fbpx
ಸಮಾಚಾರ

“ದನದ ಮಾಂಸ ನನಗೆ ಇಷ್ಟ” ರಣಬೀರ್ ಕಪೂರ್ ಹೇಳಿಕೆ ವಿರುದ್ಧ ನೆಟ್ಟಿಗರು ಕೆಂಡ

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆಯಾದ ನಂತರ ಒಟ್ಟಿಗೆ ನಟಿಸಿ ಬಿಡುಗಡೆಯಾಗುತ್ತಿರುವ ಸಿನಿಮಾ ಎಂದರೆ ಅದು ಬ್ರಹ್ಮಾಸ್ತ್ರ. ಹೀಗಾಗಿ ಈ ಸಿನಿಮಾದ ಮೇಲೆ ಜನರಿಗೆ ಬೆಟ್ಟಡಷ್ಟು ನಿರೀಕ್ಷೆ ಇದೆ. ಆದರೆ ರಣಬೀರ್ ಕಪೂರ್ ನೀಡಿದ ಒಂದು ಹೇಳಿಕೆ ಇದೀಗ ಬ್ರಹ್ಮಾಸ್ತ್ರ ಸಿನಿಮಾಕ್ಕೆ ದೊಡ್ಡ ಹೊಡೆತ ಬೀಳುವುದು ಪಕ್ಕ ಎಂದು ಹೇಳಬಹುದು.

ಇತ್ತೀಚಿಗೆ ರಣಬೀರ್ ಕಪೂರ್ ತಮ್ಮದು ಮಾಂಸಪ್ರಿಯ ಕುಟುಂಬ. ಗೋಮಾಂಸ ಸೇರಿದಂತೆ ನಾನಾ ರೀತಿಯ ನಾನ್ ವೆಜ್ ತಿನ್ನುತ್ತೇವೆ. ಅದರಲ್ಲೂ ನನಗೆ ಗೋಮಾಂಸ ಅಂದರೆ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಇವರ ಈ ಮಾತು ಇದೀಗ ಇವರಿಗೆ ದೊಡ್ಡ ಮುಳುವಾಗಿದೆ.

ಏಕೆಂದರೆ ಭಾರತದಲ್ಲಿ ಅತಿ ಹೆಚ್ಚು ಧರ್ಮದವರು ಗೋವನ್ನು ದೇವರ ರೀತಿಯಲ್ಲಿ ಪೂಜಿಸುತ್ತಾರೆ. ಹೀಗಾಗಿ ರಂಬೀರ್ ಅವರ ಹೇಳಿಕೆ ಇದೀಗ ಜನರನ್ನು ಕೆರಳಿಸಿದೆ. ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಹೀಗಾಗಿ ಬ್ರಹ್ಮಾಸ್ತ್ರ ಸಿನಿಮಾಕ್ಕೆ ಇದರಿಂದ ದೊಡ್ಡ ಹೊಡೆತ ಬೀಳುವುದು ಪಕ್ಕ ಎಂದು ಹೇಳಬಹುದು.

ಆದರೆ ಈ ಘಟನೆ ನಡೆದಿರುವುದು ನೆನ್ನೆ ಮೊನ್ನೆ ಅಲ್ಲ. ಸುಮಾರು 10 ವರ್ಷಗಳ ಹಿಂದೆ. ಆದರೆ ಇದೀಗ ಈ ವಿಡಿಯೋ ವನ್ನು ಮತ್ತೆ ವೈರಲ್ ಮಾಡುತ್ತಿದ್ದಾರೆ. ಏಕೆಂದರೆ ಈ ಹಿಂದೆ ಗೋಮಾಂಸ ನಿಷೇಧ ವಿರಲಿಲ್ಲ, ಆದರೆ ಇದೀಗ ಗೋಮಾಂಸ ನಿಷೇಧ ವಿರುವ ಕಾರಣ ಈ ವಿಡಿಯೋ ವೈರಲ್ ಮಾಡುತ್ತಾ ಬ್ರಹ್ಮಾಸ್ತ್ರ ಸಿನಿಮಾವನ್ನು ನಿಷೇಧಿಸಬೇಕೆಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top