fbpx
ಸಮಾಚಾರ

ಚಿರು ಮತ್ತು ರಾಯನ್ ಹೆಸರನ್ನು ವಿಶೇಷ ರೀತಿಯಲ್ಲಿ ಅಚ್ಚೆ ಹಾಕಿಸಿಕೊಂಡ ಮೇಘನಾ ರಾಜ್! ಫೋಟೋ ವೈರಲ್

ನಟಿ ಮೇಘನಾ ರಾಜ್ ಪತಿ ಚಿರುವಿನ ಅಗಲಿಕೆಯ ನಂತರ ಇದೀಗ ತಮೆಲ್ಲ ನೋವುಗಳಿಂದ ಹೊರಬಂದು ಹೊಸ ಜೀವನ ಶುರುಮಾಡುತ್ತಿದ್ದಾರೆ. ರಿಯಾಲಿಟಿ ಷೋ ಗಳಲ್ಲಿ ಜಡ್ಜ್ ಆಗಿ ನಟಿ ಮೇಘನಾ ಬ್ಯುಸಿಯಾಗಿದ್ದಾರೆ. ಇದ್ದಲದೆ ಈ ಹಿಂದೆ ಇವರು ಎರಡನೇ ಮದುವೆಯಾಗುತ್ತಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿತ್ತು. ಇದೀಗ ಮೇಘನಾ ಇದಕ್ಕೆಲ್ಲ ಒಂದು ಟ್ಯಾಟೂ ಮೂಲಕ ಉತ್ತರಿಸಿದ್ದಾರೆ.

 

 

ಮೇಘನಾ ಅವರಿಗೆ ತಮ್ಮ ಪತಿ ಅಗಲಿಕೆಯ ನೋವನ್ನು ಕಮ್ಮಿ ಮಾಡಿದ್ದು ಎಂದರೆ ಅದು ರಾಯನ್ ಆಗಮನ. ರಾಯನ್ ಆಗಮನದಿಂದ ಮೇಘನಾ ಬಹಳಷ್ಟು ಖುಷಿಯಾಗಿದ್ದಾರೆ. ಸದಾ ಕಾಲ ಮನೆಯಲ್ಲಿದ್ದ ಇವರು ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಫೋಟೋ ಇದೀಗ ಎಲ್ಲಾ ಕಡೆ ಸಕತ್ ಸೌಂಡ್ ಮಾಡುತ್ತಿದ್ದು, ಚಿರು ಮತ್ತು ರಾಯನ್ ಅವರ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಇತ್ತೀಚಿಗೆ ಮೇಘನಾ ತಮ್ಮ ಕೈಯಿಗೆ ಚಿರು ಮತ್ತು ರಾಯನ್ ಹೆಸರು ಕಾಣಿಸುವಂತೆ ವಿಶೇಷ ರೀತಿಯಲ್ಲಿ ಒಂದು ಟ್ಯಾಟೂ ಹಾಕಿಸಿಕೊಂಡಿದ್ದು, ಇದರ ಫೋಟೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಪತಿ ಮತ್ತು ಮಗನ ಮೇಲೆ ಎಷ್ಟರಮಟ್ಟಿಗೆ ಮೇಘನಾ ಅವರಿಗೆ ಪ್ರೀತಿ ಇಂದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೇಘನಾ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಚಿರು ಇವರ ಮನಸಿನಲ್ಲಿ ಶಾಶ್ವತವಾಗಿ ಇದ್ದಾರೆ ಎಂಬುದನ್ನು ಮೇಘನಾ ಸಾಬೀತುಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top