fbpx
ಸಮಾಚಾರ

ಸೋನು ಮುಖ ನೋಡಿ ಹೆದರಿದ ಕುಸಿದು ಬಿದ್ದ ಗುರೂಜಿ! ಅಸಲಿಗೆ ಆಗಿದ್ದಾದರೂ ಏನು?

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಿದೆ. ಅದರಲ್ಲೂ ಮನೆಯ ಎಂಟರ್ಟೈನ್ಮೆಂಟ್ ಫ್ಯಾಕ್ಟರ್ ಎಂದರೆ ಆರ್ಯವರ್ಧನ್ ಗುರೂಜಿ ಮತ್ತು ಸೋನು ಗೌಡ. ಆದರೆ ಇದೀಗ ಸೋನು ಗೌಡ ಮಾಡಿರುವ ಒಂದು ಎಡವಟ್ಟು ಇಡೀ ಮನೆಯ ಮಂದಿ ಒಂದು ಕ್ಷಣ ಶಾಕ್ ಆಗುವಂತೆ ಮಾಡಿದೆ.

ಬಿಗ್ ಬಾಸ್ ಮನೆಯಲ್ಲಿ ಗುರೂಜಿ ನಾನು ಹಲವು ಬಾರಿ ದೆವ್ವ ನೋಡಿದೀನಿ ಎಂದು ಹೇಳಿದ್ದಾರೆ. ಅದರ ಜೊತೆ ನನಗೆ ದೆವ್ವ ಎಂದರೆ ಭಯ ಅಂತ ಕೂಡ ಹೇಳಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಸೋನು ಗುರೂಜಿಯನ್ನು ಹೆದರಿಸಲು ದೆವ್ವದ ರೀತಿ ಮೇಕಪ್ ಮಾಡಿಕೊಂಡು ಬಂದಿದ್ದಾರೆ. ಆದರೆ ಅಲ್ಲಿ ಆಗಿದ್ದೆ ಬೇರೆ.

ಆರ್ಯವರ್ಧನ್​ ಗುರೂಜಿ ಬಾತ್​ ರೂಮ್​ನಲ್ಲಿ ಇದ್ದರು. ಈ ವೇಳೆ ಸೋನು ಗೌಡ ಅವರು ತಮ್ಮ ಮುಖಕ್ಕೆ ಪೌಡರ್​ ಬಳಿದುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಹಚ್ಚಿಕೊಂಡು, ಕೂದಲು ಕೆದರಿಕೊಂಡು ಬಾತ್​ ರೂಮ್​ ಹೊರಗೆ ನಿಂತಿದ್ದರು. ಬಾತ್​ ರೂಮ್​ ಬಾಗಿಲು ತೆಗೆಯುತ್ತಿದ್ದಂತೆಯೇ ಸೋನು ಗೌಡ ಮುಖ ನೋಡಿ ಗುರೂಜಿ ನಿಜವಾಗಿಯೂ ಬೆಚ್ಚಿ ಬಿದ್ದರು. ಈ ಕೂಡಲೇ ಅಲ್ಲೇ ಇದ್ದ ರಾಕೇಶ್ ಮತ್ತು ರೂಪೇಶ್ ಅವರನ್ನು ಎತ್ತಿಕೊಂಡು ಬಂದರು. ಒಂದು ಕ್ಷಣ ಎಲ್ಲರಿಗು ಗಾಬರಿ ಏನಾಗಿದೆ ಎಂದು.

ಆ ನಂತರ ಆರ್ಯವರ್ಧನ್ ಗುರೂಜಿ ಅವರಿಗೆ ‘ಹಾರ್ಟ್ ಅಟ್ಟ್ಯಾಕ್’ ಆಗಿದೆ ಎಂದು ಮನೆ ಮಂದಿ ಮಾತನಾಡಿಕೊಳ್ಳುತ್ತಿದ್ದರು. ‘ನಾನೆಲ್ಲೋ ಇದು ಜೋಕ್​ ಅಂದುಕೊಂಡೆ. ದೇವರಾಣೆ ಜೋಕ್​ ಅಲ್ಲ’ ಎಂದು ರೂಪೇಶ್​ ಆತಂಕ ಹೊರಹಾಕಿದರು. ನಂತರ ಗುರೂಜಿ ಅವರನ್ನು ಸಮಾಧಾನ ಪಡಿಸಿದ ನಂತರ ‘ನಿಜಕ್ಕೂ ದೆವ್ವ ಅಂತ ಹೆದರಿಕೊಂಡೆ’ ಎಂದು ಗುರೂಜಿ ಕಣ್ಣೀರು ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top