಜನರ ಗಮನ ಸೆಳೆದಿದ್ದು ಎಂದರೆ ಅದು ರಾಕೇಶ್, ಸೋನು ಮತ್ತು ಸ್ಫೂರ್ತಿ ಅವರ ಜೋಡಿ. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಫೂರ್ತಿ ಗೌಡ ಮೊದಲನೆಯ ಬಾರಿಗೆ ಸೋನು ಅವರ ವೈರಲ್ ವಿಡಿಯೋ ಕುರಿತು ಮಾತನಾಡಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮ ಶುರುವಾದಾಗ ಮನೆಮಂದಿಗೆ ಬಿಗ್ ಬಾಸ್ ‘ನಾನು ಯಾರು’ ಎಂಬ ಟಾಸ್ಕ್ ನೀಡಿದ್ದರು. ಅದೇನೆಂದರೆ ಮನೆ ಮಂದಿ ತಮ್ಮ ಜೀವನದ ಕುರಿತು ಜನರಿಗೆ ತಿಳಿಸಬೇಕೆಂದು. ಹೀಗಾಗಿ ಮನೆಯ ಎಲ್ಲಾ ಸದಸ್ಯರು ತಮ್ಮ ಜೀವನದ ಸಿಹಿ ಹಾಗು ಕಹಿ ಘಟನೆಗಳನ್ನು ವಿವರಿಸಿದರು. ಈ ವೇಳೆ ಸೋನು ಕೂಡ ತನ್ನ ಜೀವನದ ಕಹಿ ಘಟನೆಗಳನ್ನು ಸಹ ವಿವರಿಸಿದರು. ಅದರಲ್ಲೂ ಕೂಡ ತಮ್ಮ ವೈರಲ್ ವಿಡಿಯೋ ಕುರಿತು ಸಹ ಮಾತನಾಡಿದರು. ಇದಾದ ಬಳಿಕ ಸೋನು ಅವರನ್ನು ಮನೆ ಮಂದಿ ಸಮಾಧಾನ ಪಡಿಸಿದರು. ಅದರಲ್ಲೂ ಹೆಚ್ಚಾಗಿ ಸ್ಫೂರ್ತಿ ಸೋನು ಅವರಿಗೆ ಮನೆಯಲ್ಲಿದ್ದಾಗ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಇದೀಗ ಸ್ಫೂರ್ತಿ ಮನೆಯಿಂದ ಹೊರಬಂದ ನಂತರ ಸಂದರ್ಶನವೊಂದರಲ್ಲಿ ಭಾಗವಹಿಸಿದರು.

ಈ ವೇಳೆ ನಿರೂಪಕಿ ಸ್ಫೂರ್ತಿ ಅವರಿಗೆ ಸೋನು ಅವರ ಜೀವನದ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸ್ಫೂರ್ತಿ ” ಸೋನು ಅವರಿಗೆ ಇದೀಗ ತಮ್ಮ ತಪ್ಪಿನ ಅರಿವಾಗಿದೆ, ಈ ರೀತಿಯ ಘಟನೆಗಳು ಪ್ರತಿಯೊಬ್ಬರ ಜೀವನದಲ್ಲೂ ಇದ್ದಿದೆ, ಅದಕ್ಕೆ ತಲೆಕೆಡಿಸಿಕೊಳ್ಳದೆ ಮೂವ್ ಆನ್ ಆಗಬೇಕು” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top