fbpx
ಸಮಾಚಾರ

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದ ಕಾಫೀ ನಾಡು ಚಂದು ಅವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್! ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬದ ಹಾಡನ್ನು ಹಾಡುತ್ತ ಸಕತ್ ಕ್ರೇಜ್ ಹುಟ್ಟಿಸುತ್ತಿದ್ದ ಕಾಫೀ ನಾಡು ಚಂದು ಅವರಿಗೂ ಕಾಡಿದೆ ಹ್ಯಾಕರ್ಸ್ ಚಿಂತೆ. ಹಲವಾರು ಸೆಲಬ್ರಿಟಿಗಳ ಖಾತೆಯನ್ನು ಹ್ಯಾಕ್ ಮಾಡುತ್ತಿದ್ದ ಖದೀಮರು ಇದೀಗ ಚಂದು ಅವರ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ.

ನಾನು ಶಿವಣ್ಣ, ಪುನೀತ್ ಅಣ್ಣನ ಅಭಿಮಾನಿ ಎಂದು ಹಲವಾರು ಸೆಲಬ್ರಿಟಿಗಳು ಮತ್ತು ಸಾಮಾನ್ಯ ಜನರಿಗೆ ಹ್ಯಾಪಿ ಬರ್ತಡೇ ಹಾಡನ್ನು ಮಾಡುತ್ತಿದ್ದ ಕಾಫೀ ನಾಡು ಚಂದು ಅವರ ಖಾತೆಯನ್ನು ಹ್ಯಾಕರ್ಸ್ ಗಳು ಟಾರ್ಗೆಟ್ ಮಾಡಿದ್ದಾರೆ. ಹ್ಯಾಕ್ ಮಾಡಿದ ನಂತರ ಸ್ಟೋರಿ ಹಾಕಿರುವ ಇವರು ಮೊದಲ ಸ್ಟೋರಿಯಲ್ಲಿ ಫ್ರೀ ಸಿನಿಮಾಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ಎಂದು ಒಂದು ಲಿಂಕ್ ಶೇರ್ ಮಾಡಲಾಗಿತ್ತು. ಇದಾದ ನಂತರ ಮತ್ತೊಂದು ಸ್ಟೋರಿಯಲ್ಲಿ 150ಕ್ಕೂ ಹೆಚ್ಚು ಹಾಟ್ ಹಾಟ್ ವಿಡಿಯೋ ನೋಡಲು ಲಿಂಕ್‌ ಇಲ್ಲಿದೆ ಎಂದು ಎರಡು ಲಿಂಕ್ ಶೇರ್ ಮಾಡಲಾಗಿತ್ತು.

 

 

ಇಷ್ಟಕ್ಕೆ ಸುಮ್ಮನಿರದ ಇವರು ಚಂದು ಕರ್ನಾಟಕದ ಶಾಲು ಧರಿಸಿರುವ ವಿಡಿಯೋ ಹಾಕಿ ‘ಚಂದು ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿದೆ. ಹ್ಯಾಕ್ ಮಾಡಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಕಿಡಿಗೇಡಿಗಳು ಬರೆದುಕೊಂಡಿದ್ದರು.

 

 

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಇವರು ಇತ್ತೀಚಿಗೆ ತಮ್ಮ ಆರಾಧ್ಯ ದೈವ ಶಿವಣ್ಣ ಅವರನ್ನು ಭೇಟಿ ಮಾಡಿದ್ದರು. ಶಿವಣ್ಣನನ್ನು ಭೇಟಿ ಮಾಡಲು ಸಹಾಯ ಮಾಡಿದ ಅನುಶ್ರೀ ಅವರಿಗೆ ಧನ್ಯವಾದವನ್ನು ಸಹ ತಳಿಸಿದರು. ಇದಲ್ಲದೆ ಅನುಶ್ರೀ ಚಂದುಲಾ ವರಿಗೆ ಒಂದು ವಿಶೇಷವಾದ ಉಡುಗೊರೆಯನ್ನು ಸಹ ನೀಡಿದರು. ಇಷ್ಟೊಂದು ಖ್ಯಾತಿ ಗಳಿಸಿದ ಚಂದು ಅವರ ಖಾತೆಯನ್ನು ಖದೀಮರು ಹ್ಯಾಕ್ ಮಾಡಿದ್ದು, ಇದರ ಕುರಿತು ಚಂದು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top