fbpx
ಸಮಾಚಾರ

ತನ್ನ ಕೊನೆಯ ಅಸೆ ಏನೆಂದು ತಿಳಿಸಿದ ಸೋನು ಶ್ರೀನಿವಾಸ್ ಗೌಡ

ಬಿಗ್ ಬಾಸ್ ಮನೆಯ ಮೋಸ್ಟ ಎಂಟರ್ಟೈನಿಂಗ್ ಫ್ಯಾಕ್ಟಾರ್ ಎಂದರೆ ಒಂದು ಆರ್ಯವರ್ಧನ್ ಗುರೂಜಿ ಮತ್ತೊಂದು ಸೋನು ಶ್ರೀನಿವಾಸ್ ಗೌಡ. ಇವರಿಬ್ಬರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸ್ಪರ್ಧಿಗಳಿಗೆ ಅಲ್ಲದೆ ವೀಕ್ಷಕರಿಗೂ ಬಹಳಷ್ಟು ಮನರಂಜನೆ ನೀಡಿದರು. ಇದೀಗ ಸೋನು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ತಮ್ಮ ಕೊನೆಯ ಆಸೆ ಏನೆಂದು ತಿಳಿಸಿದ್ದಾರೆ.

ಬಿಗ್ ಬಾಸ್ ಮನೆಯ ಕ್ಯೂಟ್ ಕಪಲ್ ಎಂದರೆ ಅದು ಸೋನು ಮತ್ತು ರಾಕೇಶ್ ಅಡಿಗ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್ ಬಾಸ್ ಮನೆಯಿಂದ ಹೊರಬಂದ ಸೋನು ರಾಕೇಶ್ ಅವರನ್ನು ಸಕತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಸಹ ಅವರು ಮಾತನಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಸೋನು ” ‘ನಾನು ರಾಕೇಶ್ ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವನು ಮುಂದಿನ ಹಂತ ತಲುಪಿದ್ದಾನೆ ಎಂದು ಕೇಳಿ ಸಂಭ್ರಮಿಸಿದೆ. ಮತ್ತೆ ಅವನು ಬಿಗ್ ಬಾಸ್ ಗೆದ್ದು ಬರಲಿ. ನನ್ನ ಕೊನೆ ಆಸೆ ಏನು ಅಂತ ಸದ್ಯ ಕೇಳಿದರೆ, ಅದು ರಾಕೇಶ್ ಬಿಗ್ ಬಾಸ್ ಮನೆಯಲ್ಲಿ ವಿನ್ ಆಗಬೇಕು’ ಎಂದು ತಿಳಿಸಿದ್ದಾರೆ.

ಈ ಮೂಲಕ ರಾಕೇಶ್ ಬಿಗ್ ಬಾಸ್ ಸೀಸನ್ 9 ಗೆಲ್ಲಬೇಕೆಂಬುದು ಸೋನು ಅವರ ಕೊನೆ ಅಸೆ ಎಂದು ಹೇಳಿದರೆ ತಪ್ಪಾಗಲಾರದು. ಹೀಗಾಗಿ ರಾಕೇಶ್ ಮತ್ತು ಸೋನು ಅವರ ನಡುವೆ ಬಿಗ್ ಬಾಸ್ ಮನೆಯಲ್ಲಿ ಉತ್ತಮವಾದ ಬಾಂಡಿಂಗ್ ಬೆಳೆದಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top