fbpx
ಸಮಾಚಾರ

ತಾನು ಅವಳಿ ಮಕ್ಕಳ ತಾಯಿಯಾಗಲಿದ್ದೇನೆ ಎಂದು ತಿಳಿದ ಅಮೂಲ್ಯ ಮೊದಲ ರಿಯಾಕ್ಷನ್ ಹೇಗಿತ್ತು? ನಟಿಯೇ ಹೇಳಿದ್ದಾರೆ ಆ ಅನುಭವ

ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ಅಮೂಲ್ಯ ಮದುವೆಯಾದ ನಂತರ ಸಿನಿಮಾ ರಂಗದಿಂದ ದೂರ ಉಳೀದಿದ್ದರು. ಇನ್ನು ಇವರಿಗೆ ಅವಳಿ ಜವಳಿ ಮಕ್ಕಳಾದ ಬಳಿಕ ಇವರು ಸಂಪೂರ್ಣವಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆದರೂ ತಮ್ಮ ಅಭಿಮಾನಿಗಳ ಜೊತೆ ಅಮೂಲ್ಯ ಸಾಮಾಜಿಕ ಜಾಲತಾಣದ ಮೂಲಕ ಸದಾ ಆಕ್ಟಿವ್ ಆಗಿದ್ದಾರೆ.

ಇತ್ತೀಚಿಗೆ ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುದ್ದಾದ ಮಕ್ಕಳ ಫೋಟೋ ಕೂಡ ಅಪ್ಲೋಡ್ ಮಾಡಿದ್ದರು. ಇದಲ್ಲದೆ ತಾವು ಕೂಡ ಮೊಟ್ಟ ಮೊದಲ ಬಾರಿಗೆ ರೀಲ್ಸ್ ಕೂಡ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಅಮೂಲ್ಯ ತಮ್ಮ ಅಭಿಮಾನಿಗಳು ಒಂದು ಅವಕಾಶವನ್ನು ನೀಡಿದ್ದರು.

ಅದೇನೇದರೆ ಇತ್ತೀಚೆ ಅಮೂಲ್ಯ ಅಭಿಮಾನಿಗಳ ಬಳಿ ” ನನ್ನ ಬಗ್ಗೆ ಏನು ಬೇಕಾದರೂ ಪ್ರಶ್ನೆ ಕೇಳಿ, ಉತ್ತರಿಸುತ್ತೇನೆ ” ಎಂದು ಹೇಳಿದರು. ಈ ಅವಕಾಶವನ್ನು ಅಭಿಮಾನಿಗಳು ಸಕ್ರಿಯವಾಗಿ ಬಳಸಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳು ಒಂದರಮೇಲೊಂದರಂತೆ ಅಮೂಲ್ಯ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದಕ್ಕೆಲ್ಲ ಅಮೂಲ್ಯ ಕೂಡ ಉತ್ತರಿಸುತ್ತಿದ್ದರು.

ಹೀಗೆ ಅಭಿಮಾನಿಯೊಬ್ಬ ಅಮೂಲ್ಯ ಅವರ ಬಳಿ ” ಮೊದಲ ಬಾರಿಗೆ ನಿಮಗೆ ಅವಳಿ ಮಕ್ಕಳು ಎಂದು ಗೊತ್ತಾದಾಗ ನಿಮ್ಮ ರಿಯಾಕ್ಷನ್ ಹೇಗಿತ್ತು ” ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅಮೂಲ್ಯ ” ಮೊದಲ ಬಾರಿಗೆ ವೈದ್ಯರು ಈ ವಿಷಯವನ್ನು ತಿಳಿಸಿದಾಗ ನಾನು ನಕ್ಕಿದೆ. ನನ್ನ ಪತಿ ಜಗದೀಶ್ ಟೆನ್ಷನ್ ಮಾಡಿಕೊಂಡಿದ್ದರು. ಇಡೀ ಫ್ಯಾಮಿಲಿಗೆ ಒಂದು ರೀತಿಯಲ್ಲಿ ಆತಂಕವಾಗಿತ್ತು ” ಎಂದರು. ಏಕೆಂದರೆ ಅಮೂಲ್ಯ ಅವರು ಇನ್ನು ಚಿಕ್ಕು ಹುಡುಗಿ. ಹೀಗಾಗಿ ಎರಡು ಮಕ್ಕಳನ್ನು ಅವರು ಹೇಗೆ ನೋಡಿಕೊಳ್ಳುತ್ತಾರೆ ಎಂದು ಮನೆಯವರು ಚಿಂತಿಸುತ್ತಿದ್ದರು. ಆದರೆ ಇದೀಗ ಯಾವುದೇ ತೊಂದರೆಯಿಲ್ಲ. ಎರಡು ಮಕ್ಕಳ ಜೊತೆ ಖುಷಿಯಾಗಿರುವೆ ಎಂದು ಅಮೂಲ್ಯ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top