fbpx
ಸಮಾಚಾರ

” ಅನುಷ್ಕಾ ಶರ್ಮಾ ಐರನ್ ಲೇಡಿ, ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್ ” ವಿರಾಟ್ ಸಾಧನೆಯ ಕುರಿತು ಮಾತನಾಡಿದ ಪಾಕಿಸ್ತಾನದ ಬೌಲರ್ ಶೋಯಬ್ ಅಖ್ತರ್

ಕಳೆದ ಕೆಲವು ವರ್ಷಗಳಿಂದ ಮಂಕಾಗಿದ್ದ ವಿರಾಟ್ ಬ್ಯಾಟ್ ಅಘ್ಘಾನಿಸ್ತಾನ ತಂಡದ ವಿರುದ್ಧ ಅಬ್ಬರಿಸಿದೆ. ಬರೋಬ್ಬರಿ 1021 ದಿನಗಳ ಬಳಿಕ ಅಂತಾರಾಷ್ಟ್ರಿಯ ಕ್ರಿಕೆಟ್ ನಲ್ಲಿ ವಿರಾಟ್ ಶತಕ ಸಿಡಿಸಿದ್ದಾರೆ. ಸಹಜವಾಗಿ ವಿರಾಟ್ ಶತಕದಿಂದ ಇವರ ಅಭಿಮಾನಿಗಳಿಗೆ ಬಹಳಷ್ಟು ಸಂತೋಷವಾಗಿದೆ. ಇದಲ್ಲದೆ ವಿರಾಟ್ ಶತಕದ ಕುರಿತು ಮೊದಲ ಬಾರಿ ಪಾಕಿಸ್ತಾನ ತಂಡದ ಮಾಜಿ ಬೌಲರ್ ಶೋಯಬ್ ಅಖ್ತರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್ ನ ಸೂಪರ್ 4 ಹಂತದಲ್ಲಿ ಅಘ್ಘಾನಿಸ್ತಾನ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೇವಲ 61 ಎಸೆತದಲ್ಲಿ 122 ರನ್ ಗಳನ್ನು ಪೂರೈಸಿದರು. ಇದರಲ್ಲಿ ಒಟ್ಟು 12 ಫೋರ್ ಮತ್ತು 6 ಸಿಕ್ಸರ್ ಗಳು ಮೂಡಿತ್ತು. ಶತಕ ಸಿಡಿಸುತ್ತಿದ್ದಂತೆ ವಿರಾಟ್ ಸಂಭ್ರಮಿಸಿದರು. ಇದಾದ ಬಳಿಕ ಶತಕವನ್ನು ಸದಾ ಕಾಲ ತನ್ನ ಬೆಂಬಲಕ್ಕೆ ನಿಂತ ಮಡದಿ ಅನುಷ್ಕಾ ಶರ್ಮ ಮತ್ತು ಇವರ ಮುದ್ದಾದ ಮಗಳು ವಮಿಕಾಗೆ ಸಮರ್ಪಿಸುವುದಾಗಿ ಕೊಹ್ಲಿ ಹೇಳಿಕೊಂಡಿದ್ದರು.

ಈ ವಿಷಯ ಕುರಿತು ಸ್ಥಳೀಯ ಮಾಧ್ಯಮದ ಜೊತೆ ಮಾತನಾಡಿದ ಶೋಯಬ್ ಅಖ್ತರ್ ” ವಿರಾಟ್ ಕೊಹ್ಲಿಯ ಈ ಕಂಬ್ಯಾಕ್ ಹಿಂದೆ ನಿಂತಿರುವ ಅನುಷ್ಕಾ ಶರ್ಮಾರನ್ನು ನಾನು ಐರನ್ ಲೇಡಿ ಎನ್ನಲು ಬಯಸುತ್ತೇನೆ. ನನ್ನ ಪ್ರಕಾರ ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್ ” ಎಂದು ತಿಳಿಸಿದ್ದಾರೆ. ಇದಲ್ಲದೆ ವಿರಾಟ್ ವಿಶ್ವಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ವಿಶ್ವಕ್ರಿಕೆಟ್‍ನ ಸಾಧಕರ ಪಟ್ಟಿಯಲ್ಲಿ ಇವರ ಹೆಸರು ಸದಾ ಕಾಲ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top