fbpx
ಸಮಾಚಾರ

ಕಿಚ್ಚನ ಬಳಿ ಬೈಸಿಕೊಂಡರು ಬದಲಾಗಲಿಲ್ಲ ಸೋನು ನಡವಳಿಕೆ! ಮಾತನಾಡುತ್ತಾ ಮತ್ತೆ ‘ಥೂ’ ಎಂದು ಬೈದ ರೀಲ್ ಸುಂದರಿ

ಬಿಗ್ ಬಾಸ್ ಮನೆಯ ಮೋಸ್ಟ ಎಂಟರ್ಟೈನಿಂಗ್ ಫ್ಯಾಕ್ಟರ್ ಎಂದರೆ ಅದು ಸೋನು ಗೌಡ. ಬಿಗ್ ಬಾಸ್ ಮನೆಯ ಪ್ರತಿ ಸ್ಪರ್ಧಿಗೂ ಅವರು ನಗಿಸುತ್ತಾರೆ. ಅದರಲ್ಲೂ ಕೆಲವು ವಿಚಾರವಾಗಿ ಚರ್ಗೆಗೆ ಕಾರಣರಾಗುತ್ತಾರೆ. ಇದಲ್ಲದೆ ಮಾತಿನ ವೇಳೆ ಇವರು ‘ಥೂ’ ಎಂದು ಉಪಯೋಗಿಸುತ್ತಾರೆ. ಇದಕ್ಕಾಗಿ ಕಿಚ್ಚ ಇವರಿಗೆ ಬೈದಿದ್ದು ಉಂಟು. ಆದರೆ ಇಷ್ಟೆಲ್ಲಾ ಆದರೂ ಕೂಡ ಈ ವೈರಲ್ ಹುಡುಗಿ ಕಿಚ್ಚನ ಮಾತಿಗೆ ಬೆಲೆ ಕೊಡದೆ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ.

ಇತ್ತೀಚಿಗೆ ಸೋನುಗೆ ಕಳಪೆ ಪಟ್ಟ ನೀಡಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಸೋನುಗೆ ಕಳಪೆ ಪಟ್ಟ ನೀಡಿ ಜೈಲಿಗೆ ಕಳುಹಿಸಿದ್ದು ರಾಕೇಶ್ ಎಂದು ಸೋನುಗೆ ತಿಳಿದಿರಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಸೋನು ‘ನಮ್ಮ ಜತೆಯೇ ಇದ್ದುಕೊಂಡು ನಮಗೆ ಮೋಸ ಮಾಡುತ್ತಾರೆ. ಇಷ್ಟೆಲ್ಲ ಕ್ಲೋಸ್ ಇದ್ದವರೇ ಕಳಪೆ ಪಟ್ಟ ನೀಡುತ್ತಾರೆ ಥೂ’ ಎಂದು ಜೈಲಿನಲ್ಲಿ ಕುಳಿತುಕೊಂಡು ರಾಕೇಶ್ ಗೆ ಬೈದಿದ್ದಾರೆ. ಈ ವಿಷ್ಯ ವೀಕೆಂಡ್ ನಲ್ಲಿ ಚರ್ಗೆಗೆ ಬಂದಿತ್ತು.

ಈ ವೇಳೆ ಕಿಚ್ಚ ಸುದೀಪ್ ‘ರಾಕೇಶ್ ನಿಮಗೆ ಒಳ್ಳೆಯದಾಗಲಿ ಎಂದು ಆ ರೀತಿ ಮಾಡಿದರು. ರಾಕೇಶ್ ರೀತಿಯ ಗೆಳೆಯ ಯಾರಿಗೂ ಸಿಗಲ್ಲ. ಹಾಗಿದ್ದರೂ ಕೂಡ ಅವರಿಗೆ ಥೂ ಎಂಬ ಬೈಗುಳ’ ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಸೋನು ಗೆ ಬೈದು ಕ್ಲಾಸ್ ತೆಗೆದುಕೊಂಡರು. ಆದರೆ ಇಷ್ಟೆಲ್ಲಾ ನಡೆದರು ಕೂಡ ಸೋನು ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ.

ಇತ್ತೀಚಿಗೆ ರಾಕೇಶ್ ಮತ್ತು ಸೋನು ಜಗಳವಾಡುತ್ತಿದ್ದರು. ಈ ವೇಳೆ ಸೋನು ರಾಕೇಶ್ ಗೆ ‘ಥು’ ಎಂದು ಬೈದಿದ್ದಾರೆ. ಇದನ್ನು ಕೇಳಿಸಿಕೊಂಡ ರಾಕಿ ಅಷ್ಟೇ ಅಲ್ಲ, ‘ಸುದೀಪ್​ ಸರ್ ಕಳೆದ ವಾರ ಬೈದರೂ ನಿನ್ನ ನಡವಳಿಕೆ ಹಾಗೇ ಇದೆ. ಮತ್ತೆ ಬೈಸಿಕೊಳ್ಳಬೇಕು ಅಂತ ಆಸೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ. ‘ನಾನು ಬಯ್ಯುವಾಗ ಥೂ ಎಂದು ಹೇಳಲೇ ಇಲ್ಲ’ ಎಂದು ಸೋನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಈ ವಾರ ಈ ವಿಷಯ ಚರ್ಚೆಗೆ ಬರುವ ಎಲ್ಲ ಸಾಧ್ಯತೆಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top