fbpx
ಸಮಾಚಾರ

ಬಿಗ್ ಬಾಸ್ ಸೀಸನ್-9 ಮನೆಗೆ ಯಾರೆಲ್ಲಾ ಬರ್ತಾರೆ ಗೊತ್ತಾ? ಇಲ್ಲದೆ #BBK9 ಸ್ಪರ್ಧಿಗಳ ಪಟ್ಟಿ

ಬಿಗ್ ಬಾಸ್ ಸೀಸನ್ 9 ಶುರುವಾಗಲು ಕ್ಷಣಗಣನೆ ಶುರುವಾಗಿದೆ. ಇದೀಗ ಎಲ್ಲರ ಮನಸಲ್ಲೂ ಈ ಬಾರಿಯ ಬಿಗ್ ಬಾಸ್ ಗೆ ಯಾವೆಲ್ಲ ಸ್ಪರ್ಧಿಗಳು ಹೋಗಬಹುದು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಮನೆಗೆ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಗೊತ್ತಾ?

ಸಾಮಜಿಕ ಜಾಲತಾಣದಲ್ಲಿ ಬರ್ತಡೇ ಹಾಡು ಮಾಡುವ ಮೂಲಕ ಅಪರಾವ ಅಭಿಮಾನ ಗಳಿಸಿರುವ ಕಾಫೀ ನಾಡು ಚಂದು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವುದು ಪಕ್ಕ ಎಂದು ಹೇಳಬಹುದು. ಏಕೆಂದರೆ ಇವರು ಬಿಗ್ ಬಾಸ್ ಮನೆಗೆ ಬರಬೇಕೆಂದು ಅಪಾರವಾದ ಅಭಿಮಾನಿಗಳು ಇದರ ಕುರಿತು ಅಭಿಯಾನ ಮಾಡಿದರು. ಹೀಗಾಗಿ ಇವರು ಬಿಗ್ ಬಾಸ್ ಸೀಸನ್ 9 ರಲ್ಲಿ ಕಾಣಬಹುದು.

ಮತ್ತೊಂದೆಡೆ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿರುವ ನಟಿ ಪ್ರೇಮ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಇವರು ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಎಲ್ಲ ಸಾಧ್ಯತೆಗಳಿವೆ. `ಕಮಲಿ’ ಸೀರಿಯಲ್ ಖ್ಯಾತಿಯ ಅಮೂಲ್ಯ ಗೌಡ ಮತ್ತು ʻಮುದ್ದುಮಣಿಗಳುʼ ಖ್ಯಾತಿಯ ಸಮೀಕ್ಷಾ ಕೂಡ ಈ ಶೋನಲ್ಲಿ ಭಾಗವಹಿಸಬಹುದು.

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕ ಕಾಮತ್ ಮತ್ತು ಬಿ ಟಿವಿ ನಿರೂಪಕಿ ಮತ್ತು ಗಿಚ್ಚಿ ಗಿಲಿಗಿಲಿ ಖ್ಯಾತಿಯ ದಿವ್ಯ ವಸಂತ ಕೂಡ ಭಾಗವಹಿಸಬಹುದು. ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಯಲ್ಲಿ ಎಲ್ಲರನ್ನು ನಗಿಸಿದ ಚಂದ್ರಪ್ರಭ ಮತ್ತು ರಾಘವೇಂದ್ರ ಕೂಡ ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸಬಹುದು. ಇದಲ್ಲದೆ ಸರಿಗಮಪ ಖ್ಯಾತಿಯ ಗಾಯಕಿ ಆಶಾ ಭಟ್ ಕೂಡ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇವೆಲ್ಲ ಪ್ರಶ್ನೆಗಳಿಗೆ ಶನಿವಾರ ಸಂಜೆ ಉತ್ತರ ಸಿಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top