fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲಿ ಸೋನು ಕಳ್ಳಾಟ! ವಿಷಯ ತಿಳಿದು ತರಾಟೆಗೆ ತೆಗೆದುಕೊಂಡ ಕಿಚ್ಚ

ಬಿಗ್ ಬಾಸ್ OTT ಕಾರ್ಯಕ್ರಮ ಶುರುವಾಗಿ 6 ವಾರಗಳು ಕೆಳೆದಿದೆ. ಮನೆಯಿಂದ ಒಬ್ಬೊಬ್ಬ ಸದಸ್ಯ ಹೊರನಡೆಯುತ್ತಿದ್ದಂತೆ ಪೈಪೋಟಿ ಮತ್ತಷ್ಟು ಹೆಚ್ಚಾಗುತ್ತಿದೆ. ಅದರಲ್ಲೂ ಮನೆಯ ಮಂದಿಯನ್ನು ಹೆಚ್ಚಾಗಿ ರಂಜಿಸುತ್ತಿರುವುದು ಎಂದರೆ ಅದು ಸೋನು ಮತ್ತು ಆರ್ಯವರ್ಧನ್ ಗುರೂಜಿ. ಆದರೆ ಸೋನು ಮಾಡುವ ತಪ್ಪಿನಿಂದ ಪ್ರತಿ ಸಲ ಅವರು ಕಿಚ್ಚ ಸುದೀಪ್ ಅವರ ಬಳಿ ಬೈಸಿಕೊಳ್ಳುತ್ತಾರೆ. ಇದೀಗ ಮತ್ತೆ ಕಿಚ್ಚ ಸೋನು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯ ನಿಯಮದಲ್ಲಿ ಮನೆಯ ಮಂದಿ ಏನಾದರು ತಪ್ಪನ್ನು ಮಾಡಿದರೆ ಬಿಗ್ ಬಾಸ್ ಆದೇಶದ ಮೂಲಕ ಅವರಿಗೆ ಎಚ್ಚರಿಕೆ ನೀಡುತ್ತಾರೆ. ಆದರೆ ಇದು ಸೋನು ಅವರಿಗೆ ಕಿರಿ ಕಿರಿ ಎಂದೆನಿಸಿದೆ. ಹೀಗಾಗಿ ಅದೆಷ್ಟೋ ಬಾರಿ ಬಿಗ್ ಬಾಸ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಗಾಕಿದ್ದು ಉಂಟು, ಇದಲ್ಲದೆ ಬಿಗ್ ಬಾಸ್ ಗೆ ಅವಾಜ್ ಹಾಕಿರುವುದು ಉಂಟು. ಇದನೆಲ್ಲ ಗಮನಿಸಿದ ಕಿಚ್ಚ ಪಂಚಾಯತಿಯಲ್ಲಿ ಸೋನು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋನು ಬಿಗ್ ಬಾಸ್ ಜೊತೆ ನಡೆದುಕೊಂಡ ರೀತಿಯನ್ನು ಪ್ರಶ್ನಿಸಿದ ಕಿಚ್ಚ ‘ನಿಮ್ಮ ಮಾತುಗಳು ಕ್ಯೂಟ್​ ಆಗಿ ಇರಲಿಲ್ಲ. ಬಿಗ್​ ಬಾಸ್​ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು. ಇನ್ಮುಂದೆ ನಿಮಗೆ ಬಿಗ್​ ಬಾಸ್​ ಆದೇಶವೇ ನೀಡುವುದಿಲ್ಲ ಎಂದುಕೊಳ್ಳಿ’ ಎಂದು ಎಚ್ಚರಿಕೆ ನೀಡಿದರು.

ಇದಲ್ಲದೆ ಸೋನು ಬಿಗ್ ಬಾಸ್ ಮನೆಯಲ್ಲಿ ಕಳ್ಳಾಟ ಆಡಿದ್ದಾರೆ. ಇದು ಕೂಡ ಕಿಚ್ಚನನ್ನು ಬಹಳಷ್ಟು ಕೆರಳಿಸಿದೆ. ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡುವುದು ಒಂದು ದೊಡ್ಡ ಕೆಲಸ. ಅದರಂತೆ ಪ್ರತಿಯೊಬ್ಬರೂ ಸಹ ಸಣ್ಣ ಸಣ್ಣ ಸಹಾಯವನ್ನು ಮಾಡುತ್ತಿದ್ದರು. ಆದರೆ ಸೋನು ಮಾತ್ರ ನನಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಸತ್ಯಾಂಶ ಏನೆಂದರೆ ಸೋನುಗೆ ಅಡುಗೆ ಮಾಡಲು ಬರುತ್ತದೆ ಎಂಬುದು. ಅದು ಕೂಡ ಸೀಸನ್ ಮುಗಿಯುವ ಹಂತದಲ್ಲಿ ತಿಳಿಸಿದ್ದಾರೆ. ಇದು ಕೂಡ ಕಿಚ್ಚನನ್ನು ಬಹಳಷ್ಟು ಕೆರಳಿಸಿದು, ಮುಲಾಜಿಲ್ಲದೆ ಎಲ್ಲರ ಮುಂದೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಲ್ಲದೆ ಸೋನು ಮಾತನಾಡುವ ಸಂಧರ್ಭದಲ್ಲಿ ಬಹಳಷ್ಟು ಬಾರಿ ಉಗಿಯುತ್ತಾರೆ. ಇದು ಕೂಡ ಕಿಚ್ಚನಿಗೆ ಇಷ್ಟವಾಗದೇ ವಾರ್ನ್ ಕೂಡ ಮಾಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಂತರ ಸೋನು ತನ್ನ ತಪ್ಪಿನ ಅರಿವಾಗಿ ಎಲ್ಲರ ಮುಂದೆ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top