ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಜನರ ಗಮನ ಸೆಳೆದ ಟೂರ್ನಿ ಎಂದರೆ ಅದು ಐಪಿಎಲ್ ಮಾತ್ರ. ಕೋವಿಡ್ ಸಂಧರ್ಭದಲ್ಲೂ ಸಹ ಅತಿ ಹೆಚ್ಚು ಜನರನ್ನು ಇದು ತನ್ನತ್ತ ಆಕರ್ಷಿಸಿತ್ತು. ಆದರೆ ಅಭಿಮಾನಿಗಳಿಗೆ ಇದ್ದ ಬೇಸರ ಎಂದರೆ ಕಳೆದ ಎರಡು ವರ್ಷಗಳಿಂದ ಐಪಿಎಲ್ ಭಾರತ ಬಿಟ್ಟು ಬೇರೆ ದೇಶದಲ್ಲಿ ಆಯೋಜಿಸಲಾಗಿತ್ತು. ಆದರೆ ಇದೀಗ ಅಭಿಮಾನಿಗಳಿಗೆ ಬಿಸಿಸಿಐ ಶುಭ ಸುದ್ದಿ ನೀಡಿದ್ದಾರೆ.
“The next season of men’s IPL will also go back to the home and away format with all ten teams playing their home matches at their designated venues.”
– BCCI president Sourav Ganguly
It’s official! The Royal Challengers will be back at the Chinnaswamy Stadium. 🥳🤩#PlayBold pic.twitter.com/EYd5kkQdor
— Royal Challengers Bangalore (@RCBTweets) September 22, 2022
ಕೋವಿಡ್ ಕಾರಣದಿಂದಾಗಿ 2020ರಲ್ಲಿ ಟೂರ್ನಿ ಯುಎಇನಲ್ಲಿ ನಡೆದಿತ್ತು. ಇದಾದ ನಂತರ 2021 ರಲ್ಲಿ ಭಾರತದಲ್ಲಿ ನಡೆಸಬೇಕಂದು ತೀರ್ಮಾನಿಸಲಗಿತ್ತು.ಅದರಂತೆ ಭಾರತದಲ್ಲಿ ಟೂರ್ನಿ ಆರಂಭಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಇದನ್ನು ಸ್ಥಗಿತಗೊಳಿಸಿ 4 ತಿಂಗಳುಗಳ ಬಳಿಕ ಮತ್ತೆ ಯುಎಇನಲ್ಲಿ ಟೂರ್ನಿ ನಡೆಸಲು ನಿರ್ಧರಿಸಿದರು. ಇದಾದ ಬಳಿಕ 2022 ರಲ್ಲಿ ಭಾರತದ ಕೆಲವು ನಗರಗಳಾದ ಮುಂಬೈ, ಪುಣೆ, ಕೋಲ್ಕತಾ ಮತ್ತು ಅಹಮದಾಬಾದ್‌ನಲ್ಲಿ ನಡೆಸಲಾಗಿತ್ತು. ಆದರೆ 2023 ಐಪಿಎಲ್ ಅನ್ನು ಭಾರತದ 10 ನಗರಗಳು ಅಂದರೆ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ತವರಲ್ಲಿ ಐಪಿಎಲ್ ನಡೆಯಬೇಕೆಂದು ಬಿಸಿಸಿಐ ತೀರ್ಮಾನಿಸಿದೆ.
ಈ ಕುರಿತು ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ” ತಂಡಗಳು ತವರು, ತವರಿನಾಚೆ ಮಾದರಿಯಲ್ಲಿ ಪಂದ್ಯಗಳನ್ನು ಆಡಲಿವೆ. ಟೂರ್ನಿಯು ಕೇವಲ ಒಂದು ಇಲ್ಲವೇ ಎರಡು ನಗರಗಳಿಗೆ ಸೀಮಿತವಾಗದೆ ಎಲ್ಲಾ 10 ತಂಡಗಳ ತವರಿನಲ್ಲೂ ನಡೆಯಲಿದೆ ” ಎಂದು ತಿಳಿಸಿದರು. ಈ ಮೂಲಕ ನಮ್ಮ ಆರ್ ಸಿ ಬಿ ತಂಡದ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ತಮ್ಮ ತಂಡದ ಆಟವನ್ನು ತಮ್ಮ ತವರು ನೆಲೆಯಲ್ಲಿ ನೋಡಿ ಮತ್ತಷ್ಟು ತಮ್ಮ ತಂಡಕ್ಕೆ ಹುರಿದುಂಬಿಸಲು ಸಾಧ್ಯವಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
