fbpx
ಸಮಾಚಾರ

ಸದ್ದಿಲ್ಲದೇ ನಡೆಯುತ್ತಿದೆ ಕ್ರಾಂತಿ ಸಿನಿಮಾದ ಸ್ಪೆಷಲ್ ಹಾಡು! ಡಿಬಾಸ್ ಜೊತೆ ಹೆಜ್ಜೆ ಹಾಕುತ್ತಿರುವ ಪದ್ಮಾವತಿ ಯಾರು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ದರ್ಶನ್ ಕೂಡ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಭರದಿಂದ ಸಾಗುತ್ತಿದೆ. ಇವೆಲ್ಲದರ ಮದ್ಯೆ ಕ್ರಾಂತಿ ಸಿನಿಮಾದ ಒಂದು ಸಾಂಗ್ ಶೂಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

ಕ್ರಾಂತಿ ಸಿನಿಮಾ ಹೇಳಿ ಕೇಳಿ ದರ್ಶನ್ ಮತ್ತು ವಿ. ಹರಿಕೃಷ್ಣ ಅವರ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಚಿತ್ರ. ಹೀಗಾಗಿ ಈ ಸಿನಿಮಾದ ಹಾಡಿನ ಮೇಲೆ ಎಲ್ಲರ ಗಮನವಿದೆ. ಇದಲ್ಲದೆ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಇದೆ ಎಂದರೆ ಒಂದು ಸ್ಪೆಷಲ್ ಸಾಂಗ್ ಇದ್ದೆ ಇರುತ್ತೆ ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ಇಂತದ್ದೇ ಒಂದು ಸ್ಪೆಷಲ್ ಸಾಂಗ್ ನ ಚಿತ್ರೀಕರಣದಲ್ಲಿ ಕ್ರಾಂತಿ ತಂಡ ಭಾಗವಹಿಸಿದೆ ಎಂದು ಹೇಳಲಾಗುತ್ತಿದೆ.

ಕ್ರಾಂತಿ ಸಿನಿಮಾದ ಸ್ಪೆಷಲ್ ಸಾಂಗ್ ಎಂದರೆ ಅದು ‘ಡ್ಯಾನ್ಸ್ ವಿತ್ ಪದ್ಮಾವತಿ’. ಈ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಕೊಡಿಗೆಹಳ್ಳಿಯಲ್ಲಿ ಸೆಟ್‌ ಹಾಕಿ ಚಿತ್ರೀಕರಣಮಾಡಲಾಗುತ್ತಿದೆ. ಆದರೆ ಇದೀಗ ಈ ಹಾಡಿನಲ್ಲಿ ಪದ್ಮಾವತಿ ಯಾರು ಎಂಬುದು ಗೊಂದಲವಾಗಿದೆ. ಏಕೆಂದರೆ ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಹೀಗಾಗಿ ಈ ಹಾಡಿಗೆ ರಚಿತಾ ರಾಮ್ ಪದ್ಮಾವತಿಯಾಗಿ ಹೆಜ್ಜೆ ಹಾಕುತ್ತಿದ್ದಾರಾ ಅಥವಾ ಬೇರೆ ಯಾರಾದರು ಈ ಹಾಡಿನಲ್ಲಿ ಡಿಬಾಸ್ ಜೊತೆ ಜೋಡಿಯಾಗುತ್ತಿದ್ದಾರಾ ಎಂಬ ಸ್ಪಷ್ಟವಿಲ್ಲ. ಏಕೆಂದರೆ ಯಾರಿಗೂ ಕೂಡ ಹಾಡಿನ ಚಿತ್ರೀಕರಣ ನಡೆಯುವ ಜಾಗಕ್ಕೆ ಮೊಬೈಲ್ ತೆಗೆದುಕೊಂಡು ಹೋಗಬಾರದೆಂದು ಸಿನಿಮಾ ತಂಡ ತಿಳಿಸಿದೆ.

ಹೀಗಾಗಿ ಈ ಹಾಡಿನಲ್ಲಿ ಡಿಬಾಸ್ ಜೊತೆ ಯಾರು ಹೆಜ್ಜೆ ಹಾಕುತ್ತಿದ್ದಾರೆ ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಅಂದುಕೊಂಡಂತೆ ಸಿನಿಮಾದ ಚಿತ್ರೀಕರಣ ಮತ್ತು ಇನ್ನುಳಿದ ಕೆಲಸಗಳು ಬೇಗ ಮುಗಿದರೆ ಕ್ರಾಂತಿ ಸಿನಿಮಾ ಕನ್ನಡ ರಾಜ್ಯೋತ್ಸವದಂದು ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ರೆಡಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top