fbpx
ಸಮಾಚಾರ

ಈ ವಾರ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಮತ್ತು ಸೇಫ್ ಆದ ಸ್ಪರ್ಧಿಗಳು ಯಾರು ಗೊತ್ತಾ?

ಬಿಗ್ ಬಾಸ್ OTT ಕಾರ್ಯಕ್ರಮ ಕೊನೆಯ ಹಂತ ತಲುಪಿದ್ದು, ಇದೀಗ ಇದು ಬಹಳ ರೋಚಕತೆಯಿಂದ ಕೂಡಿದೆ. ಈ ಗಗಳೇ ಬಿಗ್ ಬಾಸ್ ಮನೆಯಿಂದ ಒಟ್ಟು 7 ಮಂದಿ ಎಲಿಮಿನೇಟ್ ಆಗಿದ್ದು, 6 ಮಂದಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಕಠಿಣ ಪೈಪೋಟಿ ನಡೆಯುವುದು ಪಕ್ಕಾ ಎಂದು ಹೇಳಬಹುದು.

ಬಿಗ್ ಬಾಸ್ ಮನೆಯಲ್ಲಿ ಇದೀಗ ಜಯಶ್ರೀ ಆರಾಧ್ಯ, ಸೋನು ಶ್ರೀನಿವಾಸ್ ಗೌಡ, ನಂದಿನಿ, ಸೋಮಣ್ಣ ಮಾಚಿಮಾಡ, ಆರ್ಯವರ್ಧನ್ ಹಾಗೂ ಜಶ್ವಂತ್ ಬೋಪಣ್ಣ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಸಾನ್ಯ ಐಯ್ಯರ್, ರೂಪೇಶ್ ಮತ್ತು ರಾಕೇಶ್ ಸೇಫ್ ಆಗಿದ್ದಾರೆ. ಅಂದರೆ ಟಿವಿ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ಮೂವರು ಅಥವಾ ಮೂವರಲ್ಲಿ ಇಬ್ಬರು ಆದ್ರೂ ಪ್ರವೇಶಿಸುವುದು ಪಕ್ಕಾ ಎಂದು ಹೇಳಬಹುದು.

ನಾಮಿನೇಷನ್ ಪ್ರಕ್ರಿಯೆಗೂ ಮುನ್ನ ‘ಈ ವಾರದ ನಾಮಿನೇಷನ್‌ನಿಂದ ಯಾರು ಪಾರಾಗಬೇಕು?’ ಎಂಬ ಪ್ರಶ್ನೆಯನ್ನ ವೀಕ್ಷಕರಿಗೆ ವೂಟ್ ಆಪ್ ಮೂಲಕ ಕೇಳಲಾಗಿತ್ತು. ಇದರಲ್ಲಿ ಹೆಚ್ಚಿನ ವೋಟ್ಸ್ ಬಿದ್ದಿದ್ದು ರಾಕೇಶ್ ಅಡಿಗ ಅವರಿಗೆ. ಹೀಗಾಗಿ, ಈ ವಾರ ನಾಮಿನೇಷನ್‌ನಿಂದ ರಾಕೇಶ್ ಅಡಿಗ ಸೇವ್ ಆಗಿದ್ದಾರೆ.

ಇನ್ನು ಕ್ಯಾಪ್ಟನ್ ಆದ ರೂಪೇಶ್ ಅವರಿಗೆ ಬಿಗ್ ಬಾಸ್ ಸಾನ್ಯ ಅಯ್ಯರ್ ಹಾಗೂ ಜಶ್ವಂತ್ ಮಧ್ಯೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ನೀಡಿತ್ತು. ಇದರ ಅನುಸಾರ ರೂಪೇಶ್ ಜಸ್ವಂತ್ ಅವರನ್ನು ನಾಮಿನೇಟ್ ಮಾಡಿ ಇದಕ್ಕೆ ‘’ಜಶ್ವಂತ್ ಕಡಿಮೆ ಬಾರಿ ನಾಮಿನೇಟ್ ಆಗಿದ್ದಾರೆ’’ ಎಂಬ ಕಾರಣವನ್ನು ನೀಡಿದರು. ಇದು ಕೂಡ ಮನೆಯಲ್ಲಿ ದೊಡ್ಡ ಚರ್ಚೆಯಾಯಿತು.

ಒಟ್ಟಿನಲ್ಲಿ ಬಿಗ್ ಬಾಸ್ OTT ಕಾರ್ಯಕ್ರಮ ಮುಗಿಯುವ ಹಂತಕ್ಕೆ ತಲುಪಿದ್ದು, ಟಿವಿ ಕಾರ್ಯಕ್ರಮಕ್ಕೆ ಯಾವೆಲ್ಲ ಸ್ಪರ್ಧಿಗಳು ಪ್ರವೇಶಿಸುತ್ತಾರೆ ಎಂಬ ಕುತೂಹಲ ಜನರ ಮನಸಲ್ಲಿ ಮೂಡಿದೆ, ಇದಕೆಲ್ಲ ಉತ್ತರ ಇನ್ನು ಕೇವಲ ಒಂದು ವಾರಗಳಲ್ಲಿ ಸಿಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top