fbpx
ಸಮಾಚಾರ

ಜನಪ್ರಿಯ ಬಲೂನ್​ ಆಕ್ಟ್​ ಕಲಾವಿದ ಹಾಲೋಮ್ಯಾನ್​ ಶರವಣ ಧನಪಾಲ್​​ ನಿಧನ

ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರತಿಭಾವಂತ ವ್ಯಕ್ತಿಗಳು ನಮ್ಮನ್ನು ಅಗಲಿ ಹೋಗುತ್ತಿರುವುದರ ವಿಷಯವನ್ನು ನಾವು ಕೇಳುತ್ತಿರುತ್ತೇವೆ. ಅದರಲ್ಲೂ ಬಹಳಷ್ಟು ಪ್ರತಿಭೆಗಳು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬಹಳಷ್ಟು ಪ್ರತಿಭೆಗಳು ನಮ್ಮನ್ನು ಅಗಲಿದ್ದಾರೆ. ಇದೀಗ ವಿವಿಧ ಪ್ರತಿಭೆ ಮೂಲಕ ಗುರುತಿಸಿಕೊಂಡ ಹಾಲೋಮ್ಯಾನ್​ ಶರವಣ ಧನಪಾಲ್​ ನಿಧನರಾಗಿದ್ದಾರೆ.

ಹಾಲೋಮ್ಯಾನ್​ ಶರವಣ ಧನಪಾಲ್​ ಬಲೂನ್​ ಆಕ್ಟ್​ ಮಾಡುವಲ್ಲಿ ಜನಪ್ರಿಯರು. ಹಲವಾರು ವೇದಿಕೆಯಲ್ಲಿ ಇವರು ತಮ್ಮ ಪ್ರದರ್ಶನವನ್ನು ತೋರಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಇದಕ್ಕಾಗಿ ಇವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇವರು ಮಾಡುತ್ತಿದ್ದ ಬಲೂನ್ ಆಕ್ಟ್ ಅತ್ಯಂತ ಜನಪ್ರಿಯ ಗಳಿಸಿತ್ತು. ಇದು ಇವರನ್ನು ಎಷ್ಟರಮಟ್ಟಿಗೆ ಜನಪ್ರಿಯಗೊಳಿಸಿತ್ತು ಎಂದರೆ ಡಾ. ರಾಜ್​ಕುಮಾರ್​, ವಿಷ್ಣುವರ್ಧನ್, ಅಂಬರೀಶ್, ರಜನಿಕಾಂತ್ ಮುಂತಾದ ಸ್ಟಾರ್​ ಹೀರೋಗಳು ಇವರ ಕಲೆಗೆ ಬೆಲೆ ಕೊಟ್ಟು ಸಕತ್ ಫಿದಾ ಆಗಿದ್ದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರ ಕಿಡ್ನಿ ಕೂಡ ಕಸಿ ಮಾಡಲಾಗಿತ್ತು. ಇದರಿಂದ ಇವರಿಗೆ ಬಹಳ ಇನ್​ಫೆಕ್ಷನ್ ಕೂಡ ಆಗಿತ್ತು. ಹೀಗಾಗಿ ಇವರ ಅರೋಗ್ಯ ಮತ್ತಷ್ಟು ಹದಗೆಡಲು ಶುರುಮಾಡಿತು. ಬುಧವಾರ (ಸೆ.21) ಮಧ್ಯರಾತ್ರಿ ಹಾಲೋಮ್ಯಾನ್​ ಶರವಣ ಧನಪಾಲ್​ ಕೊನೆಯುಸಿರೆಳೆದರು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top