fbpx
ಸಮಾಚಾರ

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಕ್ಕಿ ಮ್ಯಾನ್ ಸಿನಿಮಾ OTT ಯಲ್ಲಿ ರಿಲೀಸ್? ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ನಟ ಡಾರ್ಲಿಂಗ್ ಕೃಷ್ಣ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನು ಆಗಲಿ ತಿಂಗಳುಗಳೇ ಕಳೆದಿದೆ. ಆದರೂ ಇವರ ನೆನಪು ಮಾತ್ರ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಅಪ್ಪು ಅಭಿನಯದ ಲಕ್ಕಿ ಮ್ಯಾನ್ ಸಿನಿಮಾ ಬಿಡುಗಡೆಯಾಗಿ ಸಕತ್ ಸೌಂಡ್ ಮಾಡುತ್ತಿದೆ. ಅಪ್ಪುಅವರನ್ನು ದೇವರ ರೂಪದಲ್ಲಿ ಕಂಡ ಇವರ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಆದರೆ ಇವೆಲ್ಲದರ ಮದ್ಯೆ ಲಕ್ಕಿ ಮ್ಯಾನ್ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ OTT ಪ್ಲಾಟ್ಫಾರ್ಮ್ ನಲ್ಲಿ ಲಭ್ಯವಾಗುತ್ತದೆ ಎಂಬ ಮಾತು ಹರಿದಾಡುತ್ತಿತ್ತು. ಆದರೆ ಇದರ ಕುರಿತು ಡಾರ್ಲಿಂಗ್ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಅಪ್ಪು ದೇವರ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಅಭಿಮಾನಿಗಳು ಇವರನ್ನು ದೇವರ ರೀತಿಯಲ್ಲಿ ಪೂಜಿಸುತ್ತಿದ್ದು, ಇದೀಗ ಇವರ ಪಾತ್ರ ಅಭಿಮಾನಿಗಳ ಮನ ಮುಟ್ಟಿದೆ. ಹೀಗಾಗಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬಂದು ಬೆಳ್ಳಿ ಪರದೆಯ ಮೇಲೆ ಅಪ್ಪುವನ್ನು ದೇವರ ರೂಪದಲ್ಲಿ ಕಂಡು ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಗಾಂಧಿನಗರದ ಸುತ್ತ ಒಂದು ಸುದ್ದಿ ಹರಿದಾಡುತ್ತಿದ್ದು, ಅದೇನೆಂದರೆ ಇನ್ನು ಕೇವಲ 9 ದಿನಗಳಲ್ಲಿ ಲಕ್ಕಿ ಮ್ಯಾನ್ ಸಿನಿಮಾ OTT ಪ್ಲ್ಯಾಟ್ ಫಾರ್ಮ್ ಆಗಿರುವ ಅಮೆಜಾನ್ ನಲ್ಲಿ ಬಿಡುಗಡೆಯಾಗಲಿದೆ ಎಂದು.

ಲಕ್ಕಿ ಮ್ಯಾನ್ ಸಿನಿಮಾ ಭರ್ಜರಿ ಪ್ರದರ್ಶನ ತೋರುತ್ತಿದ್ದ ಹಿನ್ನೆಲೆ ಚಿತ್ರ ತಂಡ ಪತ್ರಿಕಾ ಗೋಷ್ಠಿ ಕರೆದಿತ್ತು. ಈ ವೇಳೆ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ ನಾಯಕ ಡಾರ್ಲಿಂಗ್ ಕೃಷ್ಣ ಅವರಿಗೆ ಒಂದು ಪ್ರಶ್ನೆ ಎದುರಾಗಿತ್ತು. ಅದೇನೆಂದರೆ ಲಕ್ಕಿ ಮ್ಯಾನ್ ಚಿತ್ರ ಇದೇ 23ಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ, ಇದರ ಬಗ್ಗೆ ಏನು ಹೇಳ್ತೀರಾ ಎಂದು ಕೇಳಲಾಗಿತ್ತು.

ಇದಕ್ಕೆ ಉತ್ತರಿಸಿದ ಕೃಷ್ಣ ‘ಇಲ್ಲ ಇಲ್ಲ ಇಲ್ಲಾ.. ಸುಳ್ಳು’ ಎಂದು ಹೇಳುತ್ತಾ ಇದೆ ತಿಂಗಳ 23 ಕ್ಕೆ ಯಾವುದೇ ಕಾರಣಕ್ಕೂ ಲಕ್ಕಿ ಮ್ಯಾನ್ ಸಿನಿಮಾ OTT ಯಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಖಚಿತಪಡಿಸಿದರು. ಮುಂದುವರಿಸಿ ಲಕ್ಕಿ ಮ್ಯಾನ್ ಸಿನಿಮಾ ಇನ್ನು 50 ದಿನಗಳ ಕಾಲ ಚಿತ್ರಮಂದಿರದಲ್ಲೇ ಇರುತ್ತದೆ. ಇದಾದ ನಂತರ OTT ಯಲ್ಲಿ ಬಿಡುಗಡೆಮಾಡಲಾಗುವುದು ಎಂದು ತಿಳಿಸಿದರು. ಏಕೆಂದರೆ ಜನರು ಇಲ್ಲೂ ಕೆಲವು ದಿನ ದೇವರ ದರ್ಶನವನ್ನು ಚಿತ್ರಮಂದಿರದಲ್ಲೇ ಮಾಡಬೇಕೆಂಬುದು ನಮ್ಮೆಲ್ಲರ ಅಸೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top