fbpx
ಸಮಾಚಾರ

ಮುದ್ದಾದ ಮಗುವಿಗೆ ” ವಾಯು ” ಎಂದು ನಾಮಕರಣ ಮಾಡಿದ ಸೋನಂ: ಈ ಹೆಸರನ್ನೇ ಇಡಲು ಕಾರಣ ತಿಳಿಸಿದ ನಟಿ

ಇತ್ತೀಚಿಗೆ ಸಿನಿಮಾ ರಂಗದಲ್ಲಿ ಒಂದಾದರಮೇಲೊಂದರಂತೆ ಮದುವೆಯ ಸಂಭ್ರಮಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ನಟಿಯರ ಮಗುವಿನ ವಿಚಾರ ಕೂಡ ಹೆಚ್ಚು ಸೌಂಡ್ ಮಾಡುತ್ತಿದ್ದೆ. ಇತ್ತೀಚಿಗೆ ಬಾಲಿವುಡ್ ನಟಿ ಸೋನು ಕಪೂರ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಈ ಮಗುವಿಗೆ ಹೆಸರನ್ನು ಇಟ್ಟಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ಅನಿಲ್​ ಕಪೂರ್ ಮಗಳು ಸೋನಂ​ ಕಪೂರ್ ಹಾಗೂ ಪತಿ ಆನಂದ್​ ಅಹೂಜ ದಂಪತಿಗೆ ಆಗಸ್ಟ್ 20 ರಂದು ಗಂಡು ಮಗು ಜನಿಸಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಇವರ ಫ್ಯಾನ್ಸ್ ಬಹಳ ಖುಷಿ ಪಟ್ಟರು. ಇದೀಗ ಸೋನು ಕಪೂರ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಖುಷಿ ವಿಚಾರ ತಿಳಿಸಿದ್ದು, ಅದೇನೆಂದರೆ ತಮ್ಮ ಮುದ್ದಾದ ಮಗುವಿಗೆ ನಾಮಕರಣ ಮಾಡಿದ್ದಾರೆ.

 

 

ಸೋನಂ ಕಪೂರ್ ತಮ್ಮ ಮಗುವಿಗೆ “ವಾಯು” ಎಂದು ನಾಮಕರಣ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ಕುರಿತು ಪೋಸ್ಟ್ ಹಂಚಿಕೊಂಡಿರುವ ಇವರು ‘ನಮ್ಮ ಮಗನಿಗೆ ವಾಯು ಕಪೂರ್ ಅಹೂಜ ಎಂದು ಹೆಸರು ಇಟ್ಟಿದ್ದೇವೆ. ಹಿಂದೂ ಧರ್ಮಗ್ರಂಥದ ಪ್ರಕಾರ ವಾಯುವು ಪಂಚ ಭೂತಗಳಲ್ಲಿ ಒಂದು. ವಾಯುವು ಉಸಿರಾಟದ ದೇವತೆ, ಹನುಮಂತನ ತಂದೆ ವಾಯು’ ಎಂದು ಬರೆದುಕೊಂಡಿದ್ದಾರೆ.

ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್​ ಅಹೂಜ 2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ಮದುವೆಯಾಗಿ ಸುಮಾರು 4 ವರ್ಷಗಳ ಬಳಿಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದೀಗ ಇವರ ಮಗುವಿನ ನಾಮಕರಣ ಕೂಡ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top