fbpx
ಸಮಾಚಾರ

“ಗುರೂಜಿ ಬಿಗ್ ಬಾಸ್ ಮನೆಗೆ ಬಂದಿರುವುದು ಖ್ಯಾತ ಜೋತಿಷಿ ಅಂತಲ್ಲ ಬದಲಾಗಿ….. ” ಶಾಕಿಂಗ್ ಹೇಳಿಕೆ ಕೊಟ್ಟ ಸೋಮಣ್ಣ

ಬಿಗ್ ಬಾಸ್ ಮನೆಯಲ್ಲಿ ಇದೀಗ ಎಲ್ಲಿ ನೋಡಿದರು ಬರಿ ಆರ್ಯವರ್ಧನ್ ಗುರೂಜಿ ಅವರದ್ದೇ ಹವಾ. ಇದೀಗ ಮನೆ ಮಂದಿ ಅಲ್ಲದೆ ಹೊರಗಡೆ ಜನರು ಕೂಡ ಆರ್ಯವರ್ಧನ್ ಗುರೂಜಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ಮನೆ ಒಳಗೆ ಇರುವ ಸೋಮಣ್ಣ ಯಾವಾಗಲು ಆರ್ಯವರ್ಧನ್ ಗುರೂಜಿ ಅವರ ಕುರಿತು ಮಾತನಾಡುತ್ತಿರುತ್ತಾರೆ. ಇದೀಗ ಗುರೂಜಿ ಬಿಗ್ ಬಾಸ್ ಮನೆಗೆ ಬರಲು ಮುಖ್ಯ ಕಾರಣ ತಿಳಿಸಿದ್ದು, ಇದೀಗ ಹಲವಾರು ಅನುಮಾನಗಳನ್ನು ಹುಟ್ಟಿಹಾಕಿದೆ.

ಮನೆಯಲ್ಲಿ ಸೋಮಣ್ಣ ಮತ್ತು ಸೋನು ಗೌಡ ಗುರೂಜಿ ಅವರ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಸೋಮಣ್ಣ ಗುರೂಜಿ ನಂಬರ್ ಅಂದ್ರೆ ನಾನು.. ನಾನು ಅಂದ್ರೆ ನಂಬರ್ ಅಂದುಕೊಂಡು.. ಹೇಳಿದ ಮ್ಯಾಚ್ ಎಲ್ಲಾ ಉಲ್ಟಾ ಆಗುತ್ತಿತ್ತು. ಇದಕ್ಕೆ ಸೋನು ಹೌದಾ.. ಮತ್ತೆಲ್ಲಾ ಚೆನ್ನಾಗಾಗುತ್ತಿತ್ತು ಅಂತ ಗುರೂಜಿ ಹೇಳುತ್ತಿದ್ದರು ಎಂದರು. ನಂತರ ಸೋಮಣ್ಣ ನೀವೇನೂ ನೋಡೇ ಇಲ್ವಾ ಟ್ರೋಲ್ಸ್ ಎಲ್ಲಾ ಎಂದು ಸೋನುಗೆ ಪ್ರಶ್ನಿಸಿದಾಗ ನನಗೆ ಇದೆಲ್ಲ ಗೊತ್ತೇ ಇಲ್ಲ ಎಂದು ಉತ್ತರಿಸಿದರು.

ನಂತರ ಸೋಮಣ್ಣ ಇವರ ಭವಿಷ್ಯ ನೋಡಿ ಜನರು ಬಿದ್ದು ಬಿದ್ದು ನಗುತ್ತಾರೆ, ಇವರನ್ನು ಖ್ಯಾತ ಜೋತಿಷಿ ಎಂದು ಕರೆದುಕೊಂಡು ಬಂದಿಲ್ಲ ಬದಲಾಗಿ ಖ್ಯಾತ ಕಾಮಿಡಿಯನ್ ಎಂದು ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದರು. ಇದಲ್ಲದೆ ಗುರೂಜಿ ‘ಜಿಂಗಲಕಲಕಾಲಕ’ ಎಂಬ ಪದವನ್ನು ಬಳಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇವರು ಬಳಸುವ ಪದಗಳು ಇವರು ಜೋತಿಷಿ ಎಂದು ಹೇಳುವುದೇ ಇಲ್ಲ. ಹಲವಾರು ಟ್ರೊಲ್ಸ್ ಗಳಲ್ಲಿ ನಾನು ನೋಡಿದೀನಲ್ಲ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top