fbpx
ಸಮಾಚಾರ

‘ಆರ್ಯವರ್ಧನ್’ ಪಾತ್ರಕ್ಕೆ ಈ ನಟ ಫಿಕ್ಸ್: ವೀಕ್ಷಕರಿಗೆ ಇಷ್ಟವಾಗ್ತಾರಾ ಈ ನಟ? ಇವರೇ ನೋಡಿ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರಬಿದ್ದ ಬಳಿಕ ಅವರ ಜಾಗಕ್ಕೆ ಎಂಟ್ರಿ ಕೊಡುವ ನಟ ಯಾರು ಎನ್ನುವ ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ನಟರ ಹೆಸರು ಕೇಳಿಬಂದಿದೆ. ವಿಜಯ್ ರಾಘವೇಂದ್ರ, ಜೆಕೆ, ಹರೀಶ್ ರಾಜ್, ನವೀನ್ ಕೃಷ್ಣ ಹೀಗೆ ಅನೇಕರ ಹೆಸರು ಆರ್ಯವರ್ಧನ್ ಪಾತ್ರಕ್ಕೆ ಕೇಳಿಬರುತ್ತಿತ್ತು. ಯಾರು ಅನಿರುದ್ಧ್​ ಪಾತ್ರ ನಿರ್ವಹಿಸುತ್ತಾರೆ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

 

 

ಅನಿರುದ್ಧ ಅವರಿಂದ ತೆರುವಾದ ಆರ್ಯವರ್ಧನ್ ಪಾತ್ರವನ್ನು ಕನ್ನಡದ ಪ್ರತಿಭಾವಂತ ನಟ ಹರೀಶ್ ರಾಜ್ ಮಾಡಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.ಹರೀಶ್​ ರಾಜ್ ಕೂಡ ಉತ್ತಮ ಕಲಾವಿದರಾಗಿದ್ದಾರೆ. ಆರ್ಯವರ್ಧನ್​ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿಭಾಯಿಸೋ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಹರೀಶ್ ರಾಜ್ ಅವರನ್ನ ಆರ್ಯವರ್ಧನ್ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ವಾಹಿನಿಯಾಗಲಿ, ಧಾರಾವಾಹಿಯ ನಿರ್ಮಾಪಕರಾಗಿ ಈ ಸುದ್ದಿಯನ್ನು ಖಚಿತ ಪಡಿಸದೇ ಇದ್ದರೂ, ಹರೀಶ್ ರಾಜ್ ಅವರೇ ಈ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇವತ್ತು ಅಥವಾ ನಾಳೆ ಪಾತ್ರಧಾರಿಯ ಹೆಸರು ಪಕ್ಕಾ ಆಗಲಿದೆ.

ಅಂದಹಾಗೆ ಕನ್ನಡ ಕಿರುತೆರೆ ಹಾಗೂ ಚಿತ್ರರಂಗ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿ ಹೆಸರು ಮಾಡಿದ್ದಾರೆ ಹರೀಶ್ ರಾಜ್. ‘ದಂಡಪಿಂಡಗಳು’ ಧಾರಾವಾಹಿಯ ಮೂಲಕ ಚಾಲ್ತಿಗೆ ಬಂದಿದ್ದ ಹರೀಶ್ ರಾಜ್ ಆನಂತರ ‘ದೋಣಿ ಸಾಗಲಿ’, ‘ತಾಯಿ ಸಾಹೇಬ’, ‘ದ್ವೀಪ’, ‘ಕೂರ್ಮಾವತಾರ’ ಮುಂತಾದ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ಈ ನಡುವೆ ನಟ ಹರೀಶ್ ರಾಜ್ ಅವರು ಕಿರುತೆರೆಯ ಖ್ಯಾತ ಷೋ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲೂ ಸ್ಪರ್ಧಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top