fbpx
ಸಮಾಚಾರ

ಪುನೀತ್ ಓಕೆ ಮಾಡಿದ್ದ ಸಿನಿಮಾ ಮುಗಿಸಿಕೊಟ್ಟು ಕೃತಜ್ಞತೆ ಹೇಳಿದ ಆಶಿಕ ರಂಗನಾಥ್

ಕನ್ನಡ ಸಿನಿಮಾ ರಂಗದ ಹೆಸರಾಂತ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಇತ್ತೀಚಿಗೆ ಮಾದಗಜ ಸಿನಿಮಾದಲ್ಲಿ ಇವರ ನಟನೆಗಾಗಿ ಇವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ದೊರಕಿದೆ. ಹೀಗಾಗಿ ಇವರು ಸ್ಯಾಂಡಲ್ವುಡ್ ಮಾತ್ರವಲ್ಲದೆ ಬೇರೆ ಸಿನಿಮಾ ರಂಗದಲ್ಲೂ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಇವೆಲ್ಲದರ ಮದ್ಯೆ ಇದೀಗ ಇವರು ಒಂದು ಇಂಟೆರೆಸ್ಟಿಂಗ್ ವಿಷಯವೊಂದನ್ನು ತಿಳಿಸಿದ್ದಾರೆ.

ಆಶಿಕಾ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಬೇಕೆಂಬ ಆಸೆ ಇತ್ತು. ಆದರೂ ಇವರಿಗೆ ಜೇಮ್ಸ್ ಸಿನಿಮಾದಲ್ಲಿ ನಟಿಸುವ ಒಂದು ಅವಕಾಶ ಸಿಕ್ಕಿತು. ಅದು ಕೂಡ ಒಂದು ಹಾಡಿನಲ್ಲಿ. ಇದಾದ ಬಳಿಕ ಇವರಿಗೆ ಅಪ್ಪು ಜೊತೆ ನಟಿಸುವ ಒಂದು ಅವಕಾಶ ಸಿಕ್ಕಿತು. ಆದರೆ ಅಪ್ಪು ಅವರ ಅಕಾಲಿಕ ಮರಣದಿಂದ ಇವರ ಕನಸು ನನಸಾಗಲಿಲ್ಲ. ಇಷ್ಟಾದರೂ ಸಹ ಇವರಿಗೆ ಅಪ್ಪು ಓಕೆ ಮಾಡಿದ ಸಿನಿಮಾದಲ್ಲಿ ನಟಿಸುವ ಮೂಲಕ ಇವರ ಆಸೆಯನ್ನು ಸ್ವಲ್ಪ ಮಟ್ಟಿಗೆ ಆದರು ನೆರೆವೇರಿಸಿಕೊಂಡಿದ್ದಾರೆ.

ಇತೀಚೆಗೆ ನಡೆದ ಸಂದರ್ಶನದಲ್ಲಿ ಆಶಿಕಾ ನನ್ನ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿದ್ದವು. ಇದರ ಪೈಕಿ ‘O2’ ( ಓ ಟು ) ಸಿನಿಮಾದ ಚಿತ್ರೀಕರಣ ಮುಗಿದಿದೆ. ಮತ್ತೊಂದು ಅಚ್ಚರಿಯ ವಿಷಯವೆಂದರೆ ಇದು ದಿವಂಗತ ಪುನೀತ್ ರಾಜ್‌ಕುಮಾರ್ ಸಮ್ಮತಿ ಸೂಚಿಸಿದ್ದ ಸಿನಿಮಾ ಎಂಬ ಮಾಹಿತಿಯನ್ನು ಸ್ವತಃ ಆಶಿಕಾ ಅವರೇ ತಿಳಿಸಿದ್ದಾರೆ.

‘O2’ ( ಓ ಟು ) ಸಿನಿಮಾ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಪಕಿಯಾಗಿದ್ದಾರೆ. ರಾಘವ್ ನಾಯಕ್ ಹಾಗೂ ಪ್ರಶಾಂತ್ ರಾಜ್ ಇಬ್ಬರು ಈ ಸಿನಿಮಾದ ನಿರ್ದೇಶಕರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಕಥೆಯನ್ನು ಆರಿಸಿದ್ದು ಎಂದು ಆಶಿಕಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆಶಿಕಾ ಒಬ್ಬ ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಂದು ವೇಳೆ ಅಪ್ಪು ಬದುಕಿದ್ದರೆ ಇಷ್ಟೊತ್ತಿಗೆ ಅಪ್ಪು ದ್ವಿತ್ವ ಚಿತ್ರದಲ್ಲಿ ನಟಿಸಬೇಕಿತ್ತು. ಇದರಲ್ಲಿ ಆಶಿಕಾ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ವಿಧಿ ಆಟ ಬೇರೆ ಇದ್ದ ಕಾರಣ ಇದು ನಡೆಯಲು ಸಾಧ್ಯವಾಗಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top