fbpx
ಸಮಾಚಾರ

ಕಾಫಿ ನಾಡು ಚಂದುಗೆ ದುಬಾರಿ ಗಿಫ್ಟ್ ನೀಡಿದ ಅನುಶ್ರೀ: ಏನದು ಗೊತ್ತಾ?

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕಾಪಿ ನಾಡು ಚಂದು ಅವರ ಜನಪ್ರಿಯತೆಯ ಬಗ್ಗೆ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ವಿಶಿಷ್ಟ ರೀತಿಯ ಬರ್ತಡೇ ಹಾಡುಗಳ ಮೂಲಕ ಫೇಮಸ್ ಆಗಿದ್ದ ಚಂದು ಕನ್ನಡ ಮನರಂಜನಾ ಮಾಧ್ಯಮಗಳಲ್ಲೂ ಸಂಚಲನ ಸೃಷ್ಟಿಸಿದ್ದಾನೆ. ಅದಕ್ಕೆ ಉದಾಹರಣೆ ಎಂಬಂತೆ ಕಿರುತೆರೆ ಷೋವೊಂದಕ್ಕೆ ಕಾಫಿನಾಡು ಚಂದು ಸ್ಪೆಷಲ್ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಚಂದುಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ.

 

 

ಹೌದು, ಕಾಫಿನಾಡು ಚಂದುಗೆ ಪ್ರಸಿದ್ಧ ನಿರೂಪಕಿ ಅನುಶ್ರೀ ಟೈಟಾನ್ ವಾಚ್ ಗಿಫ್ಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ ಸ್ವತಃ ತಾವೇ ಚಂದು ಕೈಗೆ ವಾಚ್‌ ಕಟ್ಟಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ನಂತರ ಹೊರಭಾಗದಲ್ಲಿ ಚಿತ್ರಿಸಲಾಗಿರುವಂತೆ ಕಾಣುವ ವಿಡಿಯೋವನ್ನು ಚಂದು ಶೇರ್ ಮಾಡಿದ್ದಾರೆ. ಇದರಲ್ಲಿ ಚಂದು ಕೈಗೆ ಟೈಟಾನ್ ವಾಚ್ ಕಟ್ಟುವುದನ್ನು ಕಾಣಬಹುದು.

ಚಂದುಗೆ ಗಿಫ್ಟ್​ ನೀಡುವಾಗ, ‘ಚೆನ್ನಾಗಿ ಹಾಡಿ. ಇನ್ನೂ ನಾಲ್ಕೈದು ಜನರಿಗೆ ನೀವು ಸಹಾಯ ಮಾಡಬೇಕು’ ಎಂದು ಅನುಶ್ರೀ ಕಿವಿಮಾತು ಹೇಳಿದ್ದಾರೆ. ಅನುಶ್ರೀ ಅವರ ಗಿಫ್ಟ್ ನೋಡಿ, ಕಾಫಿನಾಡು ಚಂದು ಕೂಡ ಖುಷಿಪಟ್ಟಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top