fbpx
ಸಮಾಚಾರ

ಜಗತ್ಪ್ರಸಿದ್ದ ಕೊಹಿನೂರ್ ವಜ್ರ ಸಿಕ್ಕಿದ್ದು ನಮ್ಮ ಕರ್ನಾಟಕದಲ್ಲಿ! ಯಾವುದು ಗೊತ್ತಾ ಕರ್ನಾಟಕದ ಕೊಹಿನೂರ್ ನಗರ

ಇತ್ತೀಚಿಗೆ ಬ್ರಿಟನ್ ರಾಣಿ ಎಲಿಜಬೆತ್ ನಿಧನರಾದರು. ಇವರ ನಿಧನದ ನಂತರ ಇವರ ಕಿರೀಟದ ಮೇಲೆ ಇದ್ದ ಕೊಹಿನೂರ್ ವಜ್ರದ ಕುರಿತು ಹಲವಾರು ಚರ್ಚೆಗಳು ನಡೆಯಲು ಶುರುವಾದವು. ಅಸಲಿಗೆ ಇದು ಭಾರತಕ್ಕೆ ಸೇರಿದು ಹೀಗಾಗಿ ಇದನ್ನು ಭಾರತಕ್ಕೆ ನೀಡಬೇಕೆಂದು ವಾದಗಳು ನಡೆಯುತ್ತಿದ್ದವು. ಆದರೆ ಅಸಲಿಗೆ ಇದು ನಮ್ಮ ಕರ್ನಾಟಕದ್ದು ಎಂಬುದು ಯಾರಿಗೂ ತಿಳಿದಿಲ್ಲ. ಈ ಕುರಿತು ಇತಿಹಾಸದಲ್ಲಿ ದಾಖಲೆಗಳು ಕೂಡ ಲಭ್ಯವಾಗಿದೆ.

 

 

ಇತ್ತೀಚಿಗೆ ಹೆಚ್ಚು ಚರ್ಚೆಯಾಗುತ್ತಿರುವ ಬ್ರಿಟನ್ ರಾಣಿ ಎಲಿಜಬೆತ್ ಅವರ ಕಿರೀಟದ ಮೇಲೆ ಇರುವ ಕೊಹಿನೂರ್ ವಜ್ರ ನಮ್ಮ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿರುವ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಹೊರ ಭಾಗದಲ್ಲಿ ಕೃಷ್ಣಾ ನದಿ ಸಮೀಪದಲ್ಲಿ ಶತತಶತಮಾನಗಳ ಹಿಂದೆ ಕೊಹಿನೂರ್ ವಜ್ರ ಸಿಕ್ಕಿದ್ದು, ಈ ಸ್ಥಳವನ್ನು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದವರು ಜಗತ್ ಪ್ರಸಿದ್ಧ ಕೊಹಿನೂರು ವಜ್ರ ಸಿಕ್ಕ ಸ್ಥಳವೆಂದು ನಾಮಫಲಕ ಹಾಕಿದ್ದಾರೆ.

 

 

ಇದಲ್ಲದೆ ಸರ್ಕಾರದವರು ಸಹ ಇದು ವಿಶ್ವ ಪ್ರಸಿದ್ಧಿ ಕೊಹಿನೂರು ವಜ್ರ ಸಿಕ್ಕಿರುವ ಸ್ಥಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಾಯ್ದಿರಿಸಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಸರ್ಕಾರ ಸರ್ವೆ ನಂ 342 ರ ಸ್ಥಳ 4 ಎಕರೆ 12 ಗುಂಟೆ ಅದೆ ರೀತಿ ಸರ್ವೆ ನಂಬರ್ 337 ರ 4 ಎಕರೆ 07 ಗುಂಟೆ ಸ್ಥಳ ವಿಶ್ವ ಪ್ರಸಿದ್ಧಿ ಕೊಹಿನೂರು ವಜ್ರ ಸಿಕ್ಕಿದ್ದ ಸ್ಥಳವೆಂದು ನೋಂದಣಿ ಮಾಡಲಾಗಿದೆ. ಸರಕಾರ 8 ಎಕರೆ 12 ಗುಂಟೆ ಡೈಮಂಡ್ ಸಿಕ್ಕಿದ್ದ ಸ್ಥಳವೆಂದು ಜಾಗ ಮೀಸಲಿಟ್ಟು 10 ವರ್ಷ ಕಳೆದಿದೆ‌. ಡೈಮಂಡ್ ಸಿಕ್ಕ ಸ್ಥಳದಲ್ಲಿ ಮರಳು ಗಣಿಗಾರಿಕೆ ಕೂಡ ನಿಷೇಧ ಮಾಡಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top