fbpx
ಸಮಾಚಾರ

‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು. ಟೈಮ್​ಪಾಸ್​ ಇರಬಾರದು’ ಹಳೆಯ ಪ್ರೇಮ ಕಥೆ ಹೇಳಿದ ರೂಪೇಶ್ ಗೆ ಸೋನು ಪ್ರೀತಿ ಪಾಠ

ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ಭರ್ಜರಿಯಾಗಿ ಮುನ್ನುಗುತ್ತಿದೆ. ಮನೆಯಲ್ಲಿ ದಿನೆ ದಿನೆ ಹಲವಾರು ಬದಲಾವಣೆಗಳು ಆಗುತ್ತಿದೆ. ಒಂದು ಕಡೆ ಮನೆಯಲ್ಲಿ ಜಗಳ ನಡೆಯುತ್ತಿದ್ದರೆ, ಮತ್ತೊಂದು ಕಡೆ ಪ್ರೀತಿ ಪ್ರೇಮ ಹೀಗೆ ಹಲವಾರು ವಿಚಾರಗಳು ಚರ್ಚೆಯಾಗುತ್ತಿದೆ. ಈ ವೇಳೆ ತನ್ನ ಹಳೆಯ ಪ್ರೇಮ ಕಥೆ ಹೇಳಿದ ರೂಪೇಶ್ ಅವರಿಗೆ ಸೋನು ಪ್ರೀತಿ ಪಾಠ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇದೀಗ ಎಲ್ಲರ ಗಮನ ಸೆಳೆಯುತ್ತಿರುವುದು ಎಂದರೆ ಅದು ಆರ್ಯವರ್ಧನ್ ಗುರೂಜಿ ಮತ್ತು ಸೋನು ಗೌಡ. ಅದರಲ್ಲೂ ಮನೆ ಮಾಡಿಗೆ ಸೋನು ಇದ್ದರೆ ಒಂತರ ಎಂಟರ್ಟೈನ್ಮೆಂಟ್ ಎಂದು ಅನಿಸುತ್ತಿದೆ. ಹೀಗಾಗಿ ಹೆಚ್ಚಿನ ಸಮಯವನ್ನು ಮನೆ ಮಂದಿ ಸೋನು ಅವರ ಜೊತೆ ಕಳೆಯುತ್ತಿದ್ದಾರೆ. ಈ ವೇಳೆ ರೂಪೇಶ್ ಸೋನು ಬಳಿ ತನ್ನ ಹಳೆಯ ಪ್ರೇಮ ಕಥೆಯನ್ನು ವಿವರಿಸಿದ್ದು, ಇದನ್ನು ಕೆಯ್ದ ಸೋನು ರೂಪೇಶ್ ಅವರಿಗೆ ಪ್ರೀತಿ ಕುರಿತು ಪಾಠ ಮಾಡಿದ್ದಾರೆ.

ಸೋನುಗೌಡ ಬಳಿ ರೂಪೇಶ್​ ಶೆಟ್ಟಿ ತನ್ನ ಹಳೆ ಲವ್​ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ.” ಒಂದು ಹುಡುಗಿ ದಿನಾ ದೇವಸ್ಥಾನಕ್ಕೆ ಬರುತ್ತಿದ್ದಳು. ನನ್ನ ಫ್ರೆಂಡ್ಸ್ ಎಲ್ಲರೂ ಅವಳಿಗೆ ಲೈನ್ ಹೊಡೆಯುತ್ತಿದ್ದರು. ಅವಳು ನನಗೆ ಬೀಳಲ್ಲ ಎಂದು ನಾನು ಸುಮ್ಮನೆ ಇದ್ದೆ. ಹಾಗೇ ರಕ್ಷಾ ಬಂಧನದ ದಿನ ಎಲ್ಲರಿಗೂ ಆಕೆ ರಾಖಿ ಕಟ್ಟಿದಳು. ನನಗೆ ಕಟ್ಟಿಲ್ಲ” ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸೋನು ” ‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು. ಟೈಮ್​ಪಾಸ್​ ಇರಬಾರದು’, ‘ಲವ್​ ಟೈಮ್​ವೇಸ್ಟ್​. ಫ್ರೆಂಡ್​ಶಿಪ್ ಮುಖ್ಯ’ ಎಂದು ಅವರು ರೂಪೇಶ್ ಅವರಿಗೆ ಪ್ರೀತಿ ಪ್ರೇಮದ ಕುರಿತು ಬುದ್ದಿವಾದ ಹೇಳಿದರು. ಇವರಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದ ರಾಕೇಶ್ ಮಧ್ಯಪ್ರವೇಶಿಸಿ ‘ಯಾವುದೇ ರಿಲೇಶನ್​ಶಿಪ್​ನಲ್ಲಿ ರೆಸ್ಪೆಕ್ಟ್ ಮುಖ್ಯ’ ಎಂದು ತಮ್ಮ ಅನಿಸಿಕೆಯನ್ನು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top