ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿದರು ಅವರ ನೆನಪು ಮಾತ್ರ ಸದಾ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಅಪ್ಪು ನಿಧನದ ನಂತರ ಇಂದಿಗೂ ಅಪ್ಪು ಹೆಸರಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದೆ. ಅಪ್ಪು ನಿಧನಕ್ಕೂ ಮುನ್ನ ಹಲವಾರು ಕನಸುಗಳನ್ನು ಕಂಡಿದ್ದರು. ಈ ಕುರಿತು ರಾಘಣ್ಣ ಹಲವು ಬಾರಿ ಹೇಳಿದ್ದಾರೆ. ಇದೀಗ ಇದಲ್ಲದೆ ಮೋಹಕ ತಾರೇ ರಮ್ಯಾ ಅಪ್ಪು ಕಂಡ ಕನಸಿನ ಕುರಿತು ಮಾತನಾಡಿದ್ದಾರೆ.
This is true- Appu and I had spoken about it too. We all miss him dearly. Best wishes to @darlingkrishnaa and the team of #Luckyman https://t.co/7llbmVXXqp
— Divya Spandana/Ramya (@divyaspandana) September 7, 2022
‘ಅಭಿ’, ‘ಅರಸು’, ‘ಆಕಾಶ್’ ಸಿನಿಮಾದಲ್ಲಿ ರಮ್ಯಾ ಮತ್ತು ಪುನೀತ್ ಜೊತೆಯಾಗಿ ನಟಿಸಿದ್ದರು. ಇವರಿಬ್ಬರ ಮದ್ಯೆ ಒಳ್ಳೆ ಸ್ನೇಹ ಸಂಬಂಧವಿತ್ತು. ಹೀಗಾಗಿ ಅಪ್ಪು ಒಂದು ದೊಡ್ಡ ಕನಸನ್ನು ಕಂಡಿದ್ದರಂತೆ. ಅದೇನೆಂದರೆ ಡಾ. ರಾಜ್ಕುಮಾರ್ ಅಭಿನಯದ ‘ನಾ ನಿನ್ನ ಮರೆಯಲಾರೆ’ ಸಿನಿಮಾ 1976ರಲ್ಲಿ ಬಿಡುಗಡೆ ಆಯಿತು. ನಾಯಕಿಯಾಗಿ ಲಕ್ಷ್ಮಿ ನಟಿಸಿದ್ದರು. ಇದು ಅಭಿಮಾನಿಗಳಿಗೆ ಬಹಳ ಇಷ್ಟವಾದ ಸಿನಿಮಾವಾಗಿತ್ತು. ಹೀಗಾಗಿ ಕೆಲವು ಟ್ವಿಸ್ಟ್ ನೊಂದಿಗೆ ಈ ಸಿನಿಮಾವನ್ನು ಮತ್ತೆ ರಿ-ಕ್ರಿಯೇಟ್ ಮಾಡಬೇಕೆಂದು ಅಪ್ಪು ಕನಸು ಕಂಡಿದ್ದರಂತೆ.
ಈ ಸಿನಿಮಾದಲ್ಲಿ ಲಕ್ಷ್ಮಿ ಮಾಡಿದ್ದ ಪಾತ್ರಕ್ಕೆ ರಮ್ಯಾ, ಅಣ್ಣಾವ್ರ ಪಾತ್ರಕ್ಕೆ ಪುನೀತ್ ಬಣ್ಣ ಹಚ್ಚಬೇಕಿತ್ತು. ಆದರೆ ಅಪ್ಪು ಅವರ ಈ ಅಸೆ ಆಸೆಯಾಗಿಯೇ ಉಳಿಯಿತು. ಇತ್ತೀಚಿಗೆ ಲಕ್ಕಿ ಮ್ಯಾನ್ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಸಿನಿಮಾದ ನಾಯಕರಾದ ಡಾರ್ಲಿಂಗ್ ಕೃಷ್ಣ ಅಪ್ಪು ಕಂಡ ಕನ್ಸೈನ ಕುರಿತು ಒಂದು ಜಾಹಿರಾತಿನಲ್ಲಿ ತಿಳಿಸಿದರು. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಅಪ್ಪು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅಪ್ಪು ಕಂಡ ಆಸೆಯ ಕುರಿತು ಟ್ವೀಟ್ ಮಾಡಿರುವ ರಮ್ಯಾ ‘ಇದು ನಿಜ. ಅಪ್ಪು ಮತ್ತು ನಾನು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ಅವರನ್ನು ನಾವು ತುಂಬ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ‘ಲಕ್ಕಿ ಮ್ಯಾನ್’ ಚಿತ್ರತಂಡಕ್ಕೆ ಹಾಗೂ ಡಾರ್ಲಿಂಗ್ ಕೃಷ್ಣ ಅವರಿಗೆ ಶುಭ ಕೋರಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
