fbpx
ಸಮಾಚಾರ

ಬ್ರೀಜರ್ ಮೇಲೆ ಆಣೆಗೂ ರಾಕೇಶ್‌ನನ್ನು ಟೆಂಪರವರಿ ಥರ ನೋಡಿಲ್ಲ! ರಾಕೇಶ್ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸೋನು ಗೌಡ

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳು ಆಗುತ್ತಿದೆ. ಒಂದು ಕಡೆ ಸಾನ್ಯ ರೂಪೇಶ್ ವಿಚಾರ ಬಂದರೆ ಮತ್ತೊಂದು ಕಡೆ ರಾಕೇಶ್, ಸ್ಪೂರ್ತಿ ಮತ್ತು ಸೋನು ಅವರ ಹೆಸರು ಕೇಳಿಬರುತ್ತಿದೆ. ಆದರೆ ಬಿಗ್ ಬಾಸ್ ಮನೆಯಿಂದ ಸ್ಪೋರ್ತಿ ಎಲಿಮಿನೇಟ್ ಆದ ಬಳಿಕ ಇದೀಗ ಮನೆಯಲ್ಲಿ ಕೇಳಿ ಬರುತ್ತಿರುವ ಹೆಸರು ಎಂದರೆ ಅದು ರಾಕೇಶ್ ಮತ್ತು ಸೋನು.

ಇತ್ತೀಚಿಗೆ ರಾಕೇಶ್ ಮತ್ತು ಸೋನು ಮನೆಯ ತುಂಬಾ ಒಟ್ಟಿಗೆ ಕಾಣಿಸುತ್ತಿದ್ದಾರೆ. ಇದು ಮನೆಯ ಮಂದಿಗೆ ಅನುಮಾನ ಹುಟ್ಟಿಹಾಕಿದೆ. ಇದಲ್ಲದೆ ಇತ್ತೀಚಿಗೆ ರಾಕೇಶ್ ನೆನೆದು ಸೋನು ಕಣ್ಣೇರು ಕೂಡ ಹಾಕಿದ್ದು, ಇದೀಗ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆಯುತ್ತಿದೆ ಎಂಬ ಅನುಮಾನ ಶುರುವಾಗಿದೆ.

ರಾಕೇಶ್ ಸೋನು ವಿರುದ್ದ ಸಿಟ್ಟಾಗಿ ಅವಳಿಗೆ ಬೇಜಾರ್ ಮಾಡಿದ್ದಾನೆ. ಇದೆ ಬೇಜಾರಿನಿಂದ ಸೋನು ಬೆಡ್ ರೂಮ್ ಗೆ ಬಂದಿದ್ದಾಳೆ. ನಂತರ ಬೆಡ್ ರೂಮ್ ನಲ್ಲಿದ್ದ ಅಕ್ಷತಾಳಿಗೆ ನನ್ನ ನೋವನ್ನು ಹೇಳಿಕೊಂಡು ಅತ್ತಿದ್ದಾಳೆ. ಈ ವೇಳೆ ರೂಮಿಗೆ ಬಂದ ರಾಕೇಶ್ ಎಣಿಕೆ ಅಳುತ್ತಿದೀಯಾ ಎಂದು ಸೋನು ಅವರನ್ನು ಪ್ರಶ್ನಿಸಿದನು. ಇದಕ್ಕೆ ಉತ್ತರಿಸಿದ ಸೋನು ಇಲ್ಲಪ್ಪ ಯಾಕೆ ಅಳಬೇಕು ಎನ್ನುತ್ತಲೇ ಮತ್ತೆ ಕಣ್ಣೀರು ಹಾಕಿದ್ದಾಳೆ. ನಂತರ ರಾಕೇಶ್ ತನ್ನ ಹಿಂದೆ ಇರುವುದನ್ನು ಗಮನಿಸಿದ ಸೋನು ಅಕ್ಷತಾ ಬಳಿ ಎಲ್ಲವನ್ನು ಹೇಳಿದ್ದಾಳೆ.

ನಾವೂ ಒಬ್ಬರಿಗೆ ಪ್ರೀತಿ ಕೊಟ್ಟಾಗ ಮತ್ತೆ ಆ ಪ್ರೀತಿ ಸಿಗದೆ ಹೋದರೆ ಎಷ್ಟು ಹರ್ಟ್ ಆಗುತ್ತೆ ಗೊತ್ತಾ. ನೀನು ನನ್ನನ್ನ ನೋಡಿದ್ದೀಯಾ. ಇಲ್ಲಿ ಎಷ್ಟು ಜನ ಹುಡುಗರಿದ್ದಾರೆ. ಆದರೆ ನಾನು ಯಾರ ಜೊತೆಗೂ ಹಗ್ ಮಾಡಲ್ಲ, ಅವನ ಜೊತೆ ಇದ್ದಷ್ಟು ಕ್ಲೋಸ್ ಬೇರೆ ಯಾರ ಜೊತೆಗೂ ಇಲ್ಲ, ಅವ್ನು ನನ್ನ ಬೇಬಿಮಾ ಅಂದುಕೊಂಡಿದ್ದಾನೆ ಏನನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ ಎಂದುಕೊಂಡಿದ್ದಾನೆ. ನಮ್ಮ ಮೇಲೆ ಆಣೆಗೂ, ಬ್ರೀಜರ್ ಮೇಲೆ ಆಣೆಗೂ ನಾನು ಅವನನ್ನು ಟೆಂಪರವರಿ ಥರ ನೋಡಿಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ.

ಇವೆಲ್ಲ ಬೆಳವಣಿಗೆಗಳು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ರಾಕೇಶ್ ಮತ್ತು ಸೋನು ನಡುವೆ ಬರಿ ಸ್ನೇಹ ಇದಿಯಾ ಅಥವಾ ಇದಕ್ಕಿಂತ ಮೀರಿ ಬೇರೆ ಏನಾದರು ಇದಿಯಾ ಎಂಬುದು ಮನೆಯವರ ಅನುಮಾನ. ಹೀಗಾಗಿ ಇವರಿಬ್ಬರ ಮಧ್ಯೆ ನಿಜವಾಗಲು ಯಾವ ರೀತಿ ಸಂಬಂಧ ಇದೆ ಎಂಬುದನ್ನು ಕಾದು ನೋಡಬೇಕಷ್ಟೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top