fbpx
ಸಮಾಚಾರ

ಈ ವಾರ ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಡಬಲ್ ಎಲಿಮಿನೇಷನ್! ಎಲಿಮಿನೇಟ್ ಆದ ಸ್ಪರ್ಧಿಗಳು ಯಾರು ಗೊತ್ತಾ?

ಬಿಗ್ ಬಾಸ್ ಕಾರ್ಯಕ್ರಮ ದಿನದಿಂದ ದಿನಕ್ಕೆ ಬಹಳಷ್ಟು ರೋಚಕತೆಯಿಂದ ಕೂಡಿದ್ದು, ಹಲವಾರು ಟ್ವಿಸ್ಟ್ ಗಳು ನಡೆಯುತ್ತಿದೆ. ಅದರಲ್ಲೂ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೂಡ ಈ ಬಾರಿ ಟ್ವಿಸ್ಟ್ ಇಟ್ಟಿದ್ದ ಬಿಗ್ ಬಾಸ್ ಒಂದಲ್ಲ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ.

ಬಿಗ್ ಬಾಸ್ OTT ಕಾರ್ಯಕ್ರಮ ಇನ್ನೇನು ಕೊನೆ ಹಂತ ತಲುಪಿದೆ. ಟಿವಿ ಕಾರ್ಯಕ್ರಮಕ್ಕೆ ಯಾವೆಲ್ಲ ಸ್ಪರ್ಧಿಗಳು ಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದರ ನಡುವೆ ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಹೀಗಾಗಿ ಪೈಪೋಟಿ ಹೆಚ್ಚಾಗಿದೆ ಎಂದು ಹೇಳಬಹುದು.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಮಂದಿ ನಾಮಿನೇಟ್ ಆಗಿದ್ದರು. ಇವರಲ್ಲಿ ಅಕ್ಷತಾ ಕುಕ್ಕಿ ಮತ್ತು ಚೈತ್ರ ಹಳ್ಳಿಕೇರಿ ಎಲಿಮಿನೇಟ್ ಆಗಿದ್ದಾರೆ. ಇದು ಬಿಗ್ ಬಾಸ್ ಸ್ಪರ್ಧಿಗಳಿಗೆ ನಂಬಲು ಸಾಧ್ಯವಾಗಿರಲಿಲ್ಲ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಇರುತ್ತದೆ ಎಂದು ಸುದೀಪ್ ಕಳೆದ ವಾರವೇ ಸುಳಿವು ಕೊಟ್ಟಿದ್ದರು. ಆದರೆ ಇದೀಗ ಇಬ್ಬರು ಸ್ಪರ್ಧಿಗಳು ಹೊರಗುಳಿದಿದ್ದು, ಇದೀಗ ಆಟ ಮತ್ತಷ್ಟು ರೋಚಕತೆಯಿಂದ ಕೂಡಿದೆ ಎಂದು ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top