fbpx
ಸಮಾಚಾರ

ಮದುವೆಯಾಗುವ ಹುಡುಗಿಯ ಕುರಿತು ಕೊನೆಗೂ ಮೌನ ಮುರಿದ ಡಾಲಿ ಧನಂಜಯ್!

ಸ್ಯಾಂಡಲ್ವುಡ್ ಮತ್ತು ಗಾಂಧಿನಗರದ ತುಂಬಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸೌಂಡ್ ಮಾಡುತ್ತಿರುವ ವಿಷಯ ಎಂದರೆ ಅದು ನಟ ಡಾಲಿ ಧನಂಜಯ್ ಅವರ ವಿಚಾರ. ಕಡಿಮೆ ಅವಧಿಯಲ್ಲಿ ಅಪಾರವಾದ ಅಭಿಮಾನ ಗಳಿಸಿರುವ ಇವರು ಕನ್ನಡ ಸಿನಿಮಾ ಇಂಡಸ್ಟ್ರಿ ಅಲ್ಲದೆ ಇದೀಗ ಬೇರೆ ಭಾಷೆ ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ದೊರಕಿದೆ. ಇದೆಲ್ಲದರ ನಡುವೆ ಇವರ ಮದುವೆ ವಿಚಾರವಾಗಿ ಇವರು ಸಕತ್ ಸೌಂಡ್ ಮಾಡುತ್ತಿದ್ದಾರೆ.

ಇತ್ತೀಚಿಗೆ ಕೆಲವು ದಿನಗಳ ಹಿಂದೆ ಧನಂಜಯ್ ಅವರ ಮದುವೆಯ ಕುರಿತು ಒಂದು ಸಂದರ್ಶನದಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ತಮ್ಮದೇ ರೀತಿಯಲ್ಲಿ ಉತ್ತರಿಸಿದ ಡಾಲಿ ಸಲ್ಮಾನ್ ಖಾನ್ ಮತ್ತು ಪ್ರಭಾಸ್ ಮದುವೆಯಾಗುವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದರು. ಆದರೆ ಇದೀಗ ಡಾಲಿ ತಾನು ಮದುವೆಯಾಗುವ ಹುಡುಗಿ ಹೇಗಿರಬೇಕೆಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಡಾಲಿ ನಾನು ಮದುವೆಯಾಗುವ ಹುಡುಗಿ ಹೇಗಿರಬೇಕೆಂದರೆ ನಾನು ಅವಳನ್ನು ನೋಡಿದ ತಕ್ಷಣ ನನಗೆ ಖುಷಿಯಾಗಬೇಕು. ಇದನ್ನು ಕೇಳಲು ಸಿಲ್ಲಿ ಎನಿಸಿದರು ಇದು ನಿಜ. ಏಕೆಂದರೆ ಡಾಲಿ ತಾನು ಮದುವೆಯಾಗುವ ಹುಡುಗಿ ಲವಲವಿಕೆಯಿಂದ ಇರಬೇಕೆಂದು ಆಸೆ ಪಟ್ಟಿದ್ದಾರೆ ಇದು ಡಾಲಿ ಅವರ ಕನಸು ಕೂಡ.

ಕಳೆದ ಕೆಲವು ದಿನಗಳಿಂದ ಧನಂಜಯ್ ಮತ್ತು ಅಮೃತ ಅವರ ಹೆಸರು ಕೇಳಿಬರುತ್ತಿತ್ತು. ಆನ್ ಸ್ಕ್ರೀನ್ ನಲ್ಲಿ ಮಿಂಚಿದ ಈ ಜೋಡಿ ಆಫ್ ಸ್ಕ್ರೀನ್ ನಲ್ಲೂ ಒಂದಾಗಬೇಕೆಂಬುದು ಅಭಿಮಾನಿಗಳ ಆಸೆ ಆಗಿತ್ತು. ಹೀಗಾಗಿ ಧನಂಜಯ್ ಹೇಳಿರುವ ಗುಣಗಳು ಅಮೃತರಲ್ಲಿ ಇದ್ದರೆ ಅಭಿಮಾನಿಗಳ ಆಸೆಯಂತೆ ಇವರಿಬ್ಬರು ಒಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top