fbpx
ಸಮಾಚಾರ

ಬಿಗ್ ಬಾಸ್ OTT ಟಾಪರ್ ಆಗಿ ಹೊರಹೊಮ್ಮಿದ ಕರಾವಳಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ!

ಬಿಗ್ ಬಾಸ್ OTT ಮುಗಿದಿದೆ. 8 ಸದಸ್ಯರೊಂದಿಗೆ ಶುರುವಾದ ಕೊನೆಯ ಎಲಿಮಿನೇಷನ್ ಪ್ರಕ್ರಿಯೆ ಇದೀಗ 4 ಸದಸ್ಯರೊಂದಿಗೆ ಅಂತ್ಯಗೊಂಡಿದೆ. ಅದರಂತೆ ರೂಪೇಶ್, ಆರ್ಯವರ್ಧನ್ ಗುರೂಜಿ, ಸಾನ್ಯ ಐಯ್ಯರ್ ಮತ್ತು ರಾಕೇಶ್ ಅಡಿಗ ಬಿಗ್ ಬಾಸ್ ಸೀಸನ್ 9 ಟಿವಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ OTT ಪಟ್ಟವನ್ನು ಕರಾವಳಿಯ ಕುವರನ ಪಾಲಾಗಿದೆ.

ಕರಾವಳಿಯ ರಾಕ್ ಸ್ಟಾರ್ ಎಂದೇ ಪ್ರಖ್ಯಾತಿಗಳಿಸಿರುವ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯ ಬಹುಮುಖ್ಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹಾಡು, ಕುಣಿತ, ಸಂಗೀತ ಹೀಗೆ ಪ್ರತಿಯೊಂದು ಆಯಾಮದಲ್ಲೂ ಮನೆ ಮಂದಿ ಮತ್ತು ವೀಕ್ಷಕರನ್ನು ಇವರು ರಂಜಿಸುತ್ತಾ ಬಂದಿದ್ದರು. ಹೀಗಾಗಿ ಇವರ ಆಟ ವೀಕ್ಷಕರಿಗೆ ಬಹಳ ಇಷ್ಟವಾಗಿದ್ದು, ಕನ್ನಡಿಗರ ಮನಸ್ಸಿಗೆ ಬಹಳಷ್ಟು ಹತ್ರರಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ನೀಡಿರುವ ವೋಟಿನಿಂದ ಟಾಪರ್ ಆಗಿ ಬಿಗ್ ಬಾಸ್ ಓಟಿಟಿ ಪಟ್ಟ ಅಲಂಕರಿಸಿದ್ದಾರೆ. ಇದರ ಜೊತೆ ಇವರಿಗೆ 5 ಲಕ್ಷ ಬಹುಮಾನ ಕೂಡ ಸಿಕ್ಕಿದೆ.

ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಇವರು ಅಭಿನಯಿಸಿದ್ದಾರೆ. ಇನ್ನೊಂದು ವಾರದಲ್ಲಿ ಬಿಗ್ ಬಾಸ್ ಟಿವಿ ಕಾರ್ಯಕ್ರಮ ಶುರುವಾಗಲಿದೆ. OTT ಮೂಲಕ ಜನರನ್ನು ರಂಜಿಸಿರುವ ರೂಪೇಶ್ ಇದೀಗ ಟಿವಿ ಕಾರ್ಯಕ್ರಮದಲ್ಲಿ ಜನರನ್ನು ಯಾವ ರೀತಿ ರಂಜಿಸುತ್ತಾರೆ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top