fbpx
ಸಮಾಚಾರ

ಸೆಪ್ಟೆಂಬರ್ 20: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಸೆಪ್ಟೆಂಬರ್ 20, 2022 ಮಂಗಳವಾರ
ವರ್ಷ : 1944, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದಶಮೀ : Sep 19 07:02 pm – Sep 20 09:26 pm; ಏಕಾದಶೀ : Sep 20 09:26 pm – Sep 21 11:34 pm
ನಕ್ಷತ್ರ : ಪುನರ್ವಸು: Sep 19 06:11 pm – Sep 20 09:07 pm; ಪುಷ್ಯ: Sep 20 09:07 pm – Sep 21 11:47 pm
ಯೋಗ : ವಾರಿಯ: Sep 19 07:28 am – Sep 20 08:24 am; ಪರಿಘ: Sep 20 08:24 am – Sep 21 09:12 am
ಕರಣ : ವಾಣಿಜ: Sep 19 07:02 pm – Sep 20 08:16 am; ವಿಷ್ಟಿ: Sep 20 08:16 am – Sep 20 09:26 pm; ಬಾವ: Sep 20 09:26 pm – Sep 21 10:33 am

Time to be Avoided
ರಾಹುಕಾಲ : 3:13 PM to 4:43 PM
ಯಮಗಂಡ : 9:12 AM to 10:42 AM
ದುರ್ಮುಹುರ್ತ : 08:36 AM to 09:24 AM, 11:01 PM to 11:49 PM
ವಿಷ : 06:00 AM to 07:47 AM
ಗುಳಿಕ : 12:13 PM to 1:43 PM

Good Time to be Used
ಅಮೃತಕಾಲ : 06:25 PM to 08:13 PM
ಅಭಿಜಿತ್ : 11:49 AM to 12:37 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:13 PM

 

ಹಲವು ನಿಂದನೆಗಳು ಅಪವಾದಗಳು ಈ ದಿನ ಬರುವ ಸಾಧ್ಯತೆ ಇರುವುದು. ಆದಷ್ಟು ಈ ದಿನ ತಾಳ್ಮೆಯಿಂದ ಇರಿ. ವೃತ್ತಿಯಲ್ಲಿ ತೊಂದರೆಯಿದೆ. ಆಹಾರ ವಿಹಾರದಲ್ಲಿ ಎಚ್ಚರಿಕೆ ಅಗತ್ಯ. ಕೌಟುಂಬಿಕ ಕಲಹದಿಂದ ಬೇಸರಗೊಳ್ಳುವಿರಿ.

ಎದುರಾಳಿಗಳಿಂದ ಕಿರಿಕಿರಿಯಿರಿ. ಅವಸರ ಬೇಡ. ಎದುರಾಳಿಗಳ ಬಲವನ್ನು ನಿಖರವಾಗಿ ತಿಳಿದು ಮುನ್ನುಗುವುದು ಒಳಿತು. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಿರುವುದಿಲ್ಲ. ದೇವರನ್ನು ನೆನೆಯಿರಿ ಈ ದಿನ ಕಡಲೆಕಾಳನ್ನು ದಾನ ಮಾಡಿರಿ.

ಕೆಲವು ಕೌಟುಂಬಿಕ ವಿಚಾರಗಳು ಮತ್ತು ಕಚೇರಿಯ ವಿಚಾರಗಳು ಆತಂಕ ನೀಡಲಿದೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎನ್ನುವಂತೆ ಭಗವಂತನ ಮೊರೆ ಹೋಗುವುದೇ ಸದ್ಯದ ಉಪಾಯ.

ಇಂದು ನೀವು ನಿಮ್ಮ ವಿಚಾರಧಾರೆಯಿಂದ ಬಹು ಎತ್ತರಕ್ಕೆ ಏರಬಲ್ಲಿರಿ. ಆದರೆ ಅದಕ್ಕೆ ಹಲವು ಅಡೆತಡೆಗಳಿದ್ದು ಅವುಗಳ ಕಡೆ ಮೊದಲು ಗಮನ ನೀಡಿರಿ. ಈಗ ಧೈರ್ಯಗೆಡುವ ಬದಲು ಧೈರ್ಯದಿಂದ ಕಾರ್ಯ ಪ್ರವೃತ್ತರಾಗಿರಿ.

 

ಬೊಗಳುವ ನಾಯಿ ಕಚ್ಚುವುದಿಲ್ಲ. ಅಂತೆಯೆ ಬರಿ ಮಾತಿನಿಂದ ಕಾರ್ಯ ಸಾಧುವಲ್ಲ. ಹಾಗಾಗಿ ನೀವು ಜನತೆಗೆ ಏನು ತಿಳಿಸಬೇಕೆಂದಿರುವಿರೋ ಅದನ್ನು ಮೊದಲು ಮಾಡಿ ತೋರಿಸಿ. ಜನರ ವಿಶ್ವಾಸವನ್ನು ಮೊದಲು ಈ ದಿನ ಪಡೆಯಿರಿ.

 

ಬಾಳ ಸಂಗಾತಿಯ ಸೂಕ್ತ ಬೆಂಬಲದಿಂದಾಗಿ ಎದುರಾಗಿರುವ ನೂರಾರು ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವಿರಿ. ಆದರೆ ಆತುರ ಪ್ರವೃತ್ತಿ ಸಲ್ಲದು. ನಿಧಾನವೇ ಪ್ರಧಾನ ಎಂಬುದು ನಿಮಗೆ ತಿಳಿದಿರಲಿ. ಆರ್ಥಿಕ ಸ್ಥಿತಿ ಸುಧಾರಿಸುವುದು.

 

ನಿಮ್ಮ ಕಾರ್ಯಕ್ಷೇತ್ರದಲ್ಲಿ ತೋರುವ ಜಾಣ್ಮೆಯು ನಿಮ್ಮನ್ನು ಬಹು ಎತ್ತರಕ್ಕೆ ಕೊಂಡೊಯ್ಯುವುದು. ಇದಕ್ಕೆ ನಿಮ್ಮ ವಿದ್ಯೆಯು ಸಹಕಾರಿಯಾಗಿ ನಿಲ್ಲುವುದು. ಆರೋಗ್ಯದ ಕಡೆ ಗಮನ ಹರಿಸಿರಿ. ಸೂಕ್ತ ಎನಿಸಿದಲ್ಲಿ ಮನೆ ವೈದ್ಯರನ್ನು ಭೇಟಿ ಮಾಡಿರಿ.

 

ನಿಮ್ಮ ಚಾಕಚಕ್ಯತೆಯನ್ನು ಯಾರೂ ಪ್ರಶ್ನಿಸಲಾರರು. ಏಕೆಂದರೆ ಆನೆ ನಡೆದದ್ದೆ ದಾರಿ. ಅಂತೆಯೇ ಈ ದಿನ ನೀವು ಕೈಕೊಳ್ಳುವ ಕಾರ್ಯಗಳು ಸಾರ್ವಜನಿಕ ಮನ್ನಣೆ ಗಳಿಸುವುದು.

 

ಈ ದಿನ ಮಾನಸಿಕ ಸ್ಥಿತಿ ಅಷ್ಟೇನೂ ಉತ್ತಮವಿಲ್ಲ. ಶಿವನ ಧ್ಯಾನ ಮಾಡಿರಿ. ಸಾಧ್ಯವಾದರೆ ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿರಿ. ಮಹತ್ತರ ತೀರ್ಮಾನಗಳನ್ನು ಮುಂದೂಡುವುದು ಒಳಿತು.

ನೀವು ಅತ್ಯಂತ ಗೌಪ್ಯತೆ ಎಂದು ಕಾಪಾಡಿಕೊಂಡ ವಿಚಾರವೂ ಇತರೆಯವರಿಗೆ ತಿಳಿದು ಅವರು ನಿಮ್ಮನ್ನು ಅಣಕಿಸುವ ಸಾಧ್ಯತೆಯಿದೆ. ನಿಮಗಾದ ಅವಮಾನವನ್ನು ಈ ದಿನ ಸಹಿಸಿಕೊಳ್ಳಬೇಕಾಗಿದೆ. ಗಣಪತಿಯನ್ನು ಪ್ರಾರ್ಥಿಸಿರಿ.

 

 

ವಿರೋಧಿಗಳನ್ನು ಮೆಟ್ಟಿ ನಿಲ್ಲುವಿರಿ. ಸಕಾರಾತ್ಮಕ ಚಿಂತನೆಯಿಂದ ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಅವರ ಮುಖದಲ್ಲಿನ ಮಂದಹಾಸ ನಿಮಗೆ ಉತ್ತಮ ಪ್ರೇರಣೆ ನೀಡುವುದು.

ಅನಿರೀಕ್ಷಿತ ವಿದ್ಯಮಾನಗಳಿಂದ ತಲ್ಲಣಗೊಳ್ಳುವಿರಿ. ಆದರೆ ನಿಮ್ಮ ನಿರಂತರ ಹೋರಾಟಕ್ಕೆ ಬೆಂಬಲ ದೊರೆಯುವುದು. ವಾಹನಗಳಲ್ಲಿ ಸಂಚರಿಸುವಾಗ ಎಚ್ಚರಿಕೆ ಅಗತ್ಯ. ಮಾತೃವರ್ಗದವರಿಗೆ ಪೀಡೆ ಉಂಟಾಗಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top