fbpx
ಸಮಾಚಾರ

ನಟ ಧನಂಜಯ್ ಮತ್ತು ಅದಿತಿ ಪ್ರಭುದೇವ್ ಮದುವೆಯಾಗಬೇಕಿತ್ತು ಆದರೆ ಅದನ್ನು ತಪ್ಪಿಸಿದ್ದು ಇವರೇ ! ಶಾಕಿಂಗ್ ಹೇಳಿಕೆ ನೀಡಿದ ಜಗ್ಗೇಶ್

ನಟ ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ್ ಮದುವೆಯಾಗುತ್ತಿದ್ದರಂತೆ. ಆದರೆ ಅದಿತಿ ಪ್ರಭುದೇವ್ ಒಪ್ಪದೇ ಇದ್ದ ಕಾರಣ ಇವರಿಬ್ಬರು ಮದುವೆಯಾಗಲಿಲ್ಲ. ಇದು ಗಾಸಿಪ್ ಅಲ್ಲ, ಏಕೆಂದರೆ ಈ ರೀತಿ ಅಚ್ಚರಿಯ ಸಂಗತಿ ತಿಳಿಸಿದ್ದು ಬೇರೆ ಯಾರು ಅಲ್ಲ ನವರಸ ನಾಯಕ ಜಗ್ಗೇಶ್.

ತೋತಾಪುರಿ ಸಿನಿಮಾದ ಪತ್ರಿಕಾಗೋಷ್ಠಿ ನಡೆದ ಸಂಧರ್ಭದದಲ್ಲಿ ಮಾತನಾಡಿದ ಜಗ್ಗೇಶ್ ‘ಡಾಲಿ ಧನಂಜಯ್ ಮತ್ತು ಅದಿತಿಯನ್ನು ಮದುವೆ ಮಾಡಿಸಲು ನಾನು ಪ್ರಯತ್ನ ಪಟ್ಟೆ. ಆದರೆ, ಅದು ಸಾಧ್ಯವಾಗಲಿಲ್ಲ’ ಏಕೆಂದರೆ ಇದಕ್ಕೆ ಅದಿತಿ ತಾಯಿ ಒಪ್ಪಲಿಲ್ಲ ಎಂದು ಜಗ್ಗೇಶ್ ತಿಳಿಸಿದರು.ಒಂದು ವೇಳೆ ಅದಿತಿ ತಾಯಿ ಒಪ್ಪಿದರೆ ಇಷ್ಟೊತ್ತಿಗೆ ಅದಿತಿ ಮತ್ತು ಧನಂಜಯ್ ಅವರ ನಿಶ್ಚಿತಾರ್ಥ ನಡೆದು ಮದುವೆಯ ಹಂತಕ್ಕೆ ಬರುತಿತ್ತು.

ಆದರೆ ಇದೀಗ ಇದು ನಡೆಯದೆ ಇದ್ದ ಕಾರಣ ಅದಿತಿ ಕಾಫೀ ನಾಡು ಮಂಗಳೂರಿನ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರು ಒಟ್ಟಿಗೆ ಇರುವ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ/ ಒಂದು ವೇಳೆ ಎಲ್ಲ ಹೇಳಿದಂತೆ ನಡೆದರೆ ಈ ಜೋಡಿ ಇದೆ ವರ್ಷ ಮದುವೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಮತ್ತೊಂದು ಕಡೆ ಡಾಲಿ ಧನಂಜಯ್ ಮತ್ತು ಅಮೃತಾ ಅವರ ಮದ್ಯೆ ಏನೋ ಇದೆ ಎಂಬ ಮಾತು ಸಹ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಆದರೆ ಇದಕ್ಕೆಲ್ಲ ಉತ್ತರ ಇವರಿಬ್ಬರೇ ನೀಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top