fbpx
ಸಮಾಚಾರ

ಅಂಬರೀಷ್ ಮುದ್ದಿನ ನಾಯಿ ಬುಲ್ ಬುಲ್ ನಿಧನ

ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ ‘ಬುಲ್ ಬುಲ್’ ನಿಧನವಾಗಿದೆ. ಪ್ರಾಣಿ ಪ್ರಿಯರಾಗಿದ್ದ ಅಂಬಿ ನಿವಾಸದಲ್ಲಿ ಕನ್ವರ್ ಜೊತೆಗೆ ಬುಲ್ ಬುಲ್ ಹೆಸರಿನ ಶ್ವಾನಗಳು ಬಹಳ ವರ್ಷಗಳಿಂದ ಇದ್ದವು. ಕಳೆದ ವರ್ಷ ಕನ್ವರ್ ಹೆಸರಿನ ನಾಯಿ ನಿಧಾನವಾಗಿತ್ತು ಇದೀಗ ಬುಲ್ ಬುಲ್ ಶ್ವಾನ ಕೂಡ ಕೊನೆಯುಸಿರೆಳೆದಿದೆ.

ಅಂದಹಾಗೆ ತಮ್ಮ ವೃತ್ತಿ ಜೀವನದಲ್ಲಿ ಬಹಳ ಖ್ಯಾತಿ ತಂದುಕೊಟ್ಟಿದ್ದ ಚಿತ್ರಗಳ ಫೇಮಸ್ ಡೈಲಾಗನ್ನೇ ಶ್ವಾನಗಳಿಗೆ ಹೆಸರಾಗಿಸಿದ್ದರು. ನಾಗರಹಾವು ಚಿತ್ರದ ನೆನಪಿನಲ್ಲಿ ಒಂದ ಶ್ವಾನಕ್ಕೆ ‘ಬುಲ್ ಬುಲ್’ ಹಾಗೂ ಮತ್ತೊಂದಕ್ಕೆ ‘ಕನ್ವರ್ ಲಾಲ್’ ಎಂದು ಹೆಸರಿಟ್ಟಿದ್ದರು.

ಕಳೆದ ಒಂಭತ್ತು ವರ್ಷಗಳಿಂದ ಅಂಬರೀಷ್ ನಿವಾಸದಲ್ಲಿದ್ದ ಬುಲ್ ಬುಲ್ ಶ್ವಾನ ವಾಸವಾಗಿತ್ತು. ತಮ್ಮ ತೋಟದಲ್ಲಿ ಅವುಗಳ ಅಂತ್ಯ ಸಂಸ್ಕಾರ ಮಾಡಲು ಸುಮಲತಾ ಅಂಬರೀಶ್ ನಿರ್ಧರಿಸಿದ್ದಾರೆ. ಅಲ್ಲದೇ, ಎರಡೂ ಶ್ವಾನಗಳನ್ನು ಕಳೆದುಕೊಂಡಿರುವ ಅಂಬಿ ಮನೆಯಲ್ಲಿ ನೀರವ ಮೌನ ಆವರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top