fbpx
ಸಮಾಚಾರ

ವಾರ ಭವಿಷ್ಯ: ಸೆಪ್ಟೆಂಬರ್ 19ನೇ ತಾರೀಖಿನಿಂದ 25ನೇ ತಾರೀಖಿನವರೆಗೆ

ಮೇಷ ರಾಶಿ

 

 

 

ವಾರ ಉತ್ತಮ ಪ್ರಗತಿ,ರಾಜ ಸನ್ಮಾನ ,ಗೌರವ ಪ್ರಾಪ್ತಿ , ವಾಹನ ಖರೀದಿಸುವ ಯೋಗ, ಕಾರ್ಯ ಸಾಧನೆಯನ್ನು ಮಾಡುವಿರಿ, ಕೆಲಸ ಕಾರ್ಯದಲ್ಲಿ ಪ್ರಗತಿ, ಮಾನಸಿಕ ಒತ್ತಡ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿದೆ ವಾರಾಂತ್ಯದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಒಳಗಾಗಬೇಕಾಗುತ್ತದೆ ದಂಡ ಕಟ್ಟುವ ಸಾಧ್ಯತೆ ಇದೆ ಆದ್ದರಿಂದ ಸ್ವಲ್ಪ ಎಚ್ಚರವಾಗಿರಿ .
ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ ಪಕ್ಷಿಗಳಿಗೆ ಧಾನ್ಯವನ್ನು ಹಾಕಿ.

ವೃಷಭ ರಾಶಿ

 

 

 

ವಿದ್ಯಾರ್ಥಿಗಳಲ್ಲಿ ಗೊಂದಲ, ವಿವಾಹಕ್ಕೆ ತೊಂದರೆ, ಆತುರ ಸ್ವಭಾವ, ಮಾತಿನ ಮೇಲೆ ನಿಗಾ ವಹಿಸಿ, ಪರಸ್ಥಳ ವಾಸ, ನಾನಾ ರೀತಿಯ ಚಿಂತೆಗಳು ಕಾಡಲಿವೆ, ದ್ರವ್ಯಲಾಭ, ಶತ್ರುಗಳಿಂದ ಭಾದೆಗೆ ಒಳಗಾಗಲಿದ್ದೀರ, ಶತ್ರುಗಳ ಮಾಡುವ ಷಡ್ಯಂತ್ರಕ್ಕೆ ಬಲಿಯಾಗಬೇಕಾಗುತ್ತದೆ.
ಪರಿಹಾರ:ಪ್ರತಿನಿತ್ಯ ಅಶ್ವಥ 18 ಬಾರಿ ಪ್ರದಕ್ಷಿಣೆಯನ್ನು ಬಾರಿ ಪ್ರದಕ್ಷಿಣೆಯನ್ನು ಮಾಡಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮಿಥುನ ರಾಶಿ

 

 

 

ಮಾತೃವಿನಿಂದ ಆಶೀರ್ವಾದ, ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ, ಅನ್ಯ ಜನರಲ್ಲಿ ಪ್ರೀತಿ, ವಿಶ್ವಾಸ ಅಧಿಕವಾಗಲಿದೆ, ಸ್ವಲ್ಪ ಹಣ ಬಂದರೂ ಎಲ್ಲವೂ ಖರ್ಚಾಗಲಿದೆ, ನಂಬಿಕಸ್ಥರಿಂದಲೇ ದ್ರೋಹಕ್ಕೆ ಒಳಗಾಗುತ್ತೀರಿ ,ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಯಾಗಲಿದೆ.
ಪರಿಹಾರ:ಪ್ರತಿನಿತ್ಯ “ಓಂ ನಮೋ ನಾರಾಯಣಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ಬುದುವಾರ ವಿಷ್ಣು ದೇವಾಲಯಕ್ಕೆ ಹೋಗಿ ನಾಟಿ ತುಳಸಿಯನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರ ಮಾಡಿ.

