ಆಸ್ಟ್ರೇಲಿಯಾದ ಮಾಜಿ ಘಾತಕ ವೇಗಿ ಮಿಚೆಲ್ ಜಾನ್ಸನ್ ಅವರು ಸದ್ಯ ಭಾರತದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಜಾಕ್ವೆಸ್ ಕಾಲಿಸ್ ನೇತೃತ್ವದ ಇಂಡಿಯಾ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ ಮತ್ತು ಶನಿವಾರ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಅವರು ತಂಗಿದ್ದ ಹೋಟೆಲ್ ನಲ್ಲಿ ಅವಘಡವೊಂದು ನಡೆದಿದೆ.
View this post on Instagram
40 ವರ್ಷದ ಎಡಗೈ ವೇಗದ ಬೌಲರ್ ಲಖನೌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಅಲ್ಲಿ ಇದ್ದಕ್ಕಿದ್ದಂತೆ ಹಾವೊಂದು ಅವರ ಕೋಣೆಗೆ ಪ್ರವೇಶಿಸಿದೆ, ಇದು ಆಸ್ಟ್ರೇಲಿಯಾದ ಕ್ರಿಕೆಟಿಗನನ್ನು ಗಾಬರಿಯಾಗಿಸಿದೆ. ಆದಾಗ್ಯೂ, ಜಾನ್ಸನ್ ಇಡೀ ಘಟನೆಯ ಬಗ್ಗೆ ಯಾರನ್ನೂ ದೂರಿಲ್ಲ. ಆದರೆ ಇದು ಟೀಮ್ ಇಂಡಿಯಾ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022 ಗಾಗಿ ಲಕ್ನೋದಲ್ಲಿ ತಂಗಿರುವ ಹೋಟೆಲ್ ಸಿಬ್ಬಂದಿಯ ನಿರ್ಲಕ್ಷ್ಯದ ಗಂಭೀರ ಪ್ರಕರಣವಾಗಿದೆ.
ಇದರ ಫೋಟೋ ಶೇರ್ ಮಾಡಿರುವ ಅವರು, ‘ನನ್ನ ಕೋಣಯ ಬಾಗಿಲ ಸಮೀಪ ಪತ್ತೆಯಾದ ಈ ಹಾವು ಯಾವುದು ಎಂದು ನಿಮಗೆ ಗೊತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಹಲವರು ವಿವಿಧ ರೂಪದಲ್ಲಿ ಪ್ರತಿಕ್ರಿಯಿಸಿದ್ದು, ಆಟಗಾರರ ಸುರಕ್ಷತೆಯ ಬಗ್ಗೆಯೂ ಕೆಲವರು ಪ್ರಶ್ನಿಸಿದ್ದಾರೆ. “ಈ ಹಾವಿನ ತಲೆಯ ಉತ್ತಮ ಚಿತ್ರ ಕಂಡುಬಂದಿದೆ. ಅದು ನಿಖರವಾಗಿ ಏನೆಂದು ಇನ್ನೂ ಖಚಿತವಾಗಿಲ್ಲ. ಲಕ್ನೋದಲ್ಲಿ ಇಲ್ಲಿಯವರೆಗಿನ ವಾಸ್ತವ್ಯ ಆಸಕ್ತಿದಾಯಕವಾಗಿದೆ ”ಎಂದು ಅವರು ಮತ್ತೊಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
