fbpx
ಸಮಾಚಾರ

ಕಾಫೀ ನಾಡು ಚಂದು ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಇಲ್ಲವಾದರೆ ಬಿಗ್ ಬಾಸ್ ಬಾಯ್ಕಾಟ್ ಮಾಡುತ್ತೇವೆ! ಬಿಗ್ ಬಾಸ್ ವಿರುದ್ಧ ಹೋರಾಟಕ್ಕೆ ಇಳಿದ ಚಂದು ಫ್ಯಾನ್ಸ್

ಬಿಗ್ ಬಾಸ್ OTT ಕಾರ್ಯಕ್ರಮ ಮುಗಿಯುವ ಹಂತ ತಲುಪಿದೆ. ಬಿಗ್ ಬಾಸ್ ಟಿವಿ ಕಾರ್ಯಕ್ರಮಕ್ಕೆ ಯಾವೆಲ್ಲ ಸ್ಪರ್ಧಿಗಳು ಹೋಗುತ್ತಾರೆ ಎಂಬ ಕುತೂಹಲ ಮನೆ ಮಂದಿಗಿದೆ. ಇದಲ್ಲದೆ ಬಿಗ್ ಬಾಸ್ ಸೀಸನ್ 9 ಶುರುವಾಗುವ ಮುನ್ಸೂಚನೆಯನ್ನು ಕಲರ್ಸ್ ಕನ್ನಡ ವಾಹಿನಿ ಪ್ರೊಮೊ ಮೂಲಕ ತಿಳಿಸಿದೆ. ಇವೆಲ್ಲದರ ನಡುವೆ ಇದೀಗ #ಬಾಯ್ಕಾಟ್ ಬಿಗ್ ಬಾಸ್ ಎಂಬ ಅಭಿಯಾನ ಶುರುಮಾಡಲು ಜನರು ನಿರ್ಧರಿಸುತ್ತಿದ್ದಾರೆ. ಅದು ಕೂಡ ಕಾಫೀ ನಾಡು ಚಂದು ಅವರ ಪರವಾಗಿ.

ಬಿಗ್ ಬಾಸ್ OTT ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಜನರಲ್ಲಿ ಅನೇಕ ಹೆಸರು ಕೇಳಿ ಬರುತ್ತಿತ್ತು. ಅದರಲ್ಲೂ ಕಾಫೀ ನಾಡು ಚಂದು ಅವರ ಹೆಸರು ಕೂಡ ಕೇಳಿ ಬರುತ್ತಿತ್ತು. ಜನರು ಚಂದು ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರೆ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ ಇವರ ಆಸೆಗೆ ತನ್ನೇರು ಎರೆಚಿತು ಬಿಗ್ ಬಾಸ್. ಆದರೆ ಇದೀಗ ಇದಕ್ಕೆ ಸುಮ್ಮನಾಗದ ಚಂದು ಅವರನ್ನು ಬಿಗ್ ಬಾಸ್ ಟಿವಿ ಕಾರ್ಯಕ್ರಮಕ್ಕಾದರೂ ಕಳುಹಿಸಿ ಎಂದು ಆಗ್ರಹಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಕಾಫೀ ನಾಡು ಚಂದು ಅವರಿಗೂ ಸಹ ಆಸೆಯಿತ್ತು. ಇದಕ್ಕಾಗಿ ಜನರ ಬಳಿ ಬಂದು ತಮ್ಮನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಕೊಡಿ ಎಂದು ಸಹ ಕೇಳಿಕೊಂಡರು. ಹೀಗಾಗಿ ಜನರು ಇದರ ಕುರಿತು ಅಭಿಯಾನ ಕೂಡ ಮಾಡಿದ್ದರು. ಇದಲ್ಲದೆ ಜನರಿಗೆ ಚಂದು ಬಿಗ್ ಬಾಸ್ ಮನೆಗೆ ಹೋಗಲು ಎಲ್ಲ ಅರ್ಹತೆ ಇದೆ ಎಂದು ಬಲವಾಗಿ ನಂಬಿದ್ದಾರೆ. ಹೀಗಾಗಿ ಚಂದು ಬಿಗ್ ಬಾಸ್ ಮನೆಗೆ ಹೋಗಬೇಕೆಂದು ಆಗ್ರಹಿಸುತ್ತಿದ್ದಾರೆ. ಇಲ್ಲವಾದರೆ ತಾವು ಬಿಗ್ ಬಾಸ್ ಅನ್ನು ಬಾಯ್ಕಾಟ್ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಜನರ ಆಕ್ರೋಶಕ್ಕೆ ಮಣಿದು ಬಿಗ್ ಬಾಸ್ ಚಂದು ಅವರನ್ನು ಬಿಗ್ ಬಾಸ್ ಮನೆಗೆ ಕರೆಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top