fbpx
ಸಮಾಚಾರ

“ಕ್ರಿಮಿನಲ್ ಗಳು ಜಯ ತಂದುಕೊಡಲು ಸಾಧ್ಯವಿಲ್ಲ ” ಶಮಿ ವಿರುದ್ಧ ಮತ್ತೆ ಗುಡುಗಿದ ಪತ್ನಿ ಹಸಿನ್

ಇತ್ತೀಚಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಏಷ್ಯಾ ಕಪ್ ನಡೆಯಿತು. ಈ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಗೆಲುವನ್ನು ಧಾಖಲಿಸಿತು. ಆದರೆ ಇದೀಗ ಭಾರತ ತಂಡದ ಶ್ರೇಷ್ಠ ಬೌಲರ್ ಆಗಿರುವ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಮಾಡಿರುವ ಒಂದು ಪೋಸ್ಟ್ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಭಾರತ ಕಂಡಂತಹ ಶ್ರೇಷ್ಠ ಬೌಲರ್ ಗಳಲ್ಲಿ ಮೊಹಮ್ಮದ್ ಶಮಿ ಕೂಡ ಒಬ್ಬರು. ಇವರ ಪತ್ನಿ ಹಸಿನ್ ಜಹಾನ್ ಕಾರಣಾಂತರದಿಂದ ಪ್ರತ್ಯೇಕವಾಗಿ ನೆಲೆಸಿದ್ದಾರೆ. ಇತ್ತೀಚಿಗೆ ನಡೆದ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಗೆದ್ದ ಭಾರತ ತಂಡಕ್ಕೆ ಶುಭ ಕೋರಿದ್ದಾರೆ. ಆದರೆ ಇದರಲ್ಲಿ ಪರೋಕ್ಷವಾಗಿ ತಮ್ಮ ಪತಿ ಶಮಿ ಅವರನ್ನು ಗೇಲಿ ಮಾಡಿದ್ದಾರೆ.

 

 

ಭಾರತ ತಂಡಕ್ಕೆ ಶುಭಾಶಯ ತಿಳಿಸಿರುವ ಹಸಿನ್ ಒಂದು ಕಡೆ ಹಾರ್ಧಿಕ್ ಪಾಂಡ್ಯ ಅವರನ್ನು ಹೊಗಳಿದರೆ ಮತ್ತೊಂದು ಕಡೆ ಮೊಹಮ್ಮದ್ ಶಮಿ ಅವರನ್ನು ಗೇಲಿ ಮಾಡಿದ್ದಾರೆ. ಇದೀಗ ಈ ಪೋಸ್ಟ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಸಿನ್ ” ಅಭಿನಂದನೆಗಳು. ಅದ್ಭುತ ಗೆಲುವು. ದೇಶವನ್ನು ಗೆಲ್ಲುವಂತೆ ಮಾಡಿದ ನಮ್ಮ ಹುಲಿಗಳಿಗೆ ತುಂಬಾ ಧನ್ಯವಾದಗಳು. ಇದು ಆಗಬೇಕಿತ್ತು, ದೇಶದ ಸ್ಥಾನಮಾನ, ದೇಶದ ಘನತೆ ಪ್ರಾಮಾಣಿಕ, ದೇಶಭಕ್ತರಿಂದ ಮಾತ್ರ ಉಳಿಯುತ್ತದೆಯೇ ಹೊರತು ಅಪರಾಧಿಗಳಿಂದಲ್ಲ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಶಮಿ ಅವರನ್ನು ಅಪರಾಧಿ ಎಂದು ಗೇಲಿ ಮಾಡಿರುವ ಕಾರಣ ಈ ಪೋಸ್ಟ್ ವಿರುದ್ಧ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಏಕೆಂದರೆ ಶಮಿ ಬಹಳಷ್ಟು ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಹೀಗಾಗಿ ಇವರನ್ನು ಅಪರಾಧಿ ಎಂದು ಕರೆಯುವುದು ಸೂಕ್ತವಲ್ಲ ಎಂದು ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top