fbpx
ಸಮಾಚಾರ

ಖಾಸಗಿ ರೆಸಾರ್ಟ್ ನಲ್ಲಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

ಬಿಗ್ ಬಾಸ್ OTT ಕಾರ್ಯಕ್ರಮ ಮುಗಿದ ಬಳಿಕ ಔಟ್ ಆದ ಸ್ಪರ್ಧಿಗಳು ಮನೆಗೆ ತೆರಳಿದರು. ಆದರೆ ಬಿಗ್ ಬಾಸ್ OTT ಫೈನಲಿಸ್ಟ್ ಆದ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಮತ್ತು ಸಾನ್ಯ ಐಯ್ಯರ್ ಎಲ್ಲಿದ್ದಾರೆ ಎಂಬ ಸುಳಿವು ಯಾರಿಗೂ ತಿಳಿದಿರಲಿಲ್ಲ. ಏಕೆಂದರೆ ಬಿಗ್ ಬಾಸ್ OTT ಕಾರ್ಯಕ್ರಮ ಮುಗಿದ ಬಳಿಕ ಇವರು ಬಿಗ್ ಬಾಸ್ ಮನೆಯಲ್ಲಿ ಇಲ್ಲ. ಬದಲಾಗಿ ಇವರು ತಮ್ಮ ಮನೆಗೂ ಸಹ ಹೋಗಿಲ್ಲ. ಹೀಗಾಗಿ ಇವರು ಎಲ್ಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಆದರೆ ಇದಕ್ಕೆ ಉತ್ತರ ಇದೆ.

ಬಿಗ್ ಬಾಸ್ OTT ಮುಗಿದ ಬಳಿಕ ಫೈನಲಿಸ್ಟ್ ಸ್ಪರ್ಧಿಯಾಳನ್ನು ಬಿಗ್ ಬಾಸ್ ಒಂದು ನಿಗೂಡ ಜಗದಲ್ಲಿ ಇಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಈ ಎಲ್ಲಾ ಸ್ಪರ್ಧಿಗಳು ಬೆಂಗಳೂರಿನ ಒಂದು ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ವಾಸವಿದ್ದು, ಯಾರ ಸಂಪರ್ಕಕ್ಕೂ ಸಿಗದ ಹಾಗೆ ಇವರನ್ನು ನೋಡಿಕೊಳ್ಳಲಾಗುತ್ತಿದೆ.

 

 

ಬಿಗ್ ಬಾಸ್ OTT ಫೈನಲಿಸ್ಟ್ ಆದ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಮತ್ತು ಸಾನ್ಯ ಐಯ್ಯರ್ ಬೆಂಗಳೂರಿನ ಕನಕಪುರದ ಪೈಪ್ ಲೈನ್ ರಸ್ತೆಯಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ ವಾಸವಾಗಿದ್ದಾರೆ. ಇವೆಲ್ಲದರ ಮದ್ಯೆ ನೆನ್ನೆ ಸಾನ್ಯ ಐಯ್ಯರ್ ಅವರ ಹುಟ್ಟುಹಬ್ಬ ಇರುವ ಕಾರಣ ಕೇಕ್ ತರಿಸಿ ಇವರ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಆದರೆ ಕುಟುಂಬಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಹೀಗಾಗಿ ಈ ನಾಲ್ಕು ಜನ ಸ್ಪರ್ದಿಗಳು ಮತ್ತೆ ಬಿಗ್ ಬಾಸ್ ವೇದಿಕೆಯ ಮೇಲೆ ಸೆ.24 ರಂದು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಅಲ್ಲಿಯವರೆಗೂ ಇವರು ಈ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಇರುತ್ತಾರೆ ಎಂದು ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top