fbpx
ಸಮಾಚಾರ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಗಳು ಜಾನಕಿ ಖ್ಯಾತಿಯ ಮಂಡ್ಯ ರವಿ ಇನ್ನಿಲ್ಲ! ಅತ್ಯಂತ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ ಹೆಸರಾಂತ ಕಲಾವಿದ

ಇತ್ತೀಚಿನ ದಿನಗಳಲ್ಲಿ ನಮ್ಮ ಸ್ಯಾಂಡಲ್ವುಡ್ ಸಿನಿಮಾ ರಂಗಕ್ಕೆ ಒಂದಾದರಮೇಲೊಂದು ಒಡೆತ ಬೀಳುತ್ತಲೇ ಇದೆ. ಏಕೆಂದರೆ ಬಣ್ಣದ ಲೋಕದಲ್ಲಿ ಜನರನ್ನು ರಂಜಿಸಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದವರು ಅತ್ಯಂತ ಕಿರಿಯ ವಯಸ್ಸಿನ್ನಲ್ಲಿ ನಮ್ಮನ್ನು ಅಗಲಿ ಇಹಲೋಕ ತ್ಯಜಿಸುತ್ತಿದ್ದಾರೆ. ಇದೀಗ ಇದರ ಪಟ್ಟಿಗೆ ಮಂಡ್ಯ ರವಿ ಅವರ ಹೆಸರು ಕೂಡ ಸೇರಲ್ಪಟ್ಟಿದೆ.

ಬಣ್ಣದ ಲೋಕದಲ್ಲಿ ತಮ್ಮ ಪಾತ್ರದ ಮೂಲಕ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದ್ದ ಮಂಡ್ಯ ರವಿ (42) ಅತ್ಯಂತ ಕಿರಿಯ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಸೆಪ್ಟೆಂಬರ್ 14) ಸಂಜೆ 6 ಘಂಟೆಗೆ ನಿಧನರಾಗಿದ್ದಾರೆ.

 

 

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರಿಗೆ ಕಾಮಾಲೆ ರೋಗ ಇತ್ತು. ಇದರ ಜೊತೆ ಇವರಿಗೆ ಕಿಡ್ನಿ ಸಮಸ್ಯೆ ಕೂಡ ಇತ್ತು. ಹೀಗಾಗಿ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಸಂಜೆ ನಿಧನರಾಗಿದ್ದಾರೆ.

ತನ್ನ ಮಗನ ಆರೋಗ್ಯದ ಕುರಿತು ಮಾಹಿತಿ ನೀಡಿದ ಇವರ ತಂದೆ ” ನನ್ನ ಮಗನಿಗೆ ತೀವ್ರ ಅನಾರೋಗ್ಯ ಕಾಡಿದೆ. ಅವರು ಬದುಕೋದು ಅನುಮಾನ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಅವರು ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿ “ಎಂದಿದ್ದರು. ಆದರೆ ನಮ್ಮ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇವರ ನಿಧನದ ಕುರಿತು ಟಿ.ಎನ್ ಸೀತಾರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ” ಚಂದು ಭಾರ್ಗಿ’ ರವಿ ಅಸ್ತಂಗತ. ಇನ್ನೂ 42, ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ. ಅತ್ಯಂತ ಆಘಾತಕಾರಿ ” ಎಂದು ಪೋಸ್ಟ್ ಮಾಡಿದ್ದಾರೆ. ಟಿ.ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯಲ್ಲಿ ರವಿ ನಟಿಸಿದ್ದರು. ಇವರ ಪಾತ್ರವನ್ನು ಪ್ರೇಕ್ಷಕರು ಬಹಳ ಮೆಚ್ಚಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top