ಕಟಕ ರಾಶಿ

 

 

 

ಈ ವಾರ ಸ್ತ್ರೀಯರಿಗೆ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಅಥವಾ ವಿದೇಶ ಪ್ರಯಾಣಕ್ಕೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ, ಮಿತ್ರರಿಂದ ದ್ರೋಹಕ್ಕೆ ಒಳಗಾಗುತ್ತೀರಿ, ಇತರರ ಮಾತಿನಿಂದ ಕಲಹ ಉಂಟಾಗಲಿದೆ, ಚೋರ ಭಯ, ವಿಪರೀತ ಖರ್ಚು
ಪರಿಹಾರ:“ಓಂ ಗಕಾರ ಗಣಪತಯೇ ನಮಃ” ಈ ಮಂತ್ರವನ್ನು 21 ಬಾರಿ ಜಪಿಸಿ ಮಂಗಳವಾರ ಉತ್ತರಾಭಿಮುಖವಾಗಿರುವ ಗಣೇಶನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಸಿಂಹ ರಾಶಿ

 

 

 

ಉದ್ಯಮಿಗಳಿಗೆ ಅನುಕೂಲ, ಹಿರಿಯರಲ್ಲಿ ಭಕ್ತಿ, ಗೌರವ ಹೆಚ್ಚಾಗಲಿದೆ, ಉತ್ತಮ ಯಶಸ್ಸು ಪ್ರಾಪ್ತಿಯಾಗಲಿದೆ, ಅತಿಯಾದ ಕೋಪವನ್ನು ಮಾಡಿಕೊಳ್ಳಲಿದದ್ದೀರ, ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು, ಋಣ ವಿಮೋಚನೆ , ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರ .
ಪರಿಹಾರ:ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ, ಪ್ರತಿನಿತ್ಯ ಆಂಜನೇಯನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕನ್ಯಾ ರಾಶಿ

 

 

 

ಅನಾವಶ್ಯಕ ಮಾತುಗಳಿಂದ ಆದಷ್ಟು ದೂರವಿರಿ, ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯ ಅಧಿಕವಾಗಲಿದೆ, ಮನಃ ಶಾಂತಿ, ಸ್ನೇಹಿತರು ಸಹಾಯವನ್ನು ಪಡೆಯುತ್ತೀರಿ, ಸುಖ ಭೋಜನ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ, ಆರೋಗ್ಯದ ಕಡೆ ಗಮನ ಹರಿಸಿ,
ಪರಿಹಾರ:ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಿ ಸೂರ್ಯ ನಮಸ್ಕಾರವನ್ನು ಮಾಡಿ.

ತುಲಾ ರಾಶಿ

 

 

 

ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿರುವವರಿಗೆ ಲಾಭ, ಚಂಚಲ ಮನಸ್ಸು, ರೋಗ ಬಾಧೆ, ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ಮುಂದಾಗುತ್ತೀರ, ಹಣಕಾಸು ವಿಷಯಗಳಲ್ಲಿ ತೊಂದರೆ, ಸ್ತ್ರೀಯರಿಗೆ ಶುಭ ಸಮಯ, ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ.
ಪರಿಹಾರ:ಪ್ರತಿನಿತ್ಯ ಅಂಧಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

ವೃಶ್ಚಿಕ ರಾಶಿ

 

 

ನಾನಾ ರೀತಿಯ ತೊಂದರೆಗಳು, ಅನ್ಯರೊಂದಿಗೆ ಮನಸ್ತಾಪ, ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ, ನಾನ ವಿಚಾರಗಳಲ್ಲಿ ಆಸಕ್ತಿ, ದುಃಖ ದಾಯಕ ಘಟನೆ ಸಂಭವಿಸುವುದು, ಅಲ್ಪ ಪ್ರಗತಿ, ಕೃಷಿ ಚಟುವಟಿಕೆಗಳನ್ನು ಮಾಡುತ್ತಿರುವವರಿಗೆ ಬಹಳಷ್ಟು ಲಾಭ.
ಪರಿಹಾರ:ಪ್ರತಿನಿತ್ಯ ಆಂಜನೇಯ ಗಾಯತ್ರಿ ಮಂತ್ರವನ್ನು ಪಾರಾಯಣ ಮಾಡಿ.

ಧನಸ್ಸು ರಾಶಿ

 

 

 

ಬಂಧು ಮಿತ್ರರಲ್ಲಿ ಪ್ರೀತಿ ವಾತ್ಸಲ್ಯ ಅಧಿಕವಾಗಲಿದೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ದೂರ ಪ್ರಯಾಣ ಮಾಡುವ ಸಾಧ್ಯತೆಯಿದೆ, ಶುಭ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರ, ಸ್ಥಿರಾಸ್ತಿ ಸಂಪಾದನೆ ಮಾಡಲು ಬಹಳಷ್ಟು ಓಡಾಟ ಮಾಡುತ್ತೀರ, ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣ ನೆಲೆಸಲಿದೆ, ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರ.
ಪರಿಹಾರ:ಗುರು ಚರಿತ್ರೆಯನ್ನು ನಿತ್ಯ ಪಾರಾಯಣ ಮಾಡಿ, ಗುರುಗಳಿಗೆ ಗುರುವಾರ ನಮಸ್ಕಾರ ಮಾಡಿ ಆಶೀರ್ವಾದ ವನ್ನು ಪಡೆಯಿರಿ.

ಮಕರ ರಾಶಿ

 

 

 

ನೂತನ ಕಟ್ಟಡಗಳನ್ನು ಪ್ರಾರಂಭ ಮಾಡುವುದಕ್ಕೆ ಮುಂದಾಗುತ್ತೀರ, ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ, ಸ್ವಲ್ಪ ಜಾಗ್ರತೆ ವಹಿಸಿ, ಸುಖ ಭೋಜನ ಪ್ರಾಪ್ತಿ, ಅನಗತ್ಯ ವಿಷಯಗಳಿಗೆ ಕಲಹವನ್ನು ಮಾಡಿಕೊಳ್ಳುತ್ತೀರ, ಯಾರನ್ನೂ ಕೂಡ ಹೆಚ್ಚಿಗೆ ನಂಬಬೇಡಿ, ಔತಣಕೂಟದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ.
ಪರಿಹಾರ:ಗಜೇಂದ್ರ ಮೋಕ್ಷ ಪಾರಾಯಣವನ್ನು ಮಾಡಿ, ಬುದುವಾರ ವಿಷ್ಣು ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕುಂಭ ರಾಶಿ

 

 

 

ವಿವಾಹ ಯೋಗ, ಆಕಸ್ಮಿಕ ಧನಾಗಮನವಾಗಲಿದೆ, ಮನಃಶಾಂತಿ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿವಾದಗಳಿಗೆ ಆಸ್ಪದ ಕೊಡಬೇಡಿ , ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ.
ಪರಿಹಾರ:ದಕ್ಷಿಣಾಮೂರ್ತಿಯ ದೇವಾಲಯಕ್ಕೆ ಗುರುವಾರ ಹೋಗಿ ಹಳದಿ ಪುಷ್ಪವನ್ನು ಅರ್ಪಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮೀನ ರಾಶಿ

 

 

 

ಕುಲ ದೇವರ ದರ್ಶನ ಮಾಡುವ ಶುಭಯೋಗ, ದೂರ ಪ್ರಯಾಣ ಮಾಡಲಿದ್ದೀರಿ, ಯತ್ನ ಕಾರ್ಯಗಳಲ್ಲಿ ಜಯ, ಅಕಾಲ ಬೋಜನ , ಸಕಾಲಕ್ಕೆ ಆಹಾರವನ್ನು ಸ್ವೀಕರಿಸಲು ಸಾಧ್ಯವಿಲ್ಲ, ದಾಯಾದಿಗಳ ಕಲಹ, ವಾಹನ ಚಾಲನೆಯಿಂದ ತೊಂದರೆ, ಪ್ರಿಯ ಜನರ ಭೇಟಿಯನ್ನು ಮಾಡಲಿದ್ದೀರಿ, ವಾರಾಂತ್ಯದಲ್ಲಿ ಮಾನಸಿಕ ನೆಮ್ಮದಿ ಲಭಿಸುವುದು.
ಪರಿಹಾರ:ಪ್ರತಿನಿತ್ಯ “ಓಂ ನಮಃ ಶಿವಾಯ” ಶಿವ ಪಂಚಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಿ, ಸೋಮವಾರ ಶಿವಾಲಯಕ್ಕೆ ಹೋಗಿ ಬಿಲ್ವಾರ್ಚನೆಯನ್ನು ಮಾಡಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top