fbpx
ಸಮಾಚಾರ

ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಶಿಲ್ಪಾ ಗೌಡ?

ಬಿಗ್ ಬಾಸ್ OTT ಮುಗಿದಿದೆ. 8 ಸದಸ್ಯರೊಂದಿಗೆ ಶುರುವಾದ ಕೊನೆಯ ಎಲಿಮಿನೇಷನ್ ಪ್ರಕ್ರಿಯೆ ಇದೀಗ 4 ಸದಸ್ಯರೊಂದಿಗೆ ಅಂತ್ಯಗೊಂಡಿದೆ. ಅದರಂತೆ ರೂಪೇಶ್, ಆರ್ಯವರ್ಧನ್ ಗುರೂಜಿ, ಸಾನ್ಯ ಐಯ್ಯರ್ ಮತ್ತು ರಾಕೇಶ್ ಅಡಿಗ ಬಿಗ್ ಬಾಸ್ ಸೀಸನ್ 9 ಟಿವಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ರೀಲ್ಸ್ ಮೂಲಕ ಹೆಚ್ಚು ಸೌಂಡ್ ಮಾಡುತ್ತಿದ್ದ ಶಿಲ್ಪಾ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕೊನೆಯ ಎಲಿಮಿನೇಷನ್ ಪ್ರಕ್ರಿಯೆ ನಡೆಯಿತು. ಈ ವೇಳೆ ರೂಪೇಶ್, ಆರ್ಯವರ್ಧನ್ ಗುರೂಜಿ, ಮತ್ತು ರಾಕೇಶ್ ಸೇಫ್ ಆಗಿದ್ದರು. ಕೊನೆಯಲ್ಲಿ ಸಾನ್ಯ ಐಯ್ಯರ್ ಮತ್ತು ಸೋನು ನಡುವೆ ಪೈಪೋಟಿ ನಡೆಯಿತು. ಈ ವೇಳೆ ಕಿಚ್ಚ ಸುದೀಪ್ ಸೇಫ್ ಆದ ಸ್ಪರ್ಧಿಗಳು ಮತ್ತು ಸಾನ್ಯ ಐಯ್ಯರ್ ಮತ್ತು ಸೋನು ಗೌಡ ಅವರನ್ನು ಸ್ಟೇಜ್ ಮೇಲೆ ಕರೆಸಿದರು.

ಈ ವೇಳೆ ಸುದೀಪ್ ಸೋನು ಬಳಿ ” ನಿಮ್ಮ ಅದ್ಭುತವಾದ ತಲೆಯಲ್ಲಿ ಏನು ಓಡುತ್ತಿದೆ ಎಂದು ಕೇಳಿದರು. ಇದಕ್ಕೆ ಸೋನು ತಲೆಯಲ್ಲಿ ಏನು ಇಲ್ಲ ಎಂದು ಹೇಳಿದಾಗ ಕಿಚ್ಚ ಅದು ನಿಜ ನಿಮ್ಮ ತಲೆಯಲ್ಲಿ ಏನು ಇಲ್ಲ ಎಂದು ಕಾಮಿಡಿ ಮಾಡಿದರು. ಇದಾದ ಬಳಿಕ ಟೆಂಷನ್ ಎಷ್ಟಾಗಿದೆ ಎಂದು ಕೇಳಿದಾಗ ಇದೀಗ ಟೆಂಷನ್ ಕೂಡ ಇಲ್ಲ ಎಂದು ಸೋನು ಹೇಳಿದರು. ಇದಕ್ಕೆ ಕಾರಣವೇನು ಎಂದು ಕಿಚ್ಚ ಕೇಳಿದಾಗ ಅಲ್ಲಿ ನಮ್ಮ ಅಕ್ಕ, ಅಮ್ಮ ಮತ್ತು ನನ್ನ ತಮ್ಮನನ್ನು ನೋಡಿದಾಗ ಎಂದು ಹೇಳುತ್ತಿದ್ದಂತೆ ಆಶ್ಚರ್ಯಚಕಿತರಾಗಿ ” ಹೇ ಶಿಲ್ಪಾ” ನನ್ನ ಫ್ರೆಂಡ್ ಅವ್ಳು ಎಂದು ಸೋನು ಹೇಳಿದರು.

ಈ ವೇಳೆ ಸೋನು ತಮ್ಮ ತಾಯಿ, ತಂಗಿ ಮತ್ತು ತಮ್ಮನನ್ನು ಪರಿಚಯಿಸಿದರು. ಇದಾದ ಬಳಿಕ ಶಿಲ್ಪಾ ಗೌಡ ಅವರನ್ನು ತೋರಿಸಿ ಇವಳು ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳಿದಳು. ಹೀಗಾಗಿ ಕಿಚ್ಚ ನಿನ್ನ ಬೇಸ್ ಫ್ರೆಂಡ್ ಮತ್ತು ಪರಿವಾರದವರನ್ನು ನೋಡಿದ ಮೇಲೆ ನಿನ್ನ ಟೆಂಷನ್ ಕಮ್ಮಿ ಆಯ್ತಾ ಎಂದು ಪ್ರಶ್ನಿಸಿದಕ್ಕೆ ಸೋನು ಹೌದು ಎಂದು ಉತ್ತರಿಸಿದರು.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಕಾಣುತ್ತಿದ್ದ ಶಿಲ್ಪಾ ಗೌಡ ಅವರನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡಿ ನಿಜಕ್ಕೂ ಜನರು ಅಚ್ಚರಿಪಟ್ಟಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top