fbpx
ಸಮಾಚಾರ

“ಕೊನೆವರೆಗೂ ನಿನ್ನೇ ಪ್ರೀತಿಸುವೆ..” ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವ ನಟಿ: ಡೆತ್ ನೋಟ್ ನಲ್ಲಿ ಇರೋದು ಏನು ಗೊತ್ತಾ?

ತಮಿಳು ಚಿತ್ರರಂಗದ ಯುವ ನಟಿ ದೀಪಾ ನಿನ್ನೆಯಷ್ಟೇ ಅವರ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೆನ್ನೈನ ವಿರುಗಾಂಬಕ್ಕಂನಲ್ಲಿರುವ ಫ್ಲ್ಯಾಟ್‌ನಲ್ಲಿ ದೀಪಾ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಲವು ಬಾರಿ ಫೋನ್​ ಮಾಡಿದಾಗ ದೀಪಾ ಅವರು ಕರೆ ಸ್ವೀಕರಿಸಲಿಲ್ಲ. ಆಗ ಕುಟುಂಬದವರಿಗೆ ಅನುಮಾನ ಬಂತು. ಅಪಾರ್ಟ್​ಮೆಂಟ್​ಗೆ ಬಂದು ನೋಡಿದಾಗ ಅವರ ಮೃತದೇಹ ಕಾಣಿಸಿತು. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆ ರೂಮ್ ನಲ್ಲೇ ಸಿಕ್ಕ ಡೆತ್ ನೋಟ್ ನಲ್ಲಿ ತಮ್ಮ ಪ್ರೀತಿ ಪ್ರೇಮದ ಬಗ್ಗೆ ಸವಿವರವಾಗಿ ಬರೆದುಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ಪ್ರೇಮವೈಫಲ್ಯವೇ ಕಾರಣವೆಂದು ಹೇಳಲಾಗುತ್ತಿದೆ. ತನ್ನ ಡೆತ್‌ ನೋಟ್‍ನಲ್ಲಿ ತಾನು ಪ್ರೀತಿಸುತ್ತಿದ್ದ ಯುವಕನ ಕಳೆದ ಕೆಲವು ದಿನಗಳಿಂದ ದೀಪಾ ಅವರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಪ್ರೀತಿ-ಪ್ರೇಮದ ವಿಚಾರವೇ ಅವರ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಹೆಸರು ಉಲ್ಲೇಖಿಸದ ನಟಿ ದೀಪಾ, ‘ಕೊನೆವರೆಗೂ ನಾನು ಅವನನ್ನೇ ಪ್ರೀತಿಸುತ್ತೇನೆ’ ಅಂತಾ ಹೇಳಿದ್ದಾರೆ.

ದೀಪಾ ಅವರ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರೀತಿ, ಪ್ರೇಮದ ವಿಚಾರವಾಗಿಯೇ ಈ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top