ಬಿಗ್ ಬಾಸ್ ಮನೆಯಲ್ಲಿ ಮನೆಯ ಕೇಂದ್ರ ಬಿಂದು ಎಂದರೆ ಅದು ಆರ್ಯವರ್ಧನ್ ಗುರೂಜಿ. ಮನೆಯ ಸದಸ್ಯರು ಮತ್ತು ವೀಕ್ಷಕರನ್ನು ಮನರಂಜಿಸುವಲ್ಲಿ ಗುರೂಜಿ ಎತ್ತಿದ ಕೈ. ಹೊರಗಡೆ ಭವಿಸ್ಯ ನುಡಿಯುವ ಮೂಲಕ ಸಕತ್ ಟ್ರೊಲ್ ಆಗುತ್ತಿದ್ದ ಗುರೂಜಿ ಇದೀಗ ಮನೆಯ ಒಳಗೆ ಕೂಡ ಭವಿಷ್ಯ ನುಡಿಯುತ್ತಿದ್ದಾರೆ. ಇದೀಗ ಗುರೂಜಿ ದೊಡ್ಮನೆಯ ಸದಸ್ಯರಾಗಿರುವ ಜಯಶ್ರೀ ಅವರ ಭವಿಷ್ಯ ನುಡಿದಿದ್ದು, ನೀನಂಗೆ ಎರಡು ಮದುವೆಯಾಗುತ್ತೆ ಎಂದು ಹೇಳಿದ್ದಾರೆ.
ತಮ್ಮ ಸಂಖ್ಯಾಶಾಸ್ತ್ರದ ಮೂಲಕ ಪ್ರಖ್ಯಾತಿ ಕಳಿಸಿ ಹೆಚ್ಚು ಟ್ರೊಲ್ ಆಗುತ್ತಿದ್ದ ಗುರೂಜಿ ಇದೀಗ ಜಯಶ್ರೀ ಅವರ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಜಯಶ್ರೀ ಬಿಗ್ ಬಾಸ್ ಮನೆಯಲ್ಲಿ ಮದುವೆ ಆದ ವ್ಯಕ್ತಿಯ ಜೊತೆ ರಿಲೇಷನ್ ಶಿಪ್ ನಲ್ಲಿ ಇದ್ದೆ ಎಂದು ಜಯಶ್ರೀ ಹೇಳಿದರು. ಇದೀಗ ಗುರೂಜಿ ಇವರ ಮದುವೆಯ ಕುರಿತು “ನಿನಗೆ ಎರಡು ಮದುವೆ ಆಗುತ್ತವೆ. ಚೆನ್ನಾಗಿರೋ ಮಕ್ಕಳು ಹುಟ್ತವೆ. ಮಕ್ಕಳನ್ನು ನೀನು ಚೆನ್ನಾಗಿಯೇ ನೋಡ್ಕೋತೀಯಾ. ನಿನಗೆ ಹುಟ್ಟಿರುವ ಮಕ್ಕಳು ನಿನಗಿಂತೂ ಎತ್ತರವಾಗಿ ಬೆಳೆಯುತ್ತವೆ. ನಿನ್ನ ಮಕ್ಕಳು ಪುಣ್ಯ ಮಾಡಿರುತ್ತವೆ” ಎಂದು ಭವಿಷ್ಯ ನುಡಿದಿದ್ದಾರೆ.
ಮದುವೆ ಬದಲು ಬಿಸಿನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಜಯಶ್ರೀ ಬಿಸಿನೆಸ್ ಕುರಿತು ಭವಿಷ್ಯ ನುಡಿಯುವಂತೆ ಕೇಳಿಕೊಂಡಾಗ “ನಿನಗೆ ಯಾರು ಸಿಗುತ್ತಾರೋ ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊ ಎಂದು” ಹೇಳಿದರು. ಇದಲ್ಲದೆ ನೀನು ಸಿನಿಮಾ ಮಾಡುತ್ತೀಯಾ ಮತ್ತು ನಿನ್ನ ಜೀವನದಲ್ಲಿ ದುಡ್ಡು ಮುಖ್ಯ ಎಂದು, ನಿನಗೆ ಮೋಸ ಮಾಡುವವರು ಇರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗುರೂಜಿ ಅವರ ಭವಿಷ್ಯದ ಕುರಿತು ಹಲವಾರು ಚರ್ಚೆಗಳು ನಡೆಯುತ್ತಾನೆ ಇತ್ತು. ಗುರೂಜಿ ಮನಸಿನಲ್ಲಿ ಮೃದು ಸ್ವಭಾವದವರು,ಆದ್ದರಿಂದ ಅವರೆಂದರೆ ಎಲ್ಲರಿಗು ಇಷ್ಟ, ಆದರೆ ಇವರು ಹೇಳುವ ಭವಿಷ್ಯ ಯಾವುದು ಇಂದಿಗೂ ನಿಜವಾಗುವುದಿಲ್ಲ ಎಂದು ಮನೆ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ಗುರೂಜಿ ನುಡಿದ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗುತ್ತೆ ಮತ್ತು ಇದನ್ನು ಜಯಶ್ರೀ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
