fbpx
ಸಮಾಚಾರ

ಕಾಲೇಜಿನಲ್ಲಿ ವಿದ್ಯಾರ್ಥಿಸಂಘದ ಎಲೆಕ್ಷನ್: ಯುವತಿಯರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡು ವೋಟು ಕೇಳಿದ ಯುವಕ: ವಿಡಿಯೋ ನೋಡಿ

ರಾಜಸ್ಥಾನದ ವಿದ್ಯಾರ್ಥಿ ಸಂಘದ ಮುಖಂಡರೊಬ್ಬನೊಬ್ಬನು ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ತಮ್ಮ ಪರವಾಗಿ ಮತ ನೀಡುವಂತೆ ಬೇಡಿಕೊಳ್ಳುತ್ತಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ. ರಾಜಸ್ತಾನದ ಭರತ್‌ಪುರ ಜಿಲ್ಲೆಯ ಈ ವಿಚಿತ್ರ ಘಟನೆ ನಡೆದಿದ್ದು ಇದಕ್ಕೆ ಸಂಭಂದಿಸಿದಂತೆ ವಿಡಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

 

ವಿಡಿಯೋದಲ್ಲಿ ಏನಿದೆ?
ಮತದಾನಕ್ಕೂ ಮುನ್ನ ರಸ್ತೆಯಲ್ಲೇ ಯುವತಿಯರನ್ನ ತಡೆದು ನಿಲ್ಲಿಸಿ ಅವರ ಕಾಲಿಗೆ ಬೀಳುತ್ತಾ ನನಗೆ ವೋಟು ಕೊಡಿ ಎಂದು ಅಂಗಲಾಚಿರುವ ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು. ಯುವಕ ಕಾಲಿಗೆ ಬೀಳುತ್ತಿದ್ದಂತೆ ಯುವತಿಯರು ನಾಚಿ ನೀರಾಗಿದ್ದರು. ಹೀಗೆಲ್ಲಾ ಮಾಡ್ಬೇಡಿ ಎನ್ನುತ್ತಾ ಹಿಂದಕ್ಕೆ ಸರಿದಿದ್ದಾರೆ.. ಸದ್ಯ ಯುವಕ ಕಾಲಿಗೆ ಬೀದಿದ್ದ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

 

 

ಅಂದಹಾಗೆ ಎರಡು ವರ್ಷಗಳ ಮಧ್ಯಂತರದ ನಂತರ ಶುಕ್ರವಾರ ರಾಜಸ್ಥಾನದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆದವು. ಶನಿವಾರ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top