fbpx
ಸಮಾಚಾರ

ಈ ಬಾರಿ ಬಿಗ್ ಬಾಸ್ ಮನೆಗೆ ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ ಹೋಗಲಿದ್ದಾರಂತೆ?

ಬಿಗ್ ಬಾಸ್ OTT ಕಾರ್ಯಕ್ರಮ ಮುಗಿಯುವ ಹಂತ ತಲುಪಿದೆ. ಟಿವಿ ಕಾರ್ಯಕ್ರಮ ಶುರುವಾಗುವ ಎಲ್ಲ ಮುನ್ಸೂಚನೆಯನ್ನು ಬಿಗ್ ಬಾಸ್ ನೀಡುತ್ತಿದೆ. ಹೀಗಾಗಿ ಬಿಗ್ ಬಾಸ್ ಟಿವಿ ಕಾರ್ಯಕ್ರಮಕ್ಕೆ ಯಾವೆಲ್ಲ ಸ್ಪರ್ಧಿಗಳು ಹೋಗಲಿದ್ದಾರೆ ಎಂಬ ಚರ್ಚೆಗಳು ಬಲವಾಗಿ ನಡೆಯುತ್ತಿದೆ. ಈ ವೇಳೆ ಅತಿ ಹೆಚ್ಚು ಕೇಳಿಬರುತ್ತಿರುವ ಹೆಸರು ಎಂದರೆ ಅದು ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿರುವ ಅನಿರುದ್ಧ ಅವರು.

ಬಿಗ್ ಬಾಸ್ ಸೀಸನ್ 9 ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗುತ್ತಿದೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿ ಪ್ರೊಮೊ ಕೂಡ ಬಿಡುಗಡೆ ಮಾಡಿದೆ. ಯಾವಾಗ ಈ ವಿಷಯ ಹರಿದಾಡಲು ಶುರುವಾಯಿತೋ ಅವಾಗ ಜೊತೆ ಜೊತೆಯಲಿ ಸೆಟ್ ತುಂಬಾ ಕೇಳಿ ಬರುತ್ತಿದ್ದ ವಿಷಯ ಎಂದರೆ ಈ ಬಾರಿ ಅನಿರುದ್ಧ ಬಿಗ್ ಬಾಸ್ ಮನೆಗೆ ಹೋಗುತ್ತಾರಂತೆ. ಅದಕ್ಕಾಗಿ ಅವರು ಧಾರಾವಾಹಿ ಬಿಡಲಿದ್ದಾರೆ ಎಂದು. ಇದಲ್ಲದೆ ಬಿಗ್ ಬಾಸ್ ಕೂಡ ಇವರಿಗೆ ಕರೆ ಮಾಡಿ ಆಹ್ವಾನಿಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಆದರೆ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಧಾರವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಿಗೆ ಅನಿರುಧ್ ಅವರನ್ನು ತೆಗೆದುಕೊಳ್ಳಬಾರದೆಂದು ಮನವಿ ಮಾಡಿದ್ದಾರೆ. ಇದಾಗಿಯೂ ಸಹ ಬಿಗ್ ಬಾಸ್ ಸೀಸನ್ 9 ಕ್ಕೆ ಹೋಗಲು ಅನಿರುಧ್ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಕಲರ್ಸ್ ಕನ್ನಡ ವಾಹಿನಿಯಾಗಲಿ ಅಥವಾ ಅನಿರುಧ್ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇದು ಸತ್ಯಾನಾ ಅಥವಾ ಸುಳ್ಳ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top