fbpx
ಸಮಾಚಾರ

ತಮ್ಮ ಮದುವೆ ಯಾವಾಗ ಎಂದು ಪದೇ ಪದೇ ಕೇಳುತ್ತಿದ್ದ ಫ್ಯಾನ್ಸ್ ಗೆ ಶಾಕ್ ಕೊಟ್ಟ ಡಾಲಿ ಧನಂಜಯ್!

ಕನ್ನಡ ಸಿನಿಮಾ ರಂಗದ ಮೋಸ್ಟ ಎಲಿಜಿಬಲ್ ಬ್ಯಾಚೆಲರ್ ಎಂದರೆ ಅದು ನಮ್ಮ ಡಾಲಿ ಧನಂಜಯ್. ಧನಂಜಯ್ ಅವರ ಮದುವೆ ವಿಚಾರ ಗಾಂಧಿನಗರದಲ್ಲಿ ಸಕತ್ ಸೌಂಡ್ ಮಾಡುತ್ತಿತ್ತು. `ಬಡವ ರಾಸ್ಕಲ್’ ಸಿನಿಮಾದಲ್ಲಿ ಅಮೃತ ಮತ್ತು ಡಾಲಿ ಜೋಡಿ ನೋಡಿ, ಇವರಿಬ್ಬರು ಮದುವೆಯಾಗುತ್ತಾರೆ ಎಂದು ಫ್ಯಾನ್ಸ್ ಕಾದು ಕುಳಿತಿದ್ದರು. ಆದರೆ ಧನಂಜಯ್ ಇದೀಗ ತಮ್ಮ ಫ್ಯಾನ್ಸ್ ಗೆ ಶಾಕ್ ನೀಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಧನಂಜಯ್ ತಮ್ಮ ಮದುವೆಯ ವಿಚಾರದ ಬಗ್ಗೆ ಮಾತನಾಡಿದರು. ಸಂದರ್ಶಕರ ಜೊತೆ ಮಾತನಾಡುತ್ತ ” ಪ್ರಭಾಸ್ ಸರ್ ಮದುವೆಯಾಗಿದ್ದಾರಾ? ಅವರು ಮದುವೆ ಆದರೆ ನಾನು ಮದುವೆಯಾಗುತ್ತೀನಿ ಇಲ್ಲವೆಂದರೆ ನನಗೂ ಮದುವೆಯೇ ಬೇಡ, ಹಾಗೆ ಇದ್ದು ಬಿಡುತ್ತೇನೆ “ಎಂದಿದ್ದಾರೆ. ಈ ರೀತಿ ಡಾಲಿ ಹೇಳಲು ಕಾರಣವನ್ನು ಸಹ ತಿಳಿಸಿದ್ದಾರೆ.

ಡಾಲಿ ಅವರಿಗೆ ಅಪಾರವಾದ ಸ್ನೇಹಿತರ ಬಳಗವಿದೆ. ಇವರ ಸ್ನೇಹಿತರಲ್ಲಿ ಕೆಲವರಿಗೆ ಮದುವೆಯಾಗಿಲ್ಲ. ಈಗಾಗಿ ಇವರ ಮನೆಯಲ್ಲಿ ಮದುವೆಯ ವಿಚಾರ ಪ್ರಸ್ತಾಪಿಸಿದಾಗ ಧನಂಜಯ್ ಮದುವೆ ಆದಾಗ ನಾವು ಮದುವೆಯಾಗುತ್ತೀವಿ ಎಂದಿದ್ದಾರೆ. ಹೀಗಾಗಿ ಧನಂಜಯ್ ಕೂಡ ಪ್ರಭಾಸ್ ಮತ್ತು ಸಲ್ಮಾನ್ ಖಾನ್ ನನ್ನ ಹಿರಿಯ ಸಹೋದರರಂತೆ. ಹೀಗಾಗಿ ಇವರ ಮದುವೆಯ ನಂತರ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ನಟನ ಮದುವೆಯ ಬಗ್ಗೆ ಅಭಿಮಾನಿಗಳು ಅಪಾರವಾದ ಕನಸುಗಳನ್ನು ಇಟ್ಟುಕೊಂಡಿದ್ದು, ಇವೆಲ್ಲ ಇದೀಗ ನಿರಾಸೆ ಆದಂತೆ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top