fbpx
ಸಮಾಚಾರ

ಸೆಪ್ಟೆಂಬರ್ 07: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಸೆಪ್ಟೆಂಬರ್ 7, 2022 ಬುಧವಾರ
ವರ್ಷ : 1944, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಾದಶೀ : Sep 07 03:05 am – Sep 08 12:05 am; ತ್ರಯೋದಶೀ : Sep 08 12:05 am – Sep 08 09:03 pm
ನಕ್ಷತ್ರ : ಉತ್ತರಾಷಾಢ: Sep 06 06:09 pm – Sep 07 04:00 pm; ಶ್ರವಣ: Sep 07 04:00 pm – Sep 08 01:46 pm
ಯೋಗ : ಶೋಭನ: Sep 07 04:49 am – Sep 08 01:15 am; ಅತಿಗಂಡ: Sep 08 01:15 am – Sep 08 09:40 pm
ಕರಣ : ಬಾವ: Sep 07 03:05 am – Sep 07 01:36 pm; ಬಾಲವ: Sep 07 01:36 pm – Sep 08 12:05 am; ಕುಲವ: Sep 08 12:05 am – Sep 08 10:34 am

Time to be Avoided
ರಾಹುಕಾಲ : 12:17 PM to 1:49 PM
ಯಮಗಂಡ : 7:43 AM to 9:14 AM
ದುರ್ಮುಹುರ್ತ : 11:53 AM to 12:42 PM
ವಿಷ : 07:38 PM to 09:05 PM
ಗುಳಿಕ : 10:46 AM to 12:17 PM

Good Time to be Used
ಅಮೃತಕಾಲ : 10:11 AM to 11:38 AM, 04:20 AM to 05:47 AM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:23 PM

 

 

ಮೇಷ (Mesha)


ದೂರ ಪ್ರಯಾಣದ ಸಾಧ್ಯತೆ ಕಂಡು ಬರಲಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಬಹಳ ಪ್ರಯತ್ನಬಲ ಹಾಕಿದಲ್ಲಿ ಮನಸ್ಸಿನ ಇಚ್ಛೆ ಪೂರೈಸುವುದು. ಹೊಸ ವ್ಯವಹಾರದಲ್ಲಿ ಆಸಕ್ತಿಯಿದ್ದರೂ ಪರಿಸ್ಥಿತಿ ನೋಡಿ ಮುಂದುವರಿಯಿರಿ.

ವೃಷಭ (Vrushabh)


ಭಿನ್ನಾಭಿಪ್ರಾಯದಿಂದ ನಿಮ್ಮಲ್ಲಿ ಅತಿಯದ ಜಗಳ ಉಂಟಾದೀತು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವಿರಿ. ನೀವು ಸಹಕರಿಸಿದಲ್ಲಿ ಮನಸ್ಸು ಸಮಾಧಾನಗೊಂಡೀತು. ದಿನಾಂತ್ಯ ಶುಭವಿದೆ.

ಮಿಥುನ (Mithuna)


ಆತ್ಮ ವಿಶ್ವಾಸ ಪ್ರಯತ್ನಬಲದಿಂದ ಮುಂದುವರಿದಲ್ಲಿ ಜಯವು ನಿಮ್ಮದಾಗಲಿದೆ.ಉದ್ಯಮ, ವ್ಯವಹಾರ, ಉದ್ಯೋಗದಲ್ಲಿ ಪ್ರಗತಿ, ಲಾಭವನ್ನು ಪಡೆಯಲಿದ್ದೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಕರ್ಕ (Karka)


ಮನಸ್ಸನ್ನು ಉದ್ವೇಗಕ್ಕೆ ಕೊಡದಿರಿ. ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳು ಇಲ್ಲದಿದ್ದರೂ ಮನಸ್ಸನ್ನು ನಿಯಂತ್ರಿಸಿರಿ. ವ್ಯಾಪಾರ, ವ್ಯವಹಾರಗಳು ಮಂದಗತಿಯಲ್ಲಿ ಅಲ್ಲದಿದ್ದರೂ ಆಭಿವೃದ್ಧಿ ಪಥದಲ್ಲಿ ಸಾಗಲಿವೆ.

ಸಿಂಹ (Simha)


ನಿಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ಬೇಸರ ಹಾಗೂ ದುಃಖ ಅನುಭವಿಸಲಿದ್ದೀರಿ. ಜೀವನದಲ್ಲಿ ವ್ಯಾಪಾರ, ವ್ಯವಹಾರದಲ್ಲಿ ತುಂಬಾ ಸಮಸ್ಯೆಗಳು ತೋರಿ ಬರಲಿವೆ. ವ್ಯವಹಾರದಲ್ಲಿ ಖರ್ಚುವೆಚ್ಚಗಳು ಆತಂಕ ತಂದಾವು.

ಕನ್ಯಾರಾಶಿ (Kanya)


ವ್ಯಾವಹಾರಿಕವಾಗಿ ನಿಮ್ಮ ಪ್ರಯತ್ನಬಲಕ್ಕೆ ಹೆಚ್ಚಿನ ಲಾಭ ಕಂಡು ಬರಲಿದೆ. ಮನೆಯಲ್ಲಿ ಅವಿವಾಹಿತರಿಗೆ ನೆಂಟಸ್ತಿಕೆಯ ಮಾತುಕತೆ ಫ‌ಲ ನೀಡಲಿದೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಉತ್ತಮ ಅವಕಾಶ ಲಭಿಸೀತು. ದಿನಾಂತ್ಯ ಶುಭ.

ತುಲಾ (Tula)


ನಿಹಲವಾರು ವಿಚಾರಗಳಲ್ಲಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಂಡಲ್ಲಿ ನಿಮ್ಮ ಭವಿಷ್ಯವು ಭವ್ಯವಾಗುವುದು. ವ್ಯಾಪಾರ, ವ್ಯವಹಾರದಲ್ಲಿ ಕಿರಿಕಿರಿಯಾದರೂ ಉತ್ತಮ ಫ‌ಲಗಳು ಅನುಭವಕ್ಕೆ ಬರಲಿವೆ.

ವೃಶ್ಚಿಕ (Vrushchika)


ಸಾಮಾಜಿಕವಾಗಿ ವ್ಯವಹಾರಗಳನ್ನು ತರಾತುರಿಯಿಂದ ಮುಂದುವರಿಸಿರಿ. ಯಾಕೆಂದರೆ ಸಾಮಾಜಿಕವಾಗಿ ಜನಪ್ರಿಯತೆ, ಗೌರವ, ಸ್ಥಾನಮಾನ ಸಿಗಲಿದೆ. ಕೌಟುಂಬಿಕ ವಾತಾವರಣದಲ್ಲಿ ಸ್ವಲ್ಪ ನೆಮ್ಮದಿ ಸಿಗಲಿದೆ. ದಿನಾಂತ್ಯ ನೆಮ್ಮದಿ ಸಿಗಲಿದೆ.

ಧನು ರಾಶಿ (Dhanu)


ಅವ್ಯಾವಹಾರಿಕವಾಗಿ ಹಾಗೂ ಕೌಟುಂಬಿಕವಾಗಿ ಹಿರಿಯರಿಂದ ಯೋಗ್ಯ. ಸಲಹೆಗಳು ಉಪಯುಕ್ತವಾಗಲಿವೆ. ಮನೆಯಲ್ಲಿ ಮಂಗಲಕಾರ್ಯದ ಪ್ರಸ್ತಾವಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ತೋರಿ ಬಂದೀತು.

ಮಕರ (Makara)


ಆರ್ಥಿಕ ಅಡಚಣೆಗಳೆಲ್ಲಾ ನಿಧಾನವಾಗಿ ದೂರವಾಗಲಿವೆ. ಸಾಮಾಜಿಕವಾಗಿ ಸ್ಥಾನಮಾನ, ಗೌರವ ಪ್ರತಿಷ್ಠೆ ಹೆಚ್ಚಲಿದೆ. ದೂರ ಸಂಚಾರದಲ್ಲಿ ಯಶಸ್ಸು ತೋರಿ ಬರಲಿದೆ. ಕೌಟುಂಬಿಕ ವ್ಯವಹಾರಗಳು ಸುಗಮ.

ಕುಂಭರಾಶಿ (Kumbha)


ಆತ್ಮ ವಿಶ್ವಾಸ, ಪ್ರಯತ್ನಬಲದಿಂದ ಮುಂದುವರಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ತಾಳ್ಮೆ ಹಾಗೂ ಸಂಯಮದಿಂದ ವರ್ತಿಸಿರಿ. ವ್ಯವಹಾರವು ಲಾಭಕರವಾಗಲಿದೆ. ಆರೋಗ್ಯದಲ್ಲಿ ಉತ್ತಮ ಅಭಿವೃದ್ಧಿ ಇದೆ.

ಮೀನರಾಶಿ (Meena)


ಹೊಸ ವಾತಾವರಣದಿಂದ ಮುಂದುವರಿದು ಸಂತೋಷ, ಸಮಾಧಾನ, ನಿಮಗೆ ದೊರಕಲಿದೆ. ನಿಮ್ಮ ಅದೃಷ್ಟವು ನಿಧಾನವಾಗಿ ಬರುವುದು. ಪ್ರಣಯ ಪ್ರಸಂಗದಿಂದ ದೂರ ವಿರುವುದೇ ಲೇಸು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top