ಆಸ್ಟ್ರೇಲಿಯಾ ತಂಡದ ಸೀಮಿತ ಓವರ್ ನ ನಾಯಕ ಆ್ಯರೊನ್ ಫಿಂಚ್ ತಮ್ಮ ಅಭಿಮಾನಿಗಳಿಗೆ ಒಂದು ಶಾಕಿಂಗ್ ಸುದ್ದಿ ನೀಡಿದ್ದಾರೆ. ಯಾವುದೇ ಸುಳಿವು ನೀಡದೆ ದಿಡೀರನೆ ಇವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ನಿವೃತಿ ಘೋಷಿಸಿದ್ದಾರೆ. ಇದು ಇವರ ಅಭಿಮಾನಿಗಳಿಗೆ ಬಹಳಷ್ಟು ಬೇಸರ ತಂದಿದೆ.
A true champion of the white-ball game.
Aaron Finch will retire from one-day cricket after tomorrow’s third and final Dettol ODI vs New Zealand, with focus shifting to leading Australia at the #T20WorldCup pic.twitter.com/SG8uQuTVGc
— Cricket Australia (@CricketAus) September 9, 2022
ಆ್ಯರೊನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತಿ ಘೋಷಿಸಿದ್ದಾರೆ. ಆದರೆ ಸೆಪ್ಟಂಬರ್ 11 ಭಾನುವಾರದಂದು ಫಿಂಚ್ ನ್ಯೂಜಿಲೆಂಡ್ ತಂಡದ ಎದುರು ತಮ್ಮ ಕೊನೆಯ ಏಕದಿನ ಪಂದ್ಯ ಆಡಲಿದ್ದು, ಇದಾದ ಬಳಿಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಲಲಿದ್ದಾರೆ. ಆದರೆ, ಈ ವರ್ಷ ಆಸ್ಟ್ರೇಲಿಯಾದಲ್ಲೇ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಫಿಂಚ್ ಸೀಮಿತ ಓವರ್ ನಲ್ಲಿ ಆಡುವ ಅದ್ಭುತವಾದ ಬ್ಯಾಟ್ಸಮನ್. ಆದರೆ ಇತ್ತೀಚಿಗೆ ಕಳೆದ ಕೆಲವು ತಿಂಗಳಿಂದ ಇವರು ಕಳಪೆ ಫಾರ್ಮ್ ಅನುಭವಿಸುತ್ತಿದ್ದಾರೆ. ಏಕೆಂದರೆ ಸತತ ಕೆಲವು ತಿಂಗಳುಗಳಿಂದ ಇವರ ಬ್ಯಾಟಿನಿಂದ ರನ್ ಗಳು ಹರಿದು ಬರುತ್ತಿಲ್ಲ. ಇದಲ್ಲದೆ ಫಿಂಚ್ ತಮ್ಮ ಕೊನೆಯ 7 ಏಕದಿನ ಪಂದ್ಯದಲ್ಲಿ ಕೇವಲ 26 ರನ್ ಗಳನ್ನು ಮಾತ್ರ ಸಿಡಿಸಿದ್ದಾರೆ. ವಿಪರ್ಯಾಸ ಎಂದರೆ ಇದರಲ್ಲಿ ಅವರು ಮೂರು ಬಾರಿ ಡಕ್‌ಔಟ್ ಆಗಿದ್ದಾರೆ. ಇವೆಲ್ಲ ಅಂಶಗಳನ್ನು ಪರಿಗಣಿಸಿ ಫಿಂಚ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ನಿವೃತಿ ಘೋಷಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
