fbpx
ಸಮಾಚಾರ

ವಿಡಿಯೋ: ಗಳಗಳನೆ ಅತ್ತು ಕಣ್ಣೀರು ಸುರಿಸಿದ ಕಾಫಿ ನಾಡು ಚಂದು

ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಹೆಸರು ಎಂದರೆ ಅದು ಕಾಫೀ ನಾಡು ಚಂದು ಅವರ ಹೆಸರು. ಇವರು ಇದೀಗ ಎಷ್ಟರಮಟ್ಟಿಗೆ ಖ್ಯಾತಿ ಗಳಿಸಿದ್ದಾರೆ ಎಂದರೆ ಹಲವಾರು ಸೆಲೆಬ್ರಿಟಿಗಳಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತನ್ನ ಬಳಿ ಬೇಡಿಕೆಯಿಟ್ಟ ಪ್ರತಿಯೊಬ್ಬರಿಗೂ ಬರ್ತಡೇ ಹಾಡನ್ನು ಮಾಡಿಕೊಡುತ್ತಿದ್ದ ಚಂದು ಇದೀಗ ಮೊದಲ ಬಾರಿಗೆ ತನ್ನ ನೆಚ್ಚಿನ ನಟ ಅಪ್ಪು ಮತ್ತು ತಾಯಿಯನ್ನು ಕುರಿತು ಹಾಡು ಮಾಡುವ ಮೂಲಕ ತಮ್ಮ ಮನದಾಳದ ದುಃಖವನ್ನು ತೋರಿದ್ದಾರೆ.

 

 

View this post on Instagram

 

A post shared by Coffe nadu chandu (@coffeenaduchandu)

 

ಪ್ರತಿ ಬಾರಿಯೂ ಹಾಡನ್ನು ಪ್ರಾರಂಭಿಸುವ ಮುನ್ನ ” ನಾನು ಶಿವಣ್ಣ, ಪುನೀತ್ ಅಣ್ಣನ ಅಭಿಮಾನಿ ” ಎಂದು ಶುರುಮಾಡುತ್ತಾರೆ. ತಮ್ಮ ಬಳಿ ಬರುವ ಅಸಂಖ್ಯಾತ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬಕ್ಕೆ ಹಾಡನ್ನು ಮಾಡಿಕೊಡುತ್ತಿದ್ದ ಚಂದು ಇದೀಗ ಮೊದಲ ಬಾರಿಗೆ ಅಪ್ಪು ಅವರ ಕುರಿತು ಹಾಡನ್ನು ಮಾಡಿದ್ದೂ, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಹಾಡನ್ನು ಶುರುಮಾಡಿದ ಚಂದು ” ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ. ನನ್ನ ನಗುವು ಎಷ್ಟೋ ಜನರಿಗೆ ಖುಷಿ ಕೊಡುತ್ತೆ. ಕರ್ನಾಟಕದ ಜನರಿಗೆ ತಲುಪುತ್ತದೆ. ಆದರೆ ನನ್ನ ಅಳುವು ನನ್ನ ಪುನೀತಣ್ಣ ನನ್ನ ತಾಯಿಗೆ ತಲುಪುತ್ತದೆ. ಯಾಕೆಂದರೆ ಪುನೀತಣ್ಣ ಸಮಾಧಿ ಹತ್ರ ಮಣ್ ಮುಟ್ಟಿದ್ದೀನಿ, ನಮ್ ತಾಯಿ ಸಮಾಧಿ ಮಣ್ಣು ಮುಟ್ಟಿದ್ದೀನಿ. ನನಗೆ ನೋವಾಗುತ್ತಿದೆ. ಆ ನೋವು ನಿಮಗೆಲ್ಲರಿಗೂ ಗೊತ್ತಿರುತ್ತದೆ. ಸಾವಿಲ್ಲ, ನೋವೆಲ್ಲ ನನಗೆ ಎಲ್ಲ. ಅಮ್ಮ ಎಂದು ಕರೆದಾಗ ಬರಲೇ ಇಲ್ಲ ಎಂದು ಹಾಡಿ ಅಣ್ಣಾ ಅಣ್ಣಾ “ಎಂದು ಕೂಗುತ್ತಾ ತಮ್ಮ ಗಾಗಲ್ಸ್ ಅನ್ನು ತೆಗೆದು ಅಳುತ್ತಾ “ಅಣ್ಣಾ ಅಣ್ಣಾ ಐ ಲವ್ ಯೂ , ಅಮ್ಮಾ ಅಮ್ಮಾ ಐ ಲವ್ ಯೂ ” ಎಂದು ಬಾವುಕರಾಗುತ್ತಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇವರ ಹಾಡಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top