fbpx
ಸಮಾಚಾರ

ಬಿಗ್ ಬಾಸ್​ಗೆ ಅವಾಜ್ ಹಾಕಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದ ಸೋನು ಗೌಡ!

ಬಿಗ್ ಬಾಸ್ ಮನೆಯಲ್ಲಿ ಇದೀಗ ಸೋನು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ. ಸೋನು ಇದ್ದಾರೆ ಮನೆಯಲ್ಲಿ ಖುಷಿ ತುಂಬಿರುತ್ತೆ ಎಂದು ಸ್ಪರ್ಧಿಗಳು ಮಾತನಾಡುತ್ತಿದ್ದಾರೆ. ಈ ವೇಳೆ ಸೋನು ಬಿಗ್ ಬಾಸ್ ಗೆ ಅವಾಜ್ ಹಾಕಿದ್ದು, ಇದೀಗ ಈ ವಿಷಯ ಮನೆಯಲ್ಲಿ ಚರ್ಚೆಯಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮಾತಿನಲ್ಲಿ ಮೈಮರೆತು ಹಲವಾರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಕುರಿತು ಬಿಗ್ ಬಾಸ್ ಸ್ಪರ್ಧಿಗಳಿಗೆ ಹಲವಾರು ಬಾರಿ ಎಚ್ಚರಿಸುತ್ತಿರುತ್ತಾರೆ. ನಿಯಮ ಉಲ್ಲಂಘನೆಯ ಕಾರಣ ಲಗ್ಸುರಿ ಬಜೆಟ್ ಪಾಯಿಂಟ್ಸ್ ಕೂಡ ಕಮ್ಮಿ ಆಗುತ್ತಿತ್ತು. ಈ ವೇಳೆ ಸೋನು ಮೈಕ್ ಸರಿಯಾಗಿ ಧರಿಸದೇ ಇರುವುದನ್ನು ಕಂಡ ಬಿಗ್ ಬಾಸ್ ‘ಸೋನು ಮೈಕ್​ ಅನ್ನು ಸರಿಯಾಗಿ ಧರಿಸಿ’ ಎಂದು ತಿಳಿಸಿದ್ದಾರೆ. ಇದು ಸೋನು ಅವರನ್ನು ಬಹಳಷ್ಟು ಕೆರಳಿಸಿದೆ.

‘ನೋಡಿ ಬಿಗ್ ಬಾಸ್ ಮೈಕ್​ ಅನ್ನು ಸರಿಯಾಗಿ ಧರಿಸಿದ್ದೇನೆ. ನೀವು ಏಕೆ ಪದೇಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಾ? ಉದ್ದೇಶ ಪೂರ್ವಕವಾಗಿಯೇ ನೀವು ಹೇಳುತ್ತಿದ್ದೀರಾ ಅಥವಾ ಬೇರೆಯವರಿಗೆ ಹೇಳುವುದನ್ನು ನನಗೆ ಹೇಳುತ್ತಿದ್ದೀರಿ ಎನಿಸುತ್ತದೆ. ನೀವು ಕ್ಷಮೆ ಕೇಳಬೇಕು’ ಎಂದು ಬಿಗ್ ಬಾಸ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಸೋನು ಅವರ ಈ ಮಾತು ಇದೀಗ ಮನೆಯ ತುಂಬಾ ಬಹಳಷ್ಟು ಚರ್ಚೆಯಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top