ಬಹುನಿರೀಕ್ಷಿತ ಏಷ್ಯಾ ಕಪ್ 2022 ಇಂದಿನಿಂದ ಆರಂಭವಾಗುತ್ತಿದೆ. ಇನ್ನು ಆಗಸ್ಟ್ 28 ರಂದು ಅಂದರೆ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಏರ್ಪಡಲಿದೆ. ಎರಡೂ ದೇಶಗಳ ಜನರು ಸೇರಿದಂತೆ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಈ ಮದ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಚಾರವೊಂದಕ್ಕೆ ಬಿಸಿಸಿಐ ಸ್ಪಷ್ಟನೆ ನೀಡಿದೆ.. ಏನದು ವದಂತಿ? ಏನದು ಸ್ಪಷ್ಟನೆ ಅಂತೀರಾ? ಮುಂದೆ ಓದಿ
ಏಷ್ಯಾ ಕಪ್ ನಲ್ಲಿ ಭಾರತ ತಂಡಕ್ಕೆ ಸ್ಟಾಂಡ್ ಬೈ ಆಟಗಾರನಾಗಿ ಆಯ್ಕೆಯಾಗಿರುವ ದೀಪಕ್ ಚ್ಚಹರ್ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಹರಡಿತ್ತು. ಅಲ್ಲದೆ ದೀಪಕ್ ಚಾಹರ್ ಜಾಗಕ್ಕೆ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರವಾಗಿ ಆಡಿದ್ದ ಕುಲದೀಪ್ ಸೆನ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ದೀಪಕ್ ಚಹರ್ ಯಾವುದೇ ಗಾಯದ ಸಮಸ್ಯೆ ತುತ್ತಾಗಿಲ್ಲ ಎಂದು BCCI ಸ್ಪಷ್ಟಪಡಿಸಿದೆ. ಅಲ್ಲದೆ ಕುಲದೀಪ್ ಸೇನ್ ಅವರನ್ನು ತಂಡಕ್ಕೆ ಹೆಚ್ಚುವರಿ ಬೌಲರ್ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಮಧ್ಯಪ್ರದೇಶದ ವೇಗಿ ಕುಲ್ದೀಪ್ ಸೇನ್, ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Deepak Chahar is still with the Indian squad as a reserve for the Asia Cup in the UAE. Reports of his injury are all wrong, and Kuldeep Sen has joined the team as a net bowler.
— Rahul Rawat (@rawatrahul9) August 25, 2022
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
