fbpx
ಸಮಾಚಾರ

‘ಗೂಗ್ಲಿ’ ನಟಿಗೆ ಕೂಡಿಬಂತು ಕಂಕಣ ಭಾಗ್ಯ: ಬಾಲಿವುಡ್‌ನ ನಟನ ಜೊತೆ ಹಸೆಮಣೆ ಏರಲು ರೆಡಿಯಾದ ಕೃತಿ ಕರಬಂಧ

‘ಗೂಗ್ಲಿ’ ಸಿನಿಮಾ ಮೂಲಕ ಗಮನಸೆಳೆದ ನಟಿ ಕೃತಿ ಕರಬಂಧ ಅವರು ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿಯಿದ್ದಾರೆ. ಆಗಾಗ ಅವರು ನಟ ಪುಲ್ಕಿಟ್ ಸಾಮ್ರಾಟ್ ಜೊತೆ ಲವ್‌ನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಲಿತ್ತು. ಆದರೆ ಕೃತಿ ಮಾತ್ರ ಮದುವೆ ಕುರಿತು ಇಲ್ಲಿಯವರೆಗೆ ಅಷ್ಟಾಗಿ ಬಾಯಿಯೇ ಬಿಟ್ಟಿರಲಿಲ್ಲ. ಇದೀಗ ಕೃತಿ ಮದುವೆ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ.

ನಟ ಪುಲ್ಕಿಟ್ ಸಾಮ್ರಾಟ್ ಮತ್ತು ಕೃತಿ ಕರಬಂಧ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಕೃತಿ ಮತ್ತು ಪುಲ್ಕಿತ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಪುಲ್ಕಿತ್ ಅವರಾಗಲಿ ಅಥವಾ ಕೃತಿ ಅವರಾಗಲಿ ಅಧಿಕೃತ ಮಾಹಿತಿ ನೀಡಿಲ್ಲ.

ಅಂದಹಾಗೆ ಪುಲಕಿತ್​ ಈಗಾಗಲೇ ಮದುವೆ ಆಗಿದ್ದು ವಿಚ್ಛೇದನ ಪಡೆದುಕೊಂಡಿದ್ದಾರೆ. 2014ರಲ್ಲಿ ಶ್ವೇತಾ ರೊಹಿರಾ ಎಂಬುವರನ್ನು ವರಿಸಿದ್ದರು. ಬಳಿಕ 2015ರಲ್ಲಿ ದೂರವಾಗಿದ್ದಾರೆ. ನಟಿ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಕಳೆದ 4 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ.

2018ರಲ್ಲಿ ಬಿಡುಗಡೆಯಾಗಿದ್ದ ‘ವೀರೇ ಕೀ ವೆಡ್ಡಿಂಗ್’ ಮತ್ತು 2019ರಲ್ಲಿ ತೆರೆ ಕಂಡಿದ್ದ ‘ಪಾಗಲ್ ಪಂತಿ’ ಸಿನಿಮಾದಲ್ಲಿ ಈ ಜೋಡಿ ಜೊತೆಯಾಗಿ ನಟಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top