” ವೈದ್ಯೋ ನಾರಾಯಣ ಹರಿ ” ಎಂಬ ಮಾತು ಎಷ್ಟು ಸತ್ಯ ಅಲ್ವ. ವೈದ್ಯರು ರೋಗೋಗಿಗಳ ಪ್ರಾಣ ಉಳಿಸಲು ಎಷ್ಟೂ ಬಾರಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಇದಕ್ಕಾಗಿ ಹಲವಾರು ಉದಾಹರಣೆಗಳು ಜಗತ್ತಲ್ಲಿ ನಡೆದಿದೆ. ಆದರೆ ಇತ್ತೀಚಿಗೆ ವೈದ್ಯರೊಬ್ಬರು ರೋಗಿಯ ಪ್ರಾಣ ಉಳಿಸಲು ಬರೋಬ್ಬರಿ 3 km ಓಡಿಕೊಂಡು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಹಳಷ್ಟು ಇರುತ್ತದೆ. ಅದರಲ್ಲೂ ಮಳೆ ಬಂದರೆ ಬೆಂಗಳೂರು ನಗರಗಳು ಕೆರೆಯಂತಾಗುತ್ತವೆ. ಈ ವೇಳೆ ಸವಾರರಿಗೆ ಗಾಡಿ ಓಡಿಸಲು ಬಹಳಷ್ಟು ಕಷ್ಟವಾಗುತ್ತದೆ. ಇದೆ ರೀತಿಯ ಸಮಸ್ಯೆಯನ್ನು ಮಣಿಪಾಲ್ ಆಸ್ಪತ್ರೆ ವೈದ್ಯ ಗೋವಿಂದ್ ನಂದಕುಮಾರ್ ಅನುಭವಿಸಿದರು.
.@SoumiEmd @CCellini @andersoncooper @WCMSurgery @nycHealthy @NYCRUNS https://t.co/54zt4H5SxY #runtowork @ManipalHealth #togetherstronger pic.twitter.com/21NYbZgraX
— Govind Nandakumar MD (@docgovind) September 12, 2022
ಇವರು ಪ್ರತಿನಿತ್ಯ ಕನ್ನಿಂಗ್ ಹ್ಯಾಂ ರೋಡ್ನಿಂದ ಸರ್ಜಾಪುರದ ಆಸ್ಪತ್ರೆಯವರೆಗೆ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಆಗಸ್ಟ್ 30 ರಂದು ಸುರಿದ ಬಾರಿ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಇವರು ಆಸ್ಪತ್ರೆಗೆ ತೆರಳಲು ಸುಮಾರು 1ಗಂಟೆಗೂ ಅಧಿಕ ಸಮಯ ಬೇಕಾಗಿತ್ತು. ಇದಲ್ಲದೆ ಅದೇ ದಿನ ಇವರಿಗೆ ಲಾಪ್ರೊಸ್ಕೋಪಿಕ್ ಶಸ್ತ್ರಚಿಕೆತ್ಸೆ ಮಾಡುವ ಜವಬ್ದಾರಿ ಕೂಡ ಬಿದ್ದಿತ್ತು. ಹೀಗಾಗಿ ಇವರು ಒಂದು ಕ್ಷಣವೂ ಯೋಚ್ನೆ ಮಾಡದೇ ತಮ್ಮ ಕಾರಿನಿಂದ ಇಳಿದು ಸುಮಾರು 3 km ತಮ್ಮ ಆಸ್ಪತ್ರೆಯವರೆಗೂ ಓಡಿಕೊಂಡು ಹೋಗಿದ್ದಾರೆ. ಸುಮಾರು 3 km ಓಡಿಕೊಂಡು ಹೋಗಿ ಆಸ್ಪತ್ರೆಯನ್ನು ಸರಿಯಾದ ಸಮಯಕ್ಕೆ ತಲುಪಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಪೂರೈಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